ಬೆಂಗಳೂರು:
ರಾಷ್ಟ್ರೀಯ ಬಸವತತ್ವ ಪರಿಷತ್ತಿನ ಶರಣ ಸಂಗಮ 96ನೇ ತಿಂಗಳ ಕಾರ್ಯಕ್ರಮ ವಿಜಯನಗರದ ಚಿದಾನಂದ ಮೂರ್ತಿ ಸಭಾಂಗಣದಲ್ಲಿ ನಡೆಯಿತು.
‘ಶರಣರಲ್ಲಿ ಮನುಜಮತ ಕಂಡ ಕುವೆಂಪು’ ಎಂಬ ವಿಷಯ ಕುರಿತು ತುಮಕೂರಿನ ಟಿಎಸಿಎಲ್ ಇ ಕಾರ್ಯದರ್ಶಿ ಎಸ್. ಕುಮಾರಸ್ವಾಮಿ ಉಪನ್ಯಾಸ ನೀಡಿ ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಬಸವಣ್ಣನವರ ಆದರ್ಶ, ವಚನ ಸಾಹಿತ್ಯವನ್ನು ಅಳವಡಿಸಿಕೊಂಡಿದ್ದರು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅಕ್ಕನಾಗಲಾಂಭಿಕಾ ದೇವಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ನೀಡಿದವರು ಬಸವಣ್ಣನವರು, ಹೆಣ್ಣು ಮಕ್ಕಳಿಗೆ ಪೂರ್ಣ ಅವಕಾಶ ನೀಡಿದ ಮಹಾಶರಣರು ಬಸವಣ್ಣನವರು ಮದುವೆ ಮಾಡಿಕೊಂಡು ಸತಿಗೆ ಸಂಸ್ಕಾರ ನೀಡಿದವರು, ಅವರ ಹೆಂಡತಿ ನೀಲಮ್ಮ ಸತಿಯಾಗಿ ಶ್ರೀಮಂತಿಕೆಯನ್ನು ಬಿಟ್ಟು ಪತಿ ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡವರು ಎಂದು ಹೇಳಿದರು.

ಕಾರ್ಮಿಕ ಇಲಾಖೆಯ ಕ್ಷೇತ್ರ ನಿರೀಕ್ಷಕ ಪೂಜಾ ಮುರಗೋಜಿ ಗೌರವ ಸಮರ್ಪಣೆ ಮಾಡಿದರು.
ಪರಿಷತ್ತಿನ ಅಧ್ಯಕ್ಷ ಅರುಣಕುಮಾರ್ ಡಿ.ಟಿ. ಮಾತನಾಡಿ, ಶರಣ ಸಂಗಮ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಬಸವತತ್ವ ಪ್ರಸಾರ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಸುಕನ್ಯಾ ಆರಾಧ್ಯ ತಂಡದವರಿಂದ ವಚನ ಗಾಯನ ನಡೆಯಿತು.
ಲಿಂಗಾಯತ ಸಮಾಜ ಮುಖಂಡ ವಸಂತಕುಮಾರ್ ಎಸ್.ಶಶಿಕಲಾ ಡಿ.ಎಸ್, ಕರಿಬಸವಯ್ಯ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
