ಒಗ್ಗಟ್ಟಿನಿಂದ ಅಭಿಯಾನ ಯಶಸ್ವಿಗೊಳಿಸಲು ಕೊಪ್ಪಳದಲ್ಲಿ ನಿರ್ಣಯ

ಕೊಪ್ಪಳ

ಸೆಪ್ಟಂಬರ್ 8 ನಗರಕ್ಕೆ ಆಗಮಿಸುವ ‘ಬಸವ ಸಂಸ್ಕೃತಿ ಅಭಿಯಾನ’ವನ್ನು ಯಶಸ್ವಿಗೊಳಿಸಲು ಗುರುವಾರ ಪೂರ್ವಭಾವಿ ಸಭೆ ನಡೆಯಿತು.

ಲಿಂಗಾಯತ ಮಠಾಧೀಶರ ಒಕ್ಕೂಟ ಮತ್ತು ಬಸವಪರ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಯಲಿರುವ ಅಭಿಯಾನದ ಕುರಿತಾಗಿ ಹಲವಾರು ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಅಂದು ಬೆಳಿಗ್ಗೆ ಶಾಲಾ ಕಾಲೇಜುಗಳಲ್ಲಿ ನಡೆಯಲಿರುವ ವಿದ್ಯಾರ್ಥಿಗಳೊಂದಿಗಿನ ಮುಕ್ತ ಸಂವಾದದ ಬಗ್ಗೆ, ಹಾಗೂ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಂತರ ಸಾರ್ವಜನಿಕ ವೇದಿಕೆ ಕಾರ್ಯಕ್ರಮ ನಡೆಸುವ ಬಗ್ಗೆ ಅನೇಕ ಬಸವ ಸಂಘಟನೆಗಳ ಮುಖಂಡರು ಸಲಹೆ ನೀಡಿದರು. ಸಮಾನ ಮನಸ್ಕರೆಲ್ಲರೂ ಸೇರಿ ಒಮ್ಮತ, ಒಗ್ಗಟ್ಟಿನಿಂದ ಎಲ್ಲ ಕಾರ್ಯಗಳನ್ನು ನಿರ್ವಹಿಸಲು ನಿರ್ಧರಿಸಲಾಯಿತು.

192
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...

ಕೊಪ್ಪಳ ಜಿಲ್ಲೆಯ ಲಿಂಗಾಯತ ಮಠಾಧೀಶರು, ಬಸವ ಸಂಘಟನೆಗಳು, ಎಲ್ಲಾ ಲಿಂಗಾಯತ ಕಾಯಕ ಸಮುದಾಯಗಳ ಮುಖ್ಯಸ್ಥರ ಹಾಗೂ ಜನಪ್ರತಿನಿಧಿಗಳ ಒಳಗೊಂಡು ಶೀಘ್ರದಲ್ಲೇ ವಿಸ್ತೃತ ಸಭೆಯನ್ನು ಕರೆದು ಅವರನ್ನೆಲ್ಲ ಅಭಿಯಾನದಲ್ಲಿ ಪಾಲ್ಗೊಳಿಸಲು, ಸಂಪನ್ಮೂಲ ಸಂಗ್ರಹಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಗವಿಸಿದ್ದಪ್ಪ ಕೊಪ್ಪಳ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಸಂಗಮೇಶ ಕಲಹಾಳ, ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ ಸಸಿಮಠ, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ನಿರ್ಮಲಕ್ಕ ಬಳ್ಳೊಳ್ಳಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಗೌಡ ಹೊಗರನಾಳ, ಜಾ.ಲಿಂ.ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಶೇಖರ ಇಂಗಳದಾಳ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅರ್ಚನಾ ಸಸಿಮಠ, ಲಿಂಗಾಯತ ಧರ್ಮ ಮಹಾಸಭಾ ರಾಜ್ಯಾಧ್ಯಕ್ಷ ಈಶ್ವರ ಲಿಂಗಾಯತ, ತಾಲೂಕು ಘಟಕದ ಅಧ್ಯಕ್ಷ ದಾನಪ್ಪ ಶೆಟ್ಟರ, ಪ್ರಧಾನ ಕಾರ್ಯದರ್ಶಿ ಶರಣಬಸನಗೌಡ ಪಾಟೀಲ, ಕೊಪ್ಪಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ನಾಲ್ವಾಡ, ಪ್ರಧಾನ ಕಾರ್ಯದರ್ಶಿ ಮಂಜುಳಾ ಹುರಕಡ್ಲಿ, ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಗುಡದಪ್ಪ ಹಡಪದ, ಶರಣ ಸಾಹಿತ್ಯ ಪರಿಷತ್ತಿನ ಅರುಣಾ ನರೇಂದ್ರ ಪಾಟೀಲ,
ಬಸವರಾಜಪ್ಪ ಇಂಜನಿಯರ್, ವಿಶ್ವನಾಥ ನಿಲೋಗಲ್ಲ, ಯುವ ಮುಖಂಡ ಗವಿಸಿದ್ದಪ್ಪ ಹಂಡಿ, ರಾಮು ಪೂಜಾರ, ಆನಂದ ಹಳ್ಳಿಗುಡಿ, ರಾಷ್ಟ್ರೀಯ ಬಸವದಳದ ಶಿವಬಸಯ್ಯ ವೀರಾಪುರ, ವೀರಣ್ಣ ಕೊರ್ಲಳ್ಳಿ, ಬಸವಶ್ರೀ ಸೋಮನಾಳ ಮತ್ತಿತರರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *