ಕೆಜಿಎಫ್
ಶ್ರಾವಣ ಮಾಸದ ನಾಲ್ಕನೇಯ ಸೋಮವಾರ ವಿಶೇಷ ಕಾರ್ಯಕ್ರಮ ಶರಣ ಸಂಗಮ ಕೆಜಿಎಫ್ ನಲ್ಲಿ ನಡೆಯಿತು.
ಶರಣರ ದೃಷ್ಟಿಯಲ್ಲಿ ದಾಂಪತ್ಯ ಜೀವನ ಉಪನ್ಯಾಸವನ್ನು ಶರಣ ದಂಪತಿಗಳಾದ ವಚನ ಕುಮಾರಸ್ವಾಮಿ ಹಾಗೂ ರೂಪಾ ಕುಮಾರಸ್ವಾಮಿ ಅವರು ನೀಡಿದರು.
ಸ್ವಾಗತವನ್ನು ಬಸವ ಸಮಿತಿ ಸಂಘಟನಾ ಕಾರ್ಯದರ್ಶಿಗಳಾದ ಶರಣ ಸಂಜೀವ ರೆಡ್ಡಿ ಮೇಟಿ ಹಾಗೂ ಉಪನ್ಯಾಸ ನೀಡಿದ ಅತಿಥಿಗಳ ಪರಿಚಯವನ್ನು ಖಜಾಂಚಿಗಳಾದ ಶರಣ ಶರಣಪ್ಪ ಮಾಡಿದರು. ನಿರೂಪಣೆಯನ್ನು ಪ್ರಧಾನ ಕಾರ್ಯದರ್ಶಿಗಳಾದ ಶರಣ ಬಸವರಾಜ ಹೂಗಾರ ಮಾಡಿದರು, ಅತಿಥಿಗಳಾಗಿ ಶರಣ ನರೇಂದ್ರ ಗೌರವ ಅಧ್ಯಕ್ಷರು, ಮತ್ತು ಶರಣೆ ಸಂಗೀತಾ ನರೇಂದ್ರ ಅಧ್ಯಕ್ಷರು ಅಕ್ಕನ ಬಳಗ ಅವರು ವೇದಿಕೆಯಲ್ಲಿದ್ದರು.
ಸಭಾಧ್ಯಕ್ಷತೆಯನ್ನು ಅಧ್ಯಕ್ಷರಾದ ಶರಣ ಮಂಜುನಾಥ ಅವರು ವಹಿಸಿದ್ದರು.
ವಂದನಾರ್ಪಣೆಯನ್ನು ಉಪಾಧ್ಯಕ್ಷರಾದ ಶರಣ ಸಂತೋಷ ಬಿರಾದಾರ ಅವರು ಮಾಡಿದರು.