ಆಲೂರು (ಆಂಧ್ರಪ್ರದೇಶ):
ಕರ್ನೂಲ್ ಜಿಲ್ಲಾ, ತಾಲ್ಲೂಕ ಕೇಂದ್ರ ಆಲೂರು ಪಟ್ಟಣದ ಶರಣ ದಂಪತಿ ಸಾವಿತ್ರಮ್ಮ ಮತ್ತು ಗುರುಸಿದ್ದಪ್ಪನವರ ಮನೆಯಲ್ಲಿ ಈಚೆಗೆ ಅನುಭಾವ ಚಿಂತನ ಗೋಷ್ಠಿ ನಡೆಯಿತು.

ಅನುಭಾವವನ್ನು ಶರಣ ಚಿಂತಕ ಶರಣಪ್ಪ ಸಜ್ಜನ ನಡೆಸಿದರು. ಅವರು ಇಷ್ಟಲಿಂಗ ಮಹತ್ವದ ಕುರಿತು ಹಾಗು ವಚನಗಳ ವಿಶ್ಲೇಷಣೆ ಮಾಡಿ ಮಾತನಾಡಿದರು. ಶರಣ ಗಾಳೇಶಣ್ಣ ಸಹ ಶರಣ ಚಿಂತನೆ ನಡೆಸಿದರು.

ಕಾರ್ಯಕ್ರಮದ ಮೊದಲು ಷಟಸ್ಥಲ ಧ್ವಜಾರೋಹಣ, ಬಸವ ಭಾವಚಿತ್ರಕ್ಕೆ ಪೂಜೆ ಹಾಗೂ ಸಾಮೂಹಿಕ ಇಷ್ಟಲಿಂಗಪೂಜೆ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಧರ್ಮಗುರು ಬಸವಣ್ಣನವರ ಭಾವಚಿತ್ರ ಮೆರವಣಿಗೆ ನಡೆಯಿತು. ಬಸವಾದಿ ಶರಣರ ವಚನಗಳನ್ನು ಹೇಳುತ್ತ, ಗಾಯನ ಮಾಡುತ್ತ, ಬಸವ ಜಯಘೋಷ ಹಾಕುತ್ತ ಸುಮಾರು 3ಕಿ.ಮೀ. ಸಾಗಿ ಬರಲಾಯಿತು.


ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಪ್ರಮುಖರಾದ ಶಿವಕುಮಾರ, ಪಂಪಾಪತಿ, ಬಸನಗೌಡ, ನಾಗಲಿಂಗಪ್ಪ, ಡಾ. ಪಾರ್ವತಿ ಸಜ್ಜನ, ರಾಜೇಶ್ವರಿ, ಶಿವಲಿಂಗಮ್ಮ, ಅಮರೇಶ, ಆಲೂರು, ಯಾಳ್ಪಿ, ಕಾರೇಕಲ್ಲು ಗ್ರಾಮದ ಶರಣ, ಶರಣೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



