ಕೊಪ್ಪಳ
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಸವಾದಿ ಶರಣ ನುಲಿಯ ಚಂದಯ್ಯ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆಚರಿಸಲಾಯಿತು.
ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಅವರು ಶರಣ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೊರಮ ಸಮಾಜದ ಮುಖಂಡರಾದ ಎಸ್. ನಾಗರಾಜ ದೊಡ್ಡಮನಿ, ಕಂಬಣ್ಷ ಭಜಂತ್ರಿ, ಬಸವರಾಜ ಓಜಿನಹಳ್ಳಿ, ತಿಮ್ಮಣ್ಣ ಪೂಜಾರ, ಲಕ್ಷ್ಮಣ ಹಾಲಹಳ್ಳಿ, ಹಂಚೆಳಪ್ಪ ಓಜಿನಹಳ್ಳಿ, ತಿಮ್ಮಣ್ಣ ಭಜಂತ್ರಿ, ಲಕ್ಷ್ಮಣ ಮಾಳಗಿ, ನಾಗರಾಜ ಕೊಪ್ಪಳ, ನಾಗರಾಜ ದೊಡ್ಡಮನಿ, ಶಂಕ್ರಪ್ಪ ಎಸ್.ಡಿ., ಗಂಗಾಧರ ಗದಗಿನಮನಿ, ಕಣದಪ್ಪ ಕವಲೂರು, ಹುಸೇನಮ್ಮ ದೊಡ್ಡಮನಿ, ರತ್ನ ಎಸ್.ಡಿ., ಪುರುಗಮ್ಮ, ಸುನಿತಾ ಮತ್ತು ಇನ್ನೂ ಹಲವಾರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ಶಂಕರ ಮಹಮನಿ ಹಾಗೂ ಮುತ್ತಣ್ಣ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.