ಖಾಸಗಿ ಕಂಪನಿಗಳಲ್ಲಿ ಮೀಸಲಾತಿ: ಕನ್ನಡಿಗರ ಕ್ಷಮೆ ಕೇಳಿದ ಫೋನ್‌ಪೆ ಸಿಇಒ ಸಮೀರ್‌ ನಿಗಂ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು:

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿದ್ಧ ಫೋನ್‌ಪೆ ಸಂಸ್ಥಾಪಕ ಮತ್ತು ಸಿಇಒ ಸಮೀರ್‌ ನಿಗಂ ಕನ್ನಡಿಗರ ಕ್ಷಮೆ ಯಾಚಿಸಿದ್ದಾರೆ.

‘ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ. ಕರ್ನಾಟಕ, ಕನ್ನಡಿಗರನ್ನು ಅವಮಾನಿಸಲು ಹಾಗೆ ಹೇಳಿರಲಿಲ್ಲ. ಒಂದೊಮ್ಮೆ ನನ್ನ ಮಾತಿನಿಂದ ಬೇಸರವಾಗಿದ್ದರೆ ಬೇಷರತ್ ಕ್ಷಮೆ ಕೇಳುತ್ತೇನೆ’ ಎಂಬ ಅವರ ಹೇಳಿಕೆಯನ್ನು ಫೋನ್‌ಪೆ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ಜೊತೆಗೆ ಈ ವಿಷಯದ ಮೇಲೆ ಒಂದು ಪತ್ರಿಕಾ ಪ್ರಕಟಣೆಯನ್ನು ಕೂಡ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಸರಕಾರ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲು ಪ್ರಸ್ತಾವಿಸಿದಾಗ ನಿಗಂ ಅವರು ‘ಕರ್ನಾಟಕ ಅಂದರೆ ಕನ್ನಡಿಗರು ಮಾತ್ರವೇ?’ ಎಂದು ಪ್ರಶ್ನಿಸಿದ್ದರು.

ಜುಲೈ 17ರಂದು ಸಮೀರ್ ತಮ್ಮ ಎಕ್ಸ್ ಖಾತೆಯಲ್ಲಿ, ‘ನನಗೀಗ 46 ವರ್ಷ. ಕಳೆದ 15 ವರ್ಷಗಳಿಂದ ನಾನು ಕರ್ನಾಟಕದಲ್ಲಿ ಇರಲೇ ಇಲ್ಲ. ನನ್ನ ಅಪ್ಪ ನೌಕಾಪಡೆಯಲ್ಲಿದ್ದರು. ದೇಶದ ಎಲ್ಲೆಡೆ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಕೆಲಸ ಮಾಡಲು ಅವರ ಮಕ್ಕಳಿಗೆ ಅವಕಾಶ ಇರಬಾರದೇ? ನಾನು ಕಂಪನಿಗಳನ್ನು ನಿರ್ಮಿಸಿದ್ದೇನೆ. 25 ಸಾವಿರಕ್ಕಿಂತ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ. ಕರ್ನಾಟಕದಲ್ಲಿ ಕೆಲಸ ಮಾಡುವ ಅವಕಾಶ ನನ್ನ ಮಕ್ಕಳಿಗೆ ಇರಬಾರದೇ? ನಾಚಿಕೆಯಾಗಬೇಕು’ ಎಂದಿದ್ದರು.

ಅವರ ನಿಲುವಿಗೆ ವ್ಯಾಪಕ ಟೀಕೆ ವ್ಯಕ್ತವಾಗಿ, ಫೋನ್‌ಪೆ ಬಳಸುವುದನ್ನು ನಿಲ್ಲಸಿ ಎಂಬ ಅಭಿಯಾನ ಕೂಡ ಶುರುವಾಗಿತ್ತು. ಇದರ ಹಿನ್ನಲೆಯಲ್ಲೇ ಸಮೀರ್ ಕ್ಷಮೆಯಾಚಿಸಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *