‘ಕಾಯಕ ಕಲಿ’ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಬಸವ ಯೋಗೇಶ್

ಬಸವ ಮೀಡಿಯಾ
ಬಸವ ಮೀಡಿಯಾ

ನಂಜನಗೂಡು

ಮೈಸೂರು ಪ್ರಾಂತ್ಯದಲ್ಲಿ ಬಸವ ತತ್ವಕ್ಕೆ ದುಡಿಯುತ್ತಿರುವ ಬಸವ ಯೋಗೇಶ್ ಅವರಿಗೆ ಕೂಡಲಸಂಗಮದ ಬಸವ ಧರ್ಮ ಪೀಠವು ರಾಜ್ಯಮಟ್ಟದ ಕಾಯಕ ಕಲಿ ಪ್ರಶಸ್ತಿಯನ್ನು ನೀಡಿದೆ.

ನಂಜನಗೂಡಿನ ಶ್ರೀಮತಿ ಬಸಮಣ್ಣಿ ಮತ್ತು ಬಸವಣ್ಣನವರ ಪುತ್ರ ಬಸವ ಯೋಗೇಶ್ ಡಿಪ್ಲೋಮೊ ವ್ಯಾಸಂಗ ಮಾಡಿ ಕಾರ್ಖಾನೆಗಳಿಗೆ,ಕಂಪನಿಗಳಿಗೆ ಕಾರ್ಮಿಕರನ್ನ ಪೂರೈಸುವ ಉದ್ಯಮಿಯಾಗಿದ್ದಾರೆ.

ಇವರು ಸಿನಿಮಾ ರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಮತ್ತು ಹಲವು ಟಿ.ವಿ ಧಾರವಾಹಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಆಧ್ಯಾತ್ಮದ ಚಿಂತನೆಯ ಮನೋಭಾವ ಬೆಳೆಸಿಕೊಂಡು ಶರಣರ ವಿಚಾರಧಾರೆಗಳನ್ನು ಅರಿತುಕೊಳ್ಳುತ್ತಾ ಅದರಂತೆಯೇ
ಬದುಕುತ್ತಿದ್ದಾರೆ.

ಅವರ ಶ್ರಮದಿಂದ ನಂಜನಗೂಡಿನ ಹಲವಾರು ಬಡಾವಣೆಗಳಿಗೆ, ರಸ್ತೆಗಳಿಗೆ ಶರಣರ ಹೆಸರನ್ನು ಇಡಲಾಗಿದೆ. ಶರಣರ ಒಕ್ಕೂಟದ ಮಾರ್ಗದರ್ಶಕರಾಗಿ ಶರಣರ ಜಯಂತಿಗಳನ್ನು ವಿವಿಧ ಸಮುದಾಯದವರೊಂದಿಗೆ ಆಚರಿಸಿತ್ತಾ ಬಂದಿದ್ದಾರೆ.

ಈ ಪ್ರಾಂತ್ಯದಲ್ಲಿ ಶರಣರ ಚಿಂತನೆಗಳು ಹೆಚ್ಚಾಗಿ ನಡೆಯದೇ ಇದ್ದ ಕಾಲವಿತ್ತು. ನಂಜನಗೂಡು, ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಇತರ ತಾಲೂಕುಗಳಲ್ಲಿ ಶರಣ ಚಿಂತನೆಗಳನ್ನ ಪಸರಿಸಲು ದುಡಿಯುತ್ತಿರುವ ಬಸವ ಯೋಗೇಶ್ ಆ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತಿದ್ದಾರೆ.

ಕೋವಿಡ್ ಕಾಲದಲ್ಲಿ ಶಿವಯೋಗದ ಚಿಂತನೆಯಿಂದ ಮಾನಸಿಕ ನೆಮ್ಮದಿ ಪಡೆಯಬಹುದೆಂಬುದನ್ನ ಎಲ್ಲರಿಗೂ ಅರಿವು ಮೂಡಿಸಿದ್ದರು.

ಬಸವ ಯೋಗೇಶ್ ಅವರು ಶರಣರ ಒಕ್ಕೂಟದ ಮಾರ್ಗದರ್ಶಕರಾಗಿ, ನಂಜನಗೂಡು ಕಾಯಕಯೋಗಿ ಬಸವೇಶ್ವರ ಸಂಘಟನೆಯ ಗೌರವಾಧ್ಯಕ್ಷರಾಗಿ, ವಿಶ್ವ ಬಸವ ಸೇನೆಯ ಅಧ್ಯಕ್ಷರಾಗಿ, ಬಸವ ಮಾಸ ಸಮಿತಿಯ ಸಕ್ರಿಯ ಸದಸ್ಯರಾಗಿ ದುಡಿಯುತ್ತಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *