ಕೊಪ್ಪಳ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ 2025ಕ್ಕೆ ಶ್ರೀ ಗವಿಮಠದ ಉಚಿತ ಪ್ರಸಾದ ನಿಲಯದಲ್ಲಿರುವ ಸಾವಿರಾರು ವಿದ್ಯಾರ್ಥಿಗಳು ಮಠದ ಆವರಣದಲ್ಲಿ ಮೇಣದಬತ್ತಿ ಬೆಳಗಿಸಿ ದೀಪದೊಂದಿಗೆ ಆಹ್ವಾನ ನೀಡಿದ್ದಾರೆ.
ಅಜ್ಜನ ಜಾತ್ರೆಗೆ ಬನ್ನಿ 2025 ಎಂದು ಮೇಣದಬತ್ತಿ ದೀಪದೊಂದಿಗೆ ನೃತ್ಯ ಮಾಡುತ್ತಾ ಆಹ್ವಾನ ನೀಡಿದ್ದಾರೆ. ಅಜ್ಜನ ಜಾತ್ರೆಗೆ ಬನ್ನಿ 2025 ಎನ್ನುವ ಆಕಾರದಲ್ಲಿ ನಿಂತು ಭಕ್ತರನ್ನು ಆಹ್ವಾನಿಸಿದರು.
ಈ ದೃಶ್ಯವನ್ನು ಡ್ರೋನ್ ಕ್ಯಾಮರಾದಲ್ಲಿ ಮನಮೋಹಕವಾಗಿ ಸೆರೆ ಹಿಡಿಯಲಾಗಿದೆ. ಸುಮಾರು 1500 ಮಕ್ಕಳು ಭಾಗವಹಿಸಿದ್ದು, 3000 ದೀಪ ಬೆಳಗಿಸಿದರು.

