ಬೀದರ:
ಶಿವಶರಣ ಹರಳಯ್ಯನವರ ಬಗ್ಗೆ ತಪ್ಪು ಮಾಹಿತಿ ನೀಡಿ ಕಾಯಕ ಶರಣರನ್ನು ಅವಮಾನಿಸಿದ ಕನ್ನೇರಿ ಕಾಡಸಿದ್ಧೇಶ್ವರ ಸ್ವಾಮಿ ವಿರುದ್ಧ ಕ್ರಮ ಜರುಗಿಸಬೇಕೆಂದು ಶ್ರೀ ಹರಳಯ್ಯ ಸಮಗಾರ ಸಮಾಜ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ಗುರುವಾರ ಕಚೇರಿ ಮುಂದೆ ಸಂಘಟನೆ ಪ್ರಮುಖರು ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರ ಮುಖಾಂತರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದ್ದಾರೆ.
ತಪ್ಪನ್ನು ತಿದ್ದಿಕೊಂಡು ಕ್ಷಮೆಯಾಚಿಸಿ ಸರಿಯಾದ ಹೇಳಿಕೆಯನ್ನು ಸಾರ್ವಜನಿಕವಾಗಿ ಕೊಡುವುದಾಗಿ ಹೇಳಿದ್ದ ಕನ್ನೇರಿ ಶ್ರೀಗಳು ಇಲ್ಲಿಯವರೆಗೂ ಹೇಳಿಕೆ ಕೊಡದೇ ನಮ್ಮ ಸಮಾಜವನ್ನು, ಸಮಾಜದ ಜನರನ್ನು ಅಪಮಾನಿಸುತ್ತಿದ್ದಾರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಸುಭಾಷ ಹಮಿಲ್ಪೂರೆ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟಿಳ್ಳೇಕರ್, ಪ್ರಮುಖರಾದ ಸಂಜೀವಕುಮಾರ ದಾಮಾ, ಗಾಂಧಿ ನಿನ್ನೇಕರ್, ಲಲಿತಾತಾಯಿ ವಾಘಮಾರೆ, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾವತಿ ತುಗಾಂವೆ, ವಾಮನರಾವ ಕಾಂಬ್ಳೆ, ಸಿದ್ರಾಮ ಚೌಧರಿ, ಚಂದ್ರಪ್ಪ ಹಮಿಲಪುರೆ, ಬಲಜೀತ್ ಚಿಲ್ಲರ್ಗಿ, ಪಂಡರಿ ಎಖೆಳ್ಳಿಕರ್, ಗೋವಿಂದ ಟಿಳ್ಳೆ, ಚಂದ್ರಶೇಖರ ಪಂಡರಿ, ಶಿವಾಜಿ ಕನೇರಿ, ಕಾಮಜಿ ಬೋರೆಗಿಡ, ಅಂಬದಾಸ ಕನೇರಿ, ಸಂತೋಷ ಉದ್ಕರ್ ಮತ್ತಿತರರು ಉಪಸ್ಥಿತರಿದ್ದರು.
