ಬೆಳಗಾವಿ
ರಾಜ್ಯದ ಜನತೆ ಬೆಚ್ಚಿ ಬೀಳುವಂತಹ ಅಶ್ಲೀಲ ಪದವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಬಳಸಿಯೇ ಇಲ್ಲ ಎಂದು ಸಭಾಪತಿ ವಿಧಾನ ಪರಿಷತ್ ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ಶಾಸಕ ಸಿ ಟಿ ರವಿ ಹೇಳಿದ್ದಾರೆ.
ಆದರೆ ಕೆಲವು ಮಾಧ್ಯಮಗಳು ಬಿತ್ತರಿಸುತ್ತಿರುವ ವರದಿಗಳಲ್ಲಿ ಅವರು ಬಳಸಿರುವ ಇಂಗ್ಲಿಷ್ ಪದ ಎರಡು ಬಾರಿ ಸ್ಪಷ್ಟವಾಗಿ ಕೇಳಿಸುತ್ತದೆ.
ಇದರಿಂದ ಕೆರಳಿ ಸಚಿವೆ ಹೆಬ್ಬಾಳ್ಕರ್ ಸಭಾಪತಿ ಹೊರಟ್ಟಿ ಅವರ ಕುರ್ಚಿಯ ಸಮೀಪ ತೆರಳಿ ಸಿಟಿ ರವಿ ಅವರಿಗೆ ಹಿಗ್ಗಾ ಮುಗ್ಗಾ ಜಾಡಿಸಿದರು. ಏಯ್, ನಿನಗೆ ಮಗಳು ಇಲ್ವೇನೋ? ನಿನಗೆ ತಾಯಿ ಇಲ್ವೇನೋ? ನಿನಗೆ ಹೆಂಡತಿ ಇಲ್ವಾ? ಎಂದು ಏಕವಚನದಲ್ಲೇ ಆಕ್ರೋಶ ಹೊರ ಹಾಕಿದರು.
ಸಭಾಪತಿ ಬಸವರಾಜ್ ಹೊರಟ್ಟಿ ಅವರು ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿ ತೆರಳಿದ ಬಳಿಕವೂ ಅಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಭಾರಿ ಗಲಾಟೆ ನಡೆಯಿತು.
ಸಿ. ಟಿ. ರವಿ ಅವರ ಹಿನ್ನೆಲೆ ಮುನ್ನೆಲೆ ಗೊತ್ತಿದ್ದವರಿಗೆ ಯಾರಿಗೂ ಅವರ ಈ ವರ್ತನೆ ಆಶ್ಚರ್ಯ ಉಂಟುಮಾಡುವುದಿಲ್ಲ.
ಹೊಡಿ ಬಡಿ ಕೊಲ್ಲು,,,,ಸಂಸ್ಕಾರ ಸಂಪ್ರದಾಯ ಸಂಸ್ಕೃತಿ ಶಿಸ್ತು ಏನೆಲ್ಲಾ ಪುಂಗಿ ಊರೆಲ್ಲಾ ಊದಿಕೊಂಡು ಓಡಾಡುತ್ತಾರೆ,,, ವರ್ತನೆ ಮಾತ್ರ ನಾಗರೀಕ ಸಮಾಜ ತಲೆ ತಗ್ಗಿಸುವಂಥದ್ದು,,ಇವರ ಜುಮ್ಲಾ ವ್ಯಾಪಾರಿಗಳೇ ಇವರನ್ನು ಮೀರುಸುವಂತಿದ್ದಾರೆ ಇನ್ನೂ ಇವೆಲ್ಲ ಏನು ಮಹಾ,,, ಬಹುಶಃ ಈ ದೇಶದ ಇತಿಹಾಸದಲ್ಲಿ ಇಂಥಾ ಸುವರ್ಣ ಕಾಲ ಹಿಂದೆಂದೂ ಇರಲಿಲ್ಲ,,, ಮುಂದೆ ಬರದೇಯಿರಲೆಂದು ಆಶಿಸೋಣ