ಕೊಡಗು
ಕಲ್ಯಾಣ ಗೀತೆಯೊಂದಿಗೆ ಸಮಾವೇಶ ಮಂಗಲ
ಜಮೀರ್ ಅಹ್ಮದ್ ಅವರು ಶರಣು ಸಮರ್ಪಣೆ ಮಾಡಿದರು.
ಗಂಗಾ ಮಾತಾಜಿ, ಭಾಲ್ಕಿ ಶ್ರೀ ಆಶೀರ್ವಚನ
ಕೂಡಲಸಂಗಮ ಬಸವ ಧರ್ಮ ಪೀಠದ ಡಾ. ಗಂಗಾ ಮಾತಾಜಿ ಆಶೀರ್ವಚನ ನೀಡುತ್ತಾ, ಬೆಂಗಳೂರಲ್ಲಿ ನಡೆಯುವ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಕೊಡಗಿನ ಬಸವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಿದರು.
ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡುತ್ತಾ, ಪ್ರತಿ ಮನೆಯಲ್ಲಿ ಪರಮಗುರು, ಧರ್ಮಗುರು, ವಿಶ್ವಗುರು ಬಸವಣ್ಣನವರ ಭಾವಚಿತ್ರ ಕಡ್ಡಾಯವಾಗಿ ಹಾಕಬೇಕು.
ಅಂಗದ ಮೇಲೆ ಲಿಂಗ ಧರಿಸಬೇಕು,ನಿತ್ಯ ಲಿಂಗಪೂಜೆ ಮಾಡಬೇಕು. ನಿಮ್ಮ ಕುಟುಂಬದ ಯಾವುದೇ ಆಮಂತ್ರಣ ಪತ್ರಿಕೆಯಲ್ಲಿ ‘ಓಂ ಶ್ರೀ ಗುರುಬಸವ ಲಿಂಗಾಯ ನಮಃ’ ಎಂಬ ಮಂತ್ರದೊಂದಿಗೆ ಆರಂಭಿಸಬೇಕು. ಯಾರಿಗಾದರೂ ಕಾಣಿಕೆಗಳನ್ನು ಕೊಡುವುದಿದ್ದರೆ ವಚನಗಳ ಪುಸ್ತಕವನ್ನು ಕೊಡಬೇಕು, ಇದು ಮನೆ-ಮನಗಳನ್ನು ಬೆಳಗುತ್ತದೆ.
ಪ್ರತಿನಿತ್ಯ ಲಿಂಗ ಪೂಜೆ ಮಾಡಿದ ನಂತರ ಐದು ವಚನಗಳನ್ನು ಓದಬೇಕು, ಇದರಿಂದ ತಂತಾನೆ ಬಸವ ಸಂಸ್ಕೃತಿ ಆಚರಣೆಗೆ ಬರುತ್ತದೆ. ಇಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ನಂದಿ ಮೂರ್ತಿ ಇದೆ, ಅದರೊಂದಿಗೆ ಬಸವಮೂರ್ತಿಯನ್ನು ಸ್ಥಾಪಿಸಿರಿ.
ಉಪನ್ಯಾಸ: ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಆಲೂರ
ಅಭಿಯಾನದ ಈ ದಿನ ಕೊಡಗಿನ ಇತಿಹಾಸದಲ್ಲಿ ನೆನಪಿಡುವಂಥದು. ಬಸವಾದಿ ಶರಣರ ವಚನಗಳ ಅಧ್ಯಯನದಿಂದ ನಮ್ಮ ವ್ಯಕ್ತಿತ್ವ ದೊಡ್ಡದಾಗುತ್ತದೆ. ದೇಶದ ಇತಿಹಾಸದಲ್ಲಿ 12ನೇ ಶತಮಾನ ಅತ್ಯಂತ ಮಹತ್ವದ ಘಟ್ಟ. ಬಸವಣ್ಣ, ಬಸವಾದಿ ಶರಣರ ಚಿಂತನೆ ನಮಗೆಲ್ಲ ಜೀವನ ಮೌಲ್ಯಗಳು. ಶರಣರ ಕಾಲದಲ್ಲಿ ಅವರು ಸಾರಿದ ತತ್ವ ಕಾಯಕ, ದಾಸೋಹ ಕಡ್ಡಾಯವಾಗಿ ಎಲ್ಲರೂ ಮಾಡಲೇಬೇಕಿತ್ತು.
ಬಸವಣ್ಣನವರು ವಚನವೊಂದರಲ್ಲಿ ತಮ್ಮನ್ನು ಬತ್ತಿಗೆ ಹೋಲಿಸಿಕೊಂಡು ಅಲ್ಲಮಪ್ರಭುಗಳನ್ನು ಜ್ಯೋತಿಗೆ ಹೋಲಿಸಿ ತಮ್ಮ ನಿರಾಭಾವ ವ್ಯಕ್ತಿತ್ವವನ್ನು ಸಾಬೀತುಪಡಿಸಿದ್ದಾರೆ. ಸಮಾನತೆಗಾಗಿ ಬಸವಾದಿ ಶರಣರು ಜೀವ ತೇದರು. ಇಲ್ಲಿ ಕುಳಿತ ನಾವೆಲ್ಲ ಬಸವಾದಿ ಶರಣರ ವಾರಸುದಾರರು. ಬಹುದೊಡ್ಡ ಹೆಜ್ಜೆ ಈ ಅಭಿಯಾನ. ಉತ್ತರ ಕರ್ನಾಟಕದಿಂದ ಸ್ವಾಮೀಜಿಗಳು ಬಂದಿದ್ದಾರೆ, ಇದು ಕೊಡಗಿನ ಭಾಗ್ಯ. ಕೊಡಗು ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಮಾಡುವ ಪ್ರಯತ್ನ ಸಾಗಿದೆ.

ಪೂಜ್ಯ ಬಸವೇಶ್ವರ ಮಾತಾಜಿ ಅವರಿಂದ ಅನುಭಾವ.
ವಚನ ಎಂದರೆ ತಪ್ಪದೇ ಇರುವಂತಹ ಮಾತುಗಳು. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಬಸವಾದಿ ಶರಣರ ವಚನಗಳು ಪೂರಕ. ಮಕ್ಕಳಿಗೆ ನಮ್ಮ ಧಾರ್ಮಿಕ ಸಂಸ್ಕಾರಗಳನ್ನು ಕೊಡಬೇಕು, ಲಿಂಗನಿರೀಕ್ಷಣೆಗೆ ಮಕ್ಕಳನ್ನು ಹಚ್ಚಬೇಕು. ಅನುಭವ ಮಂಟಪದ 770 ಜನ ಅಮರಗಣಂಗಳ ತತ್ವ ಸಿದ್ಧಾಂತ ಜನರಿಗೆ ತಿಳಿಸಲು ಈ ಅಭಿಯಾನ.

ಗದಗ ತೋಂಟದಾರ್ಯ ಶ್ರೀಗಳಿಂದ ಆಶೀರ್ವಚನ
ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದರಷ್ಟೇ ಸಾಲದು. ಅದಕ್ಕಾಗಿ ಎಲ್ಲಾ ಲಿಂಗಾಯತ, ಬಸವಪರ ಸಂಘಟನೆಗಳ ಮೂಲಕ ಬಸವತತ್ವ ಪ್ರಸಾರ ಯೋಜನೆ ಹಾಕಿಕೊಂಡು, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಈ ಅಭಿಯಾನ ನಡೆಸಲಾಗುತ್ತಿದೆ.
ಸಾರ್ವಜನಿಕ ವೇದಿಕೆ ಕಾರ್ಯಕ್ರಮ
ಕೊಡ್ಲಿಪೇಟೆ, ಕಿರಿಕೊಡ್ಲಿ ಶಾಲಾ ಆವರಣದಲ್ಲಿ ಇದೀಗ ಆರಂಭಗೊಂಡಿದೆ.



ಕೊಡ್ಲಿಪೇಟೆಯ ಪ್ರಮುಖ ಬೀದಿಗಳಲ್ಲಿ ಬಸವ ರಥದ ಮೆರವಣಿಗೆ ಸಾಗಿ ಬಂತು.


ಗಂಗಾ ವೀರಶೈವ ಸಮಾಜದ ಶರಣೆಯರು ಬಸವ ಪ್ರಾರ್ಥನೆಯನ್ನು ಮಾಡಿದರು.
ಕೊಡಗಿನಲ್ಲಿ ಶುರುವಾದ ಅರ್ಧ ದಿನದ ಅಭಿಯಾನ
ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಸರ್ವರನ್ನು ಸ್ವಾಗತಿಸಿದರು.
ವಿರಾಜಪೇಟೆಯ ಪೂಜ್ಯ ಶಾಂತಮಲ್ಲಿಕಾರ್ಜುನ ಶ್ರೀಗಳು ಆಶಯ ನುಡಿಗಳನ್ನು ಆಡಿದರು.
ಜ್ಯೋತಿ ಬೆಳಗಿಸಿ, ಬಸವ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಪೂಜ್ಯರು, ಗಣ್ಯರು ಸಮಾರಂಭ ಉದ್ಘಾಟಿಸಿದರು.