ಕೂಡಲಸಂಗಮ
ರಾಷ್ಟ್ರೀಯ ಬಸವ ದಳದ 34ನೇ ಅಧಿವೇಶನ ಹಾಗೂ ಯುವ ಶಕ್ತಿಯ ಕರ್ತವ್ಯ ಚಿಂತನಾ ಗೋಷ್ಠಿ ಸಮಾರಂಭದೊಂದಿಗೆ 38ನೇ ಶರಣ ಮೇಳ ರವಿವಾರ ಶುರುವಾಯಿತು.
ಚಿಂತನಾ ಗೋಷ್ಠಿ ಸಮಾರಂಭದ ಸಾನಿಧ್ಯ ವಹಿಸಿ ಬೀದರ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಮಾಜಿಕ ಜಾಲತಾಣಗಳಿಂದ ಯುವ ಜನಾಂಗ ಹಾದಿ ತಪ್ಪುತ್ತಿದ್ದು, ಅವರನ್ನು ತಿದ್ದುವ ಕಾರ್ಯವನ್ನು ಮಠಾಧೀಶರು, ರಾಷ್ಟ್ರೀಯ ಬಸವ ದಳ ಮಾಡಬೇಕು ಎಂದರು.

ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಧರ್ಮ ಧ್ವಜಾರೋಹಣ ನೆರವೇರಿಸಿದರು.
ಪ್ರಶಸ್ತಿ ಗೌರವ
ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಕೂಡಲಸಂಗಮದ ಎಲ್.ಎಂ.ಪಾಟೀಲ ಅವರಿಗೆ ಶರಣ ದಾಸೋಹ ರತ್ನ, ಬೆಂಗಳೂರು ರಾಷ್ಟ್ರೀಯ ಬಸವ ದಳದ ದೇವಿಕಾ ಶರಣಪ್ಪ ಅವರಿಗೆ ಶರಣ ಸೇವಾ ರತ್ನ, ಗೋಕಾಕ ರಾಷ್ಟ್ರೀಯ ಬಸವ ದಳದ ಕಮಲಕ್ಕ ಚೌಧರಿ ಅವರಿಗೆ ಶರಣ ರತ್ನ, ಕೊಪ್ಪಳ ರಾಷ್ಟ್ರೀಯ ಬಸವ ದಳದ ಬಸವನಗೌಡ ಪಾಟೀಲ ಅವರಿಗೆ ಶರಣ ಸೇವಾ ರತ್ನ ಪ್ರಶಸ್ತಿ ನೀಡಿ ಶ್ರೀಗಳು ಸನ್ಮಾನಿಸಿದರು.

ಸೋಮವಾರ ಬೆಳಗ್ಗೆ 10.30ಕ್ಕೆ ಶರಣ ಮೇಳವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧಿಕೃತವಾಗಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಕಾರ್ಮಿಕ ಸಚಿವ ಸಂತೋಷ ಲಾಡ, ಶಾಸಕ ವಿಜಯಾನಂದ ಕಾಶಪ್ಪನವರ, ಲೋಕಸಭಾ ಸದಸ್ಯ ಸಾಗರ ಖಂಡ್ರೆ ಆಗಮಿಸುವರು. ಸಾನಿಧ್ಯವನ್ನು ಸಾಣೇಹಳ್ಳಿ ತರಳಬಾಳು ಬೃಹನ್ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸುವರು.

ಸಾಯಂಕಾಲ ಬಸವ ಧರ್ಮ ಪೀಠಾರೋಹಣ, ಶರಣರ ಸ್ವಾಭಿಮಾನದ ಬದುಕು ಚಿಂತನಾ ಗೋಷ್ಠಿಗೆ ಲೋಕಾಯುಕ್ತ ಬಿ.ಎಸ್.ಪಾಟೀಲ ಅವರು ಚಾಲನೆ ನೀಡುವರು. ಮುಖ್ಯ ಅತಿಥಿಯಾಗಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರು ಉಪಸ್ಥಿತರಿರುವರು. ಬೆಳಗ್ಗೆ ಆಗಮಿಸಿದ ಶರಣ, ಶರಣೆಯರಿಗೆ ಬಸವ ದಳದ ಯುವತಿಯರು ಹಣೆಗೆ ವಿಭೂತಿ ಹಚ್ಚಿ ಸ್ವಾಗತಿಸಿ ನಮ್ಮ ಸಂಪ್ರದಾಯದ ಮಹತ್ವವನ್ನು ಸಾರಿದರು.



Pray for the successful of 38th sharanamela at Kudala Sangam for the year 2025. 🙏🙏
I wish all the success for the 38th Sharanamela being conducted at Kudalasangan.🙏🏿🙏🏿