ಗಂಗಾವತಿ:
ಬಸವಜಯಂತಿ ಬಂತೆಂದರೆ ನಾವು ಚಿಕ್ಕವರಿದ್ದಾಗ ಎತ್ತನ್ನು ಪೂಜೆ ಮಾಡಿ ಮೆರವಣಿಗೆ ಮಾಡುವದನ್ನ ನಾವು ನೋಡುತ್ತಾ ಬಂದಿದ್ದೆವು. ಅಂತಹುದರಲ್ಲಿ ಬಸವಣ್ಣನವರೆಂದರೆ ನಮ್ಮ ಕರ್ನಾಟಕದ ಅಸ್ಮಿತೆ ಎಂದು ಇಡೀ ನಾಡಿಗೆ ಪರಿಚಯಿಸಿದವರು ಪೂಜ್ಯ ಲಿಂಗಾನಂದ ಸ್ವಾಮೀಜಿ ಮತ್ತು ಮಾತೆ ಮಹಾದೇವಿಯವರು.
ಅವರ ಮಹಾಸ್ಮರಣೆಯನ್ನು ಮತ್ತು ರಾಷ್ಟ್ರೀಯ ಬಸವದಳ ಸಮಾವೇಶವನ್ನು ಮಾರ್ಚ್ 22ರಂದು ನಾಡಿನ ಮೂಲೆ ಮೂಲೆಗಳಿಂದ ಗಂಗಾವತಿ ಗೆ ಬರಲಿರುವ ಬಸವಭಕ್ತರು ಅನಾವರಣಗೊಳಿಸಲಿದ್ದಾರೆಂದು ಸ್ವಾಗತ ಸಮಿತಿಯ ನೇತೃತ್ವ ವಹಿಸಿರುವ ಸಿ. ಹೆಚ್. ನಾರಿನಾಳ ಪತ್ರಿಕಾಭವನದಲ್ಲಿ ಸ್ಮರಣೋತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.

ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಕಂಪ್ಲಿಯ ಹೇಮಯ್ಯಸ್ವಾಮಿ, ಕಾರ್ಯಾಧ್ಯಕ್ಷರಾದ ದಿಲೀಪಕುಮಾರ, ಬಸವದಳದ ಕಾರ್ಯದರ್ಶಿ ವೀರೇಶ ಅಸರಡ್ಡಿ, ಕ್ರಾಂತಿ ಗಂಗೋತ್ರಿ ಮಹಿಳಾ ಗಣದ ಅಧ್ಯಕ್ಷರಾದ ಚನ್ನಬಸಮ್ಮ ಕಂಪ್ಲಿ, ಉಪಾದ್ಯಕ್ಷರಾದ ಸತೀಶ ಮಂಗಳೂರ ಕಾರ್ಯಕ್ರಮದ ಕುರಿತು ವಿವರಣೆ ನೀಡಿದರು.
ಬಸವಕೇಂದ್ರದ ಅಧ್ಯಕ್ಷ ಕೆ. ಬಸವರಾಜ ಮಾತನಾಡಿ, ಮೆರವಣಿಗೆಗೆ ಹಿರಿಯರಾದ ಗೌರವಾನ್ವಿತ ಎಚ್. ಜಿ. ರಾಮುಲು ಅವರು ಚಾಲನೆ ನೀಡುವರು. ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಗಾಲಿ ಜನಾರ್ಧನರೆಡ್ಡಿ ಅವರು, ಷಟಸ್ಥಲ ದ್ವಜಾರೋಹವನ್ನು ಸ್ವಾಗತ ಸಮಿತಿಯ ಅಧ್ಯಕ್ಷರು, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ವಹಿಸುವರೆಂದು ತಿಳಿಸಿದರು.

ಇದೇ ಸಮಾರಂಭದಲ್ಲಿ ಸಾಧಕರಿಗೆ, ಶರಣ ದಂಪತಿಗಳಿಗೆ ಸನ್ಮಾನ ಇರುವದಲ್ಲದೇ ವಿಶೇಷವಾಗಿ ಮಾತಾಜಿಯವರ ಹೆಸರಿನಲ್ಲಿ ‘ಬಸವಾತ್ಮಜೆ ಪ್ರಶಸ್ತಿ’ ಹಾಗೂ ಅಪ್ಪಾಜಿಯವರ ಹೆಸರಿನಲ್ಲಿ ‘ಲಿಂಗಾನಂದಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುವದೆಂದು ತಿಳಿಸುತ್ತಾ ಎಲ್ಲರ ಸಹಕಾರಕ್ಕೆ ವಿನಂತಿಸಿಕೊoಡರು.
