ಗದಗ ಜಿಲ್ಲೆಯಲ್ಲಿ ಜರುಗುವ ಅಭಿಯಾನಕ್ಕೆ ನಾನು 5000 ರೂಪಾಯಿಗಳ ದಾಸೋಹದ ವಾಗ್ದಾನ ಮಾಡುತ್ತೇನೆ: ನಿಂಗನಗೌಡ ಹಿರೇಸಕ್ಕರಗೌಡ್ರ
ಗದಗ
ಲಿಂಗಾಯತ ಧರ್ಮ ಜಾಗೃತಿ ಅಭಿಯಾನಕ್ಕೆ ಬಸವ ಭಕ್ತರಿಂದ ಉತ್ಸಾಹದ ಪ್ರತಿಕ್ರಿಯೆ ಬರುತ್ತಿದೆ.
“ಗದಗ ಜಿಲ್ಲೆಯಲ್ಲಿ ಜರುಗುವ ಅಭಿಯಾನಕ್ಕೆ ನಾನು 5000 ರೂಪಾಯಿಗಳ ದಾಸೋಹದ ವಾಗ್ದಾನ ಮಾಡುತ್ತೇನೆ,” ಎಂದು ಬಸವ ದಳದ ನಿಂಗನಗೌಡ ಹಿರೇಸಕ್ಕರಗೌಡ್ರ ಬಸವ ಮೀಡಿಯಾದ ರವೀಂದ್ರ ಹೊನವಾಡ ಅವರಿಗೆ ಹೇಳಿದರು.
ಜೊತೆಗೆ ಅಭಿಯಾನದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
1) ಅಭಿಯಾನಕ್ಕೆ ಮಾಡಿಕೊಳ್ಳಬೇಕಾದ ಪೂರ್ವ ಸಿದ್ಧತೆಗಳು…
ಕನಿಷ್ಠ 2-3 ತಿಂಗಳು ಅವಧಿಯ ಪೂರ್ವ ಸಿದ್ಧತೆಯಾಗಬೇಕು.
ಅಭಿಯಾನಕ್ಕೆ ಬೇಕಾದವರನ್ನು ಸಂಪರ್ಕಿಸಿ ಕಾರ್ಯನಿರ್ವಾಹಕ ನಿರ್ದೇಶಕರನ್ನು ನೇಮಿಸುವುದು. ಅಭಿಯಾನದ ಉದ್ದಕ್ಕೂ ಇರಬೇಕಾದ ಮಹನೀಯರ, ಸ್ವಾಮಿಗಳ (ಬಸವನಿಷ್ಠರನ್ನು) ಪಟ್ಟಿ ಮಾಡಿ, ಜವಾಬ್ದಾರಿಯನ್ನು ಹಂಚುವುದು.
2) ಅಭಿಯಾನದಲ್ಲಿ ನಡೆಸಬಹುದಾದ ಚಟುವಟಿಕೆಗಳು…
(1) ಲಿಂಗಾಯತ ಭೂಯಿಷ್ಠ ವಚನಗಳ ಸ್ಪರ್ಧೆ – ಅಭಿಯಾನದ ಹಾದಿಯಲ್ಲಿ ಬರುವ ಗ್ರಾಮ/ಪಟ್ಟಣ/ನಗರಗಳಲ್ಲಿಯ ಹೈಸ್ಕೂಲ್/ಕಾಲೇಜ್ ವಿದ್ಯಾರ್ಥಿಗಳಿಗಾಗಿ. ಸಾರ್ವಜನಿಕರೂ ಭಾಗವಹಿಸಬಹುದು.
(2) ಬಹಳ ಜನ ಬಸವಾದಿ ಶರಣರ ಹೆಸರು ಹೇಳುವ ಸ್ಪರ್ಧೆ. ದೊಡ್ಡವರಿಗೇನೇ 770 ಅಮರ ಗಣಂಗಳ ಹೆಸರು ಗೊತ್ತಿಲ್ಲ. ಈ ಮುಖಾಂತರವಾದರೂ ಗೊತ್ತಾಗಲಿ.
3) ಅಚ್ಚ ಕನ್ನಡದ ಧರ್ಮ, ವಚನ ಧರ್ಮ. ಈ ವಿಷಯದ ಕುರಿತು ಪ್ರಬಂಧ ಸ್ಪರ್ಧೆ.
4) ಲಿಂಗಾಯತದ ಫಂಡಾಮೆಂಟಲ್-ಮೂಲ ಸ್ಥಂಭಗಳಾದ (a) ಅಷ್ಟಾವರಣ (b) ಪಂಚಾಚಾರ (c) ಷಟ್ ಸ್ಥಲಗಳು ಇವುಗಳ ಕುರಿತು ಎರಡೆರಡು ವಾಕ್ಯಗಳನ್ನು ಹೇಳುವುದು. (d) ಬಸವಾದಿ ಶರಣರ ಭಾವಚಿತ್ರ ಬಿಡಿಸುವುದು. (e) ಭಾರತದ ಸಂವಿಧಾನದ ಆಶಯಗಳು ಮತ್ತು ವಚನಗಳಲ್ಲಿ ಈ ಅಂಶಗಳಿರುವ ಬಗ್ಗೆ ಭಾಷಣ ಅಥವಾ ಪ್ರಬಂಧ ಸ್ಪರ್ಧೆ.
(f) ಗದಗ ತೋಂಟದಾರ್ಯ ಶ್ರೀಗಳು, ಮುಂಡರಗಿ ನಿಜಗುಣಾನಂದ ಸ್ವಾಮಿಗಳು ಮುಂತಾದವರಿಂದ ಮಾಡಿಸಿದ ಭಾಷಣದ ಸಂಕ್ಷಿಪ್ತ ಸಾರಾಂಶ ಬರಹ ಸ್ಪರ್ಧೆ.
ಈ ಎಲ್ಲವುಗಳಿಗೆ ಬೇಕಾದ ಹಣಕಾಸಿನ ಮೂಲ ವ್ಯವಸ್ಥೆ- ದಾಸೋಹಿಗಳನ್ನು – ಹುಡುಕಿದರೆ ಸಿಕ್ಕೇ ಸಿಗುತ್ತಾರೆ. ಗದಗ ಜಿಲ್ಲೆಯಲ್ಲಿ ಜರುಗುವ ಕಾರ್ಯಕ್ರಮಕ್ಕೆ ನಾನು 5000/- ರೂಪಾಯಿಗಳ ದಾಸೋಹದ ವಾಗ್ದಾನ ಈ ಮೂಲಕ ಮಾಡುತ್ತೇನೆ.
3) ಅಭಿಯಾನದ ಹೆಸರು…
” ಶರಣ ಧರ್ಮ/ ಲಿಂಗಾಯತ ಧರ್ಮ/ ವಚನ ಧರ್ಮ ಅಭಿಯಾನ ” ಇವುಗಳಲ್ಲಿ ಯಾವುದಾದರೂ ಪರವಾಗಿಲ್ಲ.
ಲಿಂಗಾಯತ ಧರ್ಮ ಹೆಸರು ಸೂಕ್ತ, ನಿಮ್ಮ ಅನಿಸಿಕೆಗಳು
ತುಂಬಾ ಚೆನ್ನಾಗಿವೆ.