ಕೋಲಾರ
ಬಸವ ಸಮಿತಿ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ-2024 ಮತ್ತು ಬಸವ ಸಮಿತಿ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮವು ಕೆ.ಜಿ.ಎಫ್ ನ ಬೆಮೆಲ್ ಕಲಾಕ್ಷೇತ್ರದ ಭಾನುವಾರ ಅದ್ಧೂರಿಯಾಗಿ ನಡೆಯಿತು.
ವಿಶ್ವಗುರು, ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯ ಕೊಪ್ಪಳ ಗವಿಮಠ ಸಂಸ್ಥಾನದ ಪೀಠಾಧ್ಯಕ್ಷ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಶರಣ ಅಶೋಕ ಲೋಣಿ ಪ್ರಧಾನ ಸಂಪಾದಕತ್ವದ ಸುವರ್ಣ ಶರಣಾಮೃತ ಸ್ಮರಣ ಸಂಚಿಕೆಯನ್ನು ಸ್ವಾಮೀಜಿ ಬಿಡುಗಡೆ ಮಾಡಿ ಆಶೀರ್ವಚನ ನೀಡುತ್ತಾ, ತಾವು ಕಷ್ಟಪಟ್ಟರೂ ಸಂತೋಷದ ಜೀವನವನ್ನು ಬಸವಾದಿ ಶರಣರು ನಮಗೆಲ್ಲ ಕೊಟ್ಟಿದ್ದಾರೆ. ಅವರ ನೆನಹು ನಾವೆಲ್ಲ ಸದಾ ಮಾಡೋಣ, ಅವರ ಆದರ್ಶದ ದಾರಿಯಲ್ಲಿ ಸಾಗೋಣ ಎಂದರು.

ಮುಖ್ಯ ಅತಿಥಿಗಳಾಗಿದ್ದ ಬಾಹ್ಯಾಕಾಶ ವಿಜ್ಞಾನಿ ಡಾ.ಎ.ಎಸ್. ಕಿರಣ್ಕುಮಾರ ಅವರು ಅಶೋಕ್ ಲೋಣಿ ಶರಣರನ್ನು ಸತ್ಕರಿಸಿದರು. ಕೆ.ಜಿ.ಎಫ್ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಬೆಮೆಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ಎಂ. ಸುಬ್ರಮಣ್ಯಂ, ಬಸವ ಸಮಿತಿ ಅಧ್ಯಕ್ಷ ಎಂ.ಮಂಜುನಾಥ, ಅಕ್ಕನ ಬಳಗ ಅಧ್ಯಕ್ಷೆ ಸಂಗೀತಾ ನರೇಂದ್ರ ಭಾಗವಹಿಸಿದ್ದರು.
ಬಸವ ಸಮಿತಿ ಗೌರವಾಧ್ಯಕ್ಷ ಶರಣ ಕೆ.ಬಿ.ನರೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಬಸವೇಶ್ವರ ಭಜನಾ ಮಂಡಳಿ ಮತ್ತು ಗಾನ ಕೋಗಿಲೆ ತಂಡದಿಂದ ವಚನ ಗಾಯನ, ಶೋಭಾ ಆರಟ್ಟಿ
ತಂಡದಿಂದ ಬಸವಾದಿ ಶರಣರ ನೃತ್ಯರೂಪಕ, ಬಿಇಸಿಎಸ್ ಉಪಾಧ್ಯಕ್ಷ ಟಿ.ಎಸ್.ಗುರುರಾಜ ದಾಸೋಹಸೇವೆ ಗೈದರು.
ಇದೇ ಸಂದರ್ಭದಲ್ಲಿ ಬಸವಸಮಿತಿ ಸಂಸ್ಥಾಪಕ ಕಾರ್ಯದರ್ಶಿ ಜೆ.ಎಸ್. ಚನ್ನಬಸಪ್ಪ, ಮಾಜಿ ಸಹಾಯಕ ಕಾರ್ಯದರ್ಶಿ ಬಿ.ಡಿ.ಹಿರೇಮಠ, ಮಾಜಿ ಕಾರ್ಯದರ್ಶಿ ವಿರೂಪಾಕ್ಷಪ್ಪ ಕುಲಕರ್ಣಿ, ಅಕ್ಕನ ಬಳಗ ಮಾಜಿ ಉಪಾಧ್ಯಕ್ಷೆ ಜಯಮ್ಮ ಹಿರೇಮಠ, ಮಾಜಿ ಸಹಾಯಕ ಕಾರ್ಯದರ್ಶಿ ಜಯಶ್ರೀ ಸರೂರು ಅವರನ್ನು ಸನ್ಮಾನಿಸಲಾಯಿತು.
ಶರಣು ಶರಣಾರ್ಥಿ
It gives pleasure to see you in Basav samiti activities and social service. Seeing you in BEML rangamandir, we remember old days at KGF. God bless you with happiness and good health.
ಶರಣಾಥಿ೯ ಹಾಗೂ ಭಿನಂದನೆಗಳು ಅಶೋಕ ಲೋಣಿ ಶರಣರಿಗೆ💐🌹🙏