ಫೆಬ್ರವರಿ 10 ಲಿಂಗಾಯತ ಕುಡು ಒಕ್ಕಲಿಗರ ಗುರುಪೀಠ ಉದ್ಘಾಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯಪುರ

ನಗರದ ಸಮೀಪದ ಕವಲಗಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಲಿಂಗಾಯತ ಕುಡು ಒಕ್ಕಲಿಗ ಸಮಾಜದ ಪ್ರಥಮ ಗುರುಪೀಠ ಶಿವಯೋಗಿ ಸಿದ್ಧರಾಮೇಶ್ವರ ಮಹಾ ಸಂಸ್ಥಾನ ಮಠದ ಉದ್ಘಾಟನೆ ಫೆಬ್ರವರಿ 10 ನಡೆಯಲಿದೆ ಎಂದು ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಡು ಒಕ್ಕಲಿಗ ಸಮಾಜಕ್ಕೆ ಇದುವರೆಗೂ ರಾಜ್ಯದಲ್ಲಿ ಯಾವೊಂದು ಗುರುಪೀಠ ಇರಲಿಲ್ಲ. ಇದನ್ನು ಅರಿತು ಸಮಾಜಕ್ಕೆ ಒಂದು ಗುರುಪೀಠ ಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗುತ್ತಿದೆ’ ಎಂದರು.

ಮೂರು ಎಕರೆ ಜಾಗದಲ್ಲಿ ಮಠ ನಿರ್ಮಾಣವಾಗಿದೆ. ಜೊತೆಗೆ ಗುರುಪೀಠದ ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿಗಳ ಪಟ್ಟಾಧಿಕಾರ, ಪೀಠಾರೋಹಣ ಮಹೋತ್ಸವ ನಡೆಯಲಿದೆ ಎಂದರು.

“ವ್ಯಸನ ಮುಕ್ತ, ಸಂಸ್ಕಾರಯುತ ಸಮಾಜ ನಿರ್ಮಾಣ ಆಶಯದೊಂದಿಗೆ ಗುರುಪೀಠ ಆರಂಭಿಸಲಾಗಿದೆ” ಎಂದು ಹೇಳಿದರು. “ಶಿವಯೋಗಿ ಸಿದ್ಧರಾಮ ಚರಿತ್ರೆ’ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುವುದು ಎಂದರು.

ಗುರು ಪೀಠದ ಲೋಕಾರ್ಪಣೆ ಪೂರ್ವಭಾವಿಯಾಗಿ ಫೆಬ್ರವರಿ 2ರಿಂದ ಫೆಬ್ರವರಿ 10ರ ವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಠದಲ್ಲಿ ಜರುಗಲಿವೆ ಎಂದು ಹೇಳಿದರು.

ರಾಜ್ಯದ ವಿವಿಧ ಮಠಾಧೀಶರು, ಸಚಿವರು, ಶಾಸಕರು, ಸಮಾಜದ ಮುಖಂಡರು ಕಾರ್ಯಕ್ರಮಗಳಲ್ಲಿ
ಭಾಗವಹಿಸಲಿದ್ದಾರೆ ಎಂದರು.

ಸಾಹಿತಿ ಸಿದ್ದಣ್ಣ ಉತ್ನಾಳ ಮಾತನಾಡಿ, ‘ಸೊನ್ನಲಗಿ ಸಿದ್ದರಾಮೇಶ್ವರ ಸ್ವಾಮೀಜಿ ಯಾವುದೇ ಒಂದು ಜಾತಿ,
ಸಮಾಜಕ್ಕೆ ಸೀಮಿತವಲ್ಲ. ಆದರೆ, ಕುಡು ಒಕ್ಕಲಿಗ ಸೇರಿದಂತೆ ಜಂಗಮರು, ಆದಿ ಬಣಜಿಗರು, ಒಡ್ಡರು ಸೇರಿದಂತೆ ಅನೇಕ ಸಮಾಜಗಳು ಸೊನ್ನಲಗಿ ಸಿದ್ದರಾಮೇಶ್ವರರು ತಮ್ಮ ಸಮಾಜದವರು ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ’ ಎಂದರು.

ಸಮಾಜದ ಮುಖಂಡರಾದ ಬಾಳಸಾಹೇಬಗೌಡ ಸಾತಿಹಾಳ, ಬಾಪುಗೌಡ ಪಾಟೀಲ ಶೇಗುಣಸಿ,
ಎಸ್.ಎ. ಬಿರಾದಾರ ಕನ್ನಾಳ, ಕಲ್ಲನಗೌಡ ಪಾಟೀಲ ಡೋಣೂರ, ದ್ಯಾವನಗೌಡ ಪಾಟೀಲ ದೇಗಿನಾಳ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share This Article
2 Comments
  • ಲಿಂಗಾಯತ ಧರ್ಮದಲ್ಲಿ ಧರ್ಮ ಪ್ರಸಾರ ಮತ್ತು ಪ್ರಚಾರವನ್ನು ಯಾವುದೇ ಪಂಗಡದವರು ಮಾಡಬಹುದು. ಈ ಹೊಸ ಮಠಗಳಿಗೆ ವೀರಶೈವ ಪಂಗಡ ಅಥವಾ ಜಾತಿ ಜಂಗಮರನ್ನು ಮಾಡದೆ ಬೇರೆಯವರನ್ನು ಮಠಾಧಿಪತಿ ಮಾಡಿ, ನಿಜ ಜಂಗಮ ತತ್ವ ಭಾರತೀಯರಿಗೆ ತಿಳಿಯುವಂತೆ ಮಾಡಬೇಕು.

  • ವಳ ಪಂಗಡ ಯಾವೇ ಇದ್ದರೂ ಲಿಂಗಾಯತ ತಳಹದಿ ಮೇಲೆ ಪೀಠ ಕಾರ್ಯಪ್ರವ್ರತ್ತಿಯಾಗಲಿ. ಗುಡಿ ಗುಂಡಾರ ಸಂಸ್ಕೃತಿ ಬೇಡಾ

Leave a Reply

Your email address will not be published. Required fields are marked *