ಇದು ವೈರಲ್: ಲ್ಯಾಂಬೆತ್ ಬಸವೇಶ್ವರ ಕಾರ್ಯಕ್ರಮದಲ್ಲಿ ಪೂಜಾ ಗಾಂಧಿ

ಬಸವ ಮೀಡಿಯಾ
ಬಸವ ಮೀಡಿಯಾ

ಲಂಡನ್

ಲ್ಯಾಂಬೆತ್ ಬಸವೇಶ್ವರ ಪ್ರತಿಮೆಯ ಬಳಿ ಶನಿವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಖ್ಯಾತ ನಟಿ ಪೂಜಾ ಗಾಂಧಿ ಭಾಗವಹಿಸಲಿದ್ದಾರೆ.

ಲಂಡನ್ನಲ್ಲಿರುವ ಭಾರತೀಯರಿಗೆ ಬಸವಣ್ಣನವರನ್ನ, ವಚನಗಳನ್ನ, ಶರಣ ಸಂಸ್ಕೃತಿಯನ್ನ ಪರಿಚಯ ಮಾಡಿಕೊಡಲು ಈ ಕಾರ್ಯಕ್ರಮ ನಡೆಯುತ್ತಿದೆಯೆಂದು ಪೂಜಾ ಗಾಂಧಿ ಸಣ್ಣ ವಿಡಿಯೋ ಮಾಡಿ ಹೇಳಿದ್ದಾರೆ.

ಮೂಲತಃ ಮೀರತ್ತಿನ ಪಂಜಾಬಿ ಕುಟುಂಬದಲ್ಲಿ ಹುಟ್ಟಿದ್ದರೂ ಸ್ಪಷ್ಟವಾದ ಕನ್ನಡದಲ್ಲಿ ಪೂಜಾ ಗಾಂಧಿ ಅವರು ಮಾಡಿರುವ ಈ ವಿಡಿಯೋ ಈಗ ವೈರಲ್ ಆಗಿದೆ. ಇವರು ಕನ್ನಡವನ್ನು ಮುದ್ದಾಗಿ ಬರೆಯುತ್ತಾರೆ ಕೂಡ.

ವಲಸೆ ಹೋಗಿ ಬದುಕು ಕಟ್ಟಿಕೊಳ್ಳುವವರು ಸ್ಥಳೀಯ ಸಂಸ್ಕೃತಿಯ ಜೊತೆ ಬೆರೆತುಕೊಂಡರೆ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ. ಈ ಮಾತಿಗೆ ಪೂಜಾ ಗಾಂಧಿ ಅವರು ಆದರ್ಶವಾಗಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *