ಮುಂದಿನ ವರ್ಷದಿಂದ ಕಾಯಕ ಶರಣರ ಹೆಸರಿನಲ್ಲಿ ಪ್ರಶಸ್ತಿ: ಸಚಿವ‌ ಶಿವರಾಜ ತಂಗಡಗಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ್‌ನಲ್ಲಿ ಡೋಹರ ಕಕ್ಕಯ್ಯ ಸ್ಮಾರಕ ನಿರ್ಮಿಸಲು ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಬೆಂಗಳೂರು

ಮುಂದಿನ ವರ್ಷದಿಂದ ಐವರು ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ‌ ಶಿವರಾಜ ಎಸ್. ತಂಗಡಗಿ ಘೋಷಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಐವರು ಶರಣರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಸಂಬಂಧ ಸಮಿತಿಯನ್ನು ರಚಿಸಿ, ಮುಂದಿನ ವರ್ಷದಿಂದ ಪ್ರಶಸ್ತಿ ನೀಡಲಾಗುವುದು. ಬೀದರ್ ನಲ್ಲಿ ದೋಹರ್ ಕಕ್ಕಯ್ಯ ಅವರ ಸ್ಮಾರಕ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತಿಯೊಂದು ಸಮಾಜದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ. ಆದರೆ ಅದೆಲ್ಲವನ್ನು ಪಕ್ಕಕ್ಕಿಟ್ಟು ಮುನ್ನಡೆದಾಗ ಸಮಾಜಕ್ಕೆ ಒಳಿತಾಗುತ್ತದೆ. ಒಗ್ಗಟ್ಟಿನಿಂದ ಆಯಾ ಸಮುದಾಯಗಳು ಗಟ್ಟಿಯಾಗುತ್ತವೆ. ಸಂಘಟನೆ ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.

ಕಾಯಕ ಶರಣರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕೆಂಬ ವೇದಿಕೆ ಮೇಲಿದ್ದ ಅತಿಥಿಗಳ ಮನವಿಗೆ ಸ್ಪಂದಿಸಿದ ಶಿವರಾಜ ತಂಗಡಗಿ, ‘ಕಾಯಕ ಶರಣರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕುರಿತು ಸಮಿತಿ ರಚಿಸಿ, ಮುಂದಿನ ವರ್ಷದಿಂದ ಪ್ರಶಸ್ತಿಯನ್ನು ನೀಡಲಾಗುವುದು.

ಬೀದರ್‌ನಲ್ಲಿ ಡೋಹರ ಕಕ್ಕಯ್ಯ ಸ್ಮಾರಕ ನಿರ್ಮಿಸಲು ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ಬಸವಹರಳಯ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿದ್ದರು. ಅಖಿಲ ಕರ್ನಾಟಕ ಡೋಹರ ಕಕ್ಕಯ್ಯ ಸಮಾಜದ ಅಧ್ಯಕ್ಷ ಸಂತೋಷ್ ಸುರೇಂದ್ರ ಸವಣೂರು, ಮಾದಿಗ ಸಮುದಾಯದ ಎಂ.ಗುರುಮೂರ್ತಿ, ಆದಿಜಾಂಬವ ಸಮಾಜದ ಕಾರ್ಯಾಧ್ಯಕ್ಷ ಸಿದ್ದರಾಕು, ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *