ಕೊಪ್ಪಳ
ಇಂದಿನ ದಿನಮಾನಗಳಲ್ಲಿ ಸಾಮಾಜಿಕ ವ್ಯವಸ್ಥೆ ವಿಘಟನೆಗೊಂಡಿದೆ. ಅದು ಸೂಕ್ತ ರೀತಿಯಲ್ಲಿ ಸಂಘಟಿತಗೊಂಡು ಆರೋಗ್ಯಕರವಾಗಿ ಸಾಗಬೇಕಾದರೆ ಬಸವಾದಿ ಶರಣರ ವಚನ ಸಾಹಿತ್ಯವನ್ನು ಅರಿಯುವುದು ಅವಶ್ಯಕವಾಗಿದೆ. ಬಸವಾದಿ ಶರಣರ ವಿಚಾರಗಳು ಸಮಚಿತ್ತ, ಸಮಭಾವದಿಂದ ಕೂಡಿದ್ದು ಎಲ್ಲರ ನೆಮ್ಮದಿಯ ಬದುಕಿಗೆ ದಾರಿದೀಪವಾಗಿವೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಕುಮಾರ ಕುಕನೂರ ಹೇಳಿದರು.
ಅವರು ಗಾಣದ ಕಣ್ಣಪ್ಪ ಶಿವಾನುಭವ ಸೇವಾ ಸಮಿತಿ ವತಿಯಿಂದ, ಜಿಲ್ಲಾ ಗಾಣಿಗ ಸಮುದಾಯ ಭವನದಲ್ಲಿ, ಪ್ರತಿ ಎರಡನೇ ಶನಿವಾರ ನಡೆಯುವ 31ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಅನುಭಾವ ನುಡಿಗಳನ್ನು ಆಡಿದರು.

ಮಾನವನ ಬದುಕಿಗಿಂದು ಬೇಕಿರುವುದು ನೆಮ್ಮದಿಯ ಬದುಕು. ನೆಮ್ಮದಿ ಕಳೆದುಕೊಂಡು, ಖಿನ್ನತೆಗೆ ಒಳಗಾಗಿ ಅನೇಕರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಈ ಸಾಮಾಜಿಕ ಸಮಸ್ಯೆ ತಪ್ಪಿಸಲು ಬಸವಾದಿ ಶರಣರ ವಿಚಾರಧಾರೆಗಳನ್ನು ಸಮಾಜ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ಬಸವ ಭಾಷೆ, ಬಸವ ಭಕ್ತಿ ಭಾವದಿಂದ ಜನತೆ ಆತ್ಮಹತ್ಯೆಯ ದಾರಿ ಹಿಡಿಯುವುದನ್ನು ತಡೆಗಟ್ಟಬಹುದು, ಆರೋಗ್ಯಕರ ಸಮಾಜ ಕಟ್ಟಬಹುದೆಂದು ಶಿವಕುಮಾರ ಹೇಳಿದರು.

ಅಧ್ಯಕ್ಷತೆಯನ್ನು ದೇವಪ್ಪ ಡೊಳ್ಳಿ ವಹಿಸಿದ್ದರು. ವೇದಿಕೆ ಮೇಲೆ ಪಾಲಾಕ್ಷಗೌಡ ಮೇಟಿ ಇದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ಪ್ರಸಾದ ದಾಸೋಹಿಗಳನ್ನು ಸತ್ಕರಿಸಲಾಯಿತು.
ರುದ್ರಪ್ಪ ಹಳ್ಳಿ ನಿರೂಪಣೆ ಮಾಡಿದರು, ಶೇಖರ ಇಂಗಳದಾಳ ಸ್ವಾಗತ ಮತ್ತು ಪ್ರಾಸ್ತಾವಿಕ ಗೈದರು, ಶರಣಪ್ಪ ಉಳ್ಳಾಗಡ್ಡಿ ಅವರಿಂದ ಶರಣು ಸಮರ್ಪಣೆ ನಡೆಯಿತು. ಬನಶ್ರೀ ಮಾಳೆಕೊಪ್ಪ ಇವರಿಂದ ವಚನ ಪಠಣ ಮಾಡಿದರು. ಅನೇಕ ಶರಣ, ಶರಣೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಒಳ್ಳೆಯ ಕಾರ್ಯಕ್ರಮ