12 ಸಾವಿರ ಮನೆ ತಲುಪಿ, 13ನೇ ಬಾರಿ ಮುದ್ರಣವಾಗಿರುವ ಗುರುವಚನ ಧರ್ಮಗ್ರಂಥ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಲಿಂಗಾಯತ ಮಹಾಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಈಚೆಗೆ ನಡೆದ 261ನೇ ಮಾಸಿಕ ಶರಣ ಸಂಗಮ ಹಾಗೂ ಲಿಂಗಾಯತ ಧರ್ಮಗ್ರಂಥ ಗುರುವಚನದ 13ನೇ ಆವೃತ್ತಿಯ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಗುರುವಚನ ಲಿಂಗಾಯತ ಧರ್ಮಕ್ಕೆ ಅಕ್ಕ ಅನ್ನಪೂರ್ಣತಾಯಿ ಅವರ ವಿಶೇಷ ಕೊಡುಗೆ. ಬಸವಣ್ಣನವರ ಕರಣ ಹಸಿಗೆ ಮತ್ತು ಪ್ರಭುದೇವರ ಪದಮಂತ್ರ ಗೋಪ್ಯಗಳು ಗ್ರಂಥದಲ್ಲಿವೆ ಎಂದು ಸಾಹಿತಿ ರಮೇಶ ಮಠಪತಿ ಹೇಳಿದರು.

ಅಕ್ಕ ಅವರು 2008 ರಲ್ಲಿ ಗುರುವಚನದ ಮೊದಲ ಮುದ್ರಣ ಮಾಡಿಸಿದ್ದರು. ಗ್ರಂಥ ಈವರೆಗೆ 12 ಮುದ್ರಣಗಳನ್ನು ಕಂಡಿದೆ. 12 ಸಾವಿರ ಮನೆಗಳಿಗೆ ತಲುಪಿದೆ ಎಂದು ತಿಳಿಸಿದರು.

ಎರಡು-ಮೂರು ವರ್ಷಗಳಿಂದ ಗ್ರಂಥದ ಪ್ರತಿಗಳು ಇಲ್ಲದ ಕಾರಣ ಪ್ರಭುದೇವರು ಗ್ರಂಥದ 13ನೇ ಮುದ್ರಣ ಮಾಡಿಸಿ ಶರಣ ಲೋಕಕ್ಕೆ ಸಮರ್ಪಿಸಿದ್ದಾರೆ. ಅಕ್ಕನವರ ಕಾರ್ಯ ಮುಂದುವರಿಸಿ, ಹಳ್ಳಿ ಹಳ್ಳಿಗಳಲ್ಲಿ ಗ್ರಂಥದ ಮೆರವಣಿಗೆ ಮಾಡುತ್ತ ವಚನ ವಿಜಯೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಭಕ್ತಿಯಿಂದ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಗ್ರಂಥ ಓದುವವರಲ್ಲಿ ತಾನಾಗಿಯೇ ಅಮೋಘ ಶಕ್ತಿ ಬರುತ್ತದೆ ಎಂದು ಶಿವಾನಂದ ದೇವರು ನುಡಿದರು.

ಮಕ್ಕಳಿಗೆ ಕಡ್ಡಾಯವಾಗಿ ಧರ್ಮದ ಬಗ್ಗೆ ತಿಳಿಸಬೇಕು. ಯಾರೊಂದಿಗೂ ದ್ವೇಷ, ಮಾತ್ಸರ್ಯ ಹೊಂದಬಾರದು. ಆನಂದದಿಂದ ಬದುಕು ಸಾಗಿಸಬೇಕು ಎಂದು ತಿಳಿಸಿದರು.

ಪರಮಾತ್ಮನನ್ನು ಮರೆತದ್ದೇ ದುಃಖಕ್ಕೆ ಕಾರಣವಾಗಿದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ತಾಯಿಯನ್ನು ಕಳೆದುಕೊಂಡ ಮಗು ಮತ್ತೆ ತಾಯಿ ಸಿಕ್ಕಾಗಲೇ ಸಮಾಧಾನ, ಹಾಗೆಯೇ ಸೃಷ್ಟಿಕರ್ತ ಸಿಗುವವರೆಗೆ ಶಾಂತಿ ಇಲ್ಲ ಎಂದು ತಿಳಿಸಿದರು. ದೇವರ ನೆನಹು ಮನುಷ್ಯನನ್ನು ಬಹು ಎತ್ತರಕ್ಕೆ ಏರಿಸುತ್ತದೆ ಎಂದರು.

ವ್ಯಕ್ತಿಯಲ್ಲಿ ದೋಷ ಬರಬಹುದು. ಆದರೆ, ಗುರುವಚನದಲ್ಲಿ ದೋಷವಿಲ್ಲವೆಂದು ವಚನಗಳಿಗೆ ಪಟ್ಟ ಕಟ್ಟಿದ್ದರು. ಅಂದು ಬಸವಣ್ಣ ಕಂಡ ಕನಸು ಅಕ್ಕ ಅನ್ನಪೂರ್ಣತಾಯಿ ಕಾರ್ಯ ರೂಪಕ್ಕಿಳಿಸಿದರು. ಅದು ಇಂದಿಗೂ ಮುಂದುವರಿಯುತ್ತಿದೆ ಎಂದು ಹೇಳಿದರು.

ಬಸವಕಲ್ಯಾಣದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೀರೇಶ ಕುಂಬಾರ ಕಾರ್ಯಕ್ರಮ ಉದ್ಘಾಟಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಿವೃತ್ತ ವ್ಯವಸ್ಥಾಪಕ ಕರಬಸಪ್ಪ ಬೀದೆ ಗುರುವಚನ ಗ್ರಂಥದ 13ನೇ ಆವೃತ್ತಿ ಬಿಡುಗಡೆ ಮಾಡಿದರು. ನಿವೃತ್ತ ಎಎಸ್‍ಐ ಮಾರುತಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಪರುಷ ಕಟ್ಟೆಯ ಚನ್ನಬಸವಣ್ಣ ಪ್ರಾರ್ಥನೆಗೈದರು. ಕಲ್ಪನಾ ಬೀದೆ ವಚನ ಗಾಯನ ಮಾಡಿದರು. ನೀಲಾಂಬಿಕೆ ಶಿವಕುಮಾರ ಪಾಖಾಲ್ ಭಕ್ತಿ ದಾಸೋಹಗೈದರು. ಶಿವಕುಮಾರ ಪಾಖಾಲ್ ಸ್ವಾಗತಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FfnvVrZr7jWFggbitEJjky

Share This Article
Leave a comment

Leave a Reply

Your email address will not be published. Required fields are marked *