ಜೀವನ ಸಾರ್ಥಕ ಮಾಡಿಕೊಳ್ಳಲು ಒಂದೇ ಒಂದು ವಚನ ಸಾಕು: ಲಾವಣ್ಯ ಅಂಗಡಿ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಗುರುವಾರ ಮಕ್ಕಳ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

“ಹಿರೇಬಾಗೇವಾಡಿಯ ಲಾವಣ್ಯ ಎಂ. ಅಂಗಡಿ ಮಾತನಾಡಿ, ಬಸವಣ್ಣನವರು ಮಾನವೀಯ ಧರ್ಮದ ನೇಕಾರ. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅಂದಿನಿಂದಲೇ ವಚನ ಸಾಹಿತ್ಯ ಸೃಷ್ಟಿಯಾಯಿತು. ಜೀವನ ಸಾರ್ಥಕ ಮಾಡಿಕೊಳ್ಳಲು ಒಂದೇ ಒಂದು ವಚನ ಸಾಕು. ಕಳಬೇಡ ಎಂಬ ವಚನವು ಇಂದಿನ ಸಂವಿಧಾನದಲ್ಲಿ ಐಪಿಸಿ ಸೆಕ್ಷನ್ ಮೂಲಕ ಬಳಕೆಯಾಗಿದೆ. ದಯೆಯಿಲ್ಲದ ಧರ್ಮ ಯಾವುದಯ್ಯ ಎಂಬ ವಚನದ ಮೂಲಕ ಸಾಮಾಜಿಕ ಸುಧಾರಣೆ ಸಾಧ್ಯ.

ಧರೆ ಹತ್ತಿ ಉರಿದೊಡೆ ನಿಲಬಹುದೇ ಎಂಬ ವಚನದ ಸಾರವೇ ಅವಿಸ್ಮರಣೀಯ. ಮರ್ತ್ಯಲೋಕ ದೇವಲೋಕದ ಬಗ್ಗೆಯು ವಚನದ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಲೋಕದ ಡೊಂಕು ನೀವೇಕೆ ತಿದ್ದುವಿರಿ? ಎಂಬುದರ ಮೂಲಕ ನಿಮ್ಮಗಳ ತನುವನ್ನು ಸಂತೈಸಿದರೆ ಸಾಕು ಎಂದು ತಮ್ಮ ವಚನದಲ್ಲಿ ಹೇಳಿದ್ದಾರೆ. ಬಸವಣ್ಣನವರ ವಚನಗಳನ್ನು ಅಳವಡಿಸಿಕೊಂಡು ಬದುಕಿದರೆ ಬದುಕೇ ಧನ್ಯ,” ಎಂದು ನುಡಿದರು.

ಕಾರ್ಯಕ್ರಮದಲ್ಲಿ ಚನ್ನಗಿರಿಯ ವಡ್ಡನಹಾಳ್ ಜಗದ್ಗುರು ವಿಶ್ವಕರ್ಮ ಮಹಾ ಸಂಸ್ಥಾನ ಮಠದ ಪೂಜ್ಯ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳು, ಪೂಜ್ಯ ಮಾದಾರಚನ್ನಯ್ಯ ಸ್ವಾಮಿಗಳು, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ, ಆಡಳಿತ ಮಂಡಳಿಯ ಸದಸ್ಯರುಗಳಾದ ಪೂಜ್ಯ ಡಾ. ಬಸವಕುಮಾರ ಸ್ವಾಮೀಜಿ, ಎಸ್.ಎನ್. ಚಂದ್ರಶೇಖರ್, ಹರಗುರುಚರಮೂರ್ತಿಗಳು ಉಪಸ್ಥಿತರಿದ್ದರು.

ಜೀ ಕನ್ನಡ ಸರಿಗಮದ ಪ್ರತಿಭೆ ದಿಯಾ ಹೆಗಡೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಬಹುಮುಖ ಪ್ರತಿಭೆ ಮಹಾನ್ಯ ಗುರುಪಾಟೀಲ, ಜೀ ಕನ್ನಡದ ಪ್ರತಿಭೆ ಬೆಂಗಳೂರಿನ ಜ್ಞಾನ ಸಂಗೀತ ಕಾರ್ಯಕ್ರಮ, ಕಲರ್ಸ್ ಕನ್ನಡ ಪ್ರತಿಭೆ ಹುಬ್ಬಳ್ಳಿ ಮುದ್ದುರಾಜ್ ಅನೂಪ್ ನೃತ್ಯ ಪ್ರದರ್ಶನ, ಬಸವನಬಾಗೇವಾಡಿಯ ದಿಂಡಾವರದ ದಿತಿ ಶಿರಶ್ಯಾಡ ವಚನ ಪಠಣ, ನೆಲಮಂಗಲ ಮತ್ತು ಅಂದ್ರಹಳ್ಳಿಯ ಎ.ಪಿ. ಡಾನ್ಸ್ ಅಕಾಡೆಮಿ, ಧಾರವಾಡ ನೃತಿಕಾ ನೃತ್ಯಾಲಯದ ಮಕ್ಕಳು ಸಾಂಸ್ಕೃತಿಕ ಸಾಮೂಹಿಕ ನೃತ್ಯ ಪ್ರದರ್ಶನ ನೀಡಿದರು.

ಭರಮಸಾಗರ ಜನರೇಷನ್ ಅರೇನಾ ಕಲಾ ಸಂಸ್ಥೆಯ ಮಕ್ಕಳು ವಚನ ನೃತ್ಯ, ಚಿತ್ರದುರ್ಗದ ಸರಿಗಮ ಸಂಗೀತ ಪಾಠ ಶಾಲೆಯವರು ಸಾಮೂಹಿಕ ವಚನ ಸಂಗೀತ, ಕಮಡೊಳ್ಳಿ ಜೈಕರ್ನಾಟಕ ಮಲ್ಲಕಂಬ ಅಕಾಡೆಮಿ ಮಕ್ಕಳು ಮಲ್ಲಕಂಬ ಪ್ರದರ್ಶನ ನೀಡಿದರು.

ಭೀಮಸಮುದ್ರದ ಶ್ರೀಮತಿ ವನಿತಾ ಮತ್ತು ಸಿ. ಶಂಕರಮೂರ್ತಿ ಕಾರ್ಯಕ್ರಮದ ಸೇವಾರ್ಥಿಗಳಾಗಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
1 Comment
  • ಬೆಳಗಾವಿ ಜಿಲ್ಲೆಯ ಹೆಸರಿಗೆ ಮತ್ತೊಂದು ಗರಿಮೆ ತ೦ದುಕೊಟ್ಟ ಶರಣೆ ಕುಮಾರಿ Lavannya ಭಕ್ತಿಯ ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *