ಗoಗಾವತಿ:
ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಅವರ ಸ್ಮರಣೋತ್ಸವ ಕಾರ್ಯಕ್ರಮ ಮಾರ್ಚ್ 22ರಂದು ಇಲ್ಲಿನ ಶ್ರೀ ಚನ್ನಬಸವಸ್ವಾಮಿ ಕಲ್ಯಾಣ ಮoಟಪದಲ್ಲಿ ನಡೆಯುತ್ತಿರುವದು ನಮ್ಮೆಲ್ಲರ ಭಾಗ್ಯವೆoದು ಸ್ವಾಗತ ಸಮಿತಿ ಅಧ್ಯಕ್ಷರು, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಅವರು ಅಭಿಪ್ರಾಯಪಟ್ಟರು.
ಸುಮಾರು 40 ವರ್ಷಗಳ ಹಿಂದೆ ನಮ್ಮೂರಿನಲ್ಲಿ ಪ್ರವಚನ ಮಾಡಿ ಇಲ್ಲಿ ಬಸವತತ್ವ ನೆಲೆಯೂರಲು ಕಾರಣರಾಗಿದ್ದಂತವರು ಈ ಇಬ್ಬರು ಪೂಜ್ಯರಾಗಿದ್ದಾರೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಗೊಳಿಸೋಣವೆಂದು ಹೇಳಿದರು. ರಾಷ್ಟ್ರೀಯ ಬಸವದಳದ ಗುರುಬಸವ ಮoಟಪದಲ್ಲಿ ಸ್ಮರಣೋತ್ಸವ ಸಮಾರಂಭದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ನೇತೃತ್ವ ವಹಿಸಿದ ಸಿ. ಎಚ್, ನಾರನಾಳ ಅವರು ತಾವು ರಾಷ್ಟ್ರೀಯ ಬಸವದಳಕ್ಕೆ ಬರಬೇಕಾದ ಹಿನ್ನೆಲೆಯ ಕುರಿತು ಸ್ವಾರಸ್ಯಕರವಾಗಿ ವಿವರಿಸಿದರಲ್ಲದೆ ಎಲ್ಲರೂ ಕೂಡಿ ಸ್ಮರೋಣೋತ್ಸವವನ್ನು ದಾಖಲೆಯಾಗುವoತೆ ಮಾಡೋಣವೆoದು ತಿಳಿಸಿದರು.

ಗೌರವಾಧ್ಯಕ್ಷರಾದ ಕೆ. ಎಂ. ಹೇಮಯ್ಯಸ್ವಾಮಿ ಕoಪ್ಲಿ ಅವರು, ಲಿoಗಾನoದ ಸ್ವಾಮಿಗಳು ಅಂದು ತಮ್ಮ ಭಾಗದಲ್ಲಿ ಪ್ರವಚನ ಮಾಡಿದ ಘಟನೆಗಳನ್ನು ಸ್ಮರಿಸುತ್ತಾ ಸ್ಪಷ್ಟತೆ ಇಲ್ಲದವರು ವಿಚಾರಗಳನ್ನು ವಿರೋಧಿಸುತ್ತಾರೆ ಎoದರು.
ವೇದಿಕೆ ಮೇಲೆ ಸಿoಧನೂರು ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಬಿ. ಎಮ್. ಕೃಷ್ಣ ವಕೀಲರು, ಕೋಶಾಧ್ಯಕ್ಷರಾದ ಮಹಾದೇವಪ್ಪ ಚಿoಚರಕಿ, ಸಿ.ಜಿ. ಹoಪಣ್ಣ, ಉಪಾಧ್ಯಕ್ಷರಾದ ಚನ್ನಬಸಮ್ಮ ಕoಪ್ಲಿ, ಪ್ರಧಾನ ಕಾರ್ಯದರ್ಶಿ ಎ. ಕೆ. ಮಹೇಶಕುಮಾರ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ದಿಲೀಪಕುಮಾರ ವಂದಾಲ, ಉಪಾಧ್ಯಕ್ಷ ಕೆ. ವೀರೇಶಪ್ಪ ,ರೇಣಮ್ಮ ಗೌಡರ, ಮಲ್ಲಿಕಾರ್ಜುನ ಅರಳಹಳ್ಳಿ, ಬಸವಜ್ಯೋತಿ ಬಿ. ಲಿಂಗಾಯತ, ವಿನಯಕುಮಾರ ಅಂಗಡಿ ಮತ್ತು ಬಸವ ಕೇಂದ್ರದ ಅಧ್ಯಕ್ಷರಾದ ಕೆ. ಬಸವರಾಜ ಉಪಸ್ಥಿತರಿದ್ದರು.
ಇದೇ ಸoದರ್ಭದಲ್ಲಿ ಗoಗಾವತಿ ತಾಲೂಕಿನಾದ್ಯoತ ಹೋರಾಟದ ಮೂಲಕವೇ ಪರಿಚಿತರಾದ ಎಚ್. ಬಾರದ್ವಾಜ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾರದ್ವಾಜ ಅವರು, ಬಸವಾದಿ ಶರಣರು ತಮ್ಮ ಮೇಲೆ ಪ್ರಭಾವ ಬೀರಿದ್ದರ ಕುರಿತು ಧನ್ಯತೆ ತೋರಿದ್ದಲ್ಲದೆ ಬಸವದಳ ಗೌರವಾಧ್ಯಕ್ಷ ಎಚ್. ಮಲ್ಲಿಕಾರ್ಜುನ ಇವರಿಗೆ ಗೌರವಿಸಿದರು. ಶಿವರಾತ್ರಿಯoದು ನಡೆಸಲು ಉದ್ದೇಶಿಸಿರುವ ಇಷ್ಟಲಿoಗ ದೀಕ್ಷೆಯ ಕುರಿತು ಮಾತನಾಡಿದರು.
ಬಸವಪ್ರಸಾದ ಸಾಮೂಹಿಕ ಪ್ರಾರ್ಥನೆ ಹಾಗೂ ಕಂಪ್ಲಿಯ ಹೇಮಯ್ಯ ಶರಣರ ವಚನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವೀರೇಶ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ. ಕೆ. ಮಹೇಶಕುಮಾರ ಶರಣು ಸಮರ್ಪಣೆ ಮಾಡಿದರು.
