ಚಿತ್ರದುರ್ಗ:
ಲಿಂಗಾಯತವನ್ನು ಜಾತಿ ಸೂಚಕವಾಗಿ ಬಳಸಿದರೆ ಮಹಾಪರಾಧ. ಧರ್ಮ ಸೂಚಕವಾಗಿ ಬಳಸದಿದ್ದರೆ ಮಹಾದ್ರೋಹವೆಂದು ಮುರುಘಾಮಠದ ಆಡಳಿತ ಮಂಡಳಿಯ ಜಯಬಸವಕುಮಾರ ಶ್ರೀ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದಿಂದ ಸೋಮವಾರ ನಡೆದ ಸೇವಾದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಇಡೀ ವಿಶ್ವದಲ್ಲಿ ಕಾಯಕ ಸಂಸ್ಕೃತಿ ಉಳ್ಳವರು, ಸತ್ಯ-ಸನ್ಮಾರ್ಗದಲ್ಲಿ ನಡೆಯುವ ಎಲ್ಲರೂ ಲಿಂಗಾಯತರು. 12ನೇ ಶತಮಾನದಲ್ಲೇ ಈ ಧರ್ಮ ಅಸ್ತಿತ್ವದಲ್ಲಿತ್ತು. ಈಗ ಜಾಗತಿಕವಾಗಿ ಸಾಂವಿಧಾನಿಕ ಮಾನ್ಯತೆ ಬಹಳ ಮುಖ್ಯವಾಗಿದ್ದು, ಎದೆಗಾರಿಕೆಯಿಂದ ಪಡೆಯಲು ಯಾರೂ ಮುಂದೆ ಬರುತ್ತಿಲ್ಲ ಎಂದು ಬೇಸರಿಸಿದರು, ಎಂದು ವಿಜಯವಾಣಿ ವರದಿಮಾಡಿದೆ.
ಸಮಾಜದ ಒಳಿತಿಗಾಗಿ ಅನೇಕ ಮಠಾಧೀಶರು ಶ್ರಮಿಸುತ್ತಿದ್ದಾರೆ. ಆದರೆ, ತಮ್ಮ ಶಿಷ್ಯರಿಗೆ ಬಾರ್ ಲೈಸನ್ಸ್ ನೀಡುವಂತೆ ರಾಜಕಾರಣಿಗಳ ಮೇಲೆ ಒತ್ತಡ ಹೇರುವ ಗುರುಗಳೂ ಇದ್ದಾರೆ ಎಂದು ಬೇಸರಿಸಿದರು.