ಧಾರವಾಡ
ಲಿಂಗಾಯತ ಅಸ್ಮಿತೆ ಉಳಿಸಲು ಸಮಾಜದ ಮಠಾಧೀಶರ ಒಕ್ಕೊಟದ ಮಹತ್ವದ ಸಭೆ ನಗರದ ಮಜ್ಜಿಗೆ ಪಂಚಪ್ಪ ಸಭಾಂಗಣದಲ್ಲಿ ಶುರುವಾಗಿದೆ.
ಗದಗಿನ ತೋಂಟದ ಸಿದ್ಧರಾಮ ಶ್ರೀಗಳ ಮತ್ತು ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಒಕ್ಕೊಟದ ಸದಸ್ಯರು ಭಾಗವಹಿಸಿದ್ದಾರೆ. ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳೂ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದಾರೆ.

ಲಿಂಗಾಯತರ ಮೇಲೆ ನಡೆಯುತ್ತಿರುವ ನಿರಂತರ ಸಾಂಸ್ಕೃತಿಕ ದಾಳಿಯನ್ನು ಎದುರಿಸುವ ಮತ್ತು ಹಿಂದುತ್ವ ಕಪಿಮುಷ್ಟಿಯಿಂದ ಸಮಾಜದ ಯುವಕರನ್ನು ಮುಕ್ತಿಗೊಳಿಸುವ ಮಾರ್ಗ ಸಭೆಯ ಮುಂದಿರುವ ಮುಖ್ಯ ವಿಷಯಗಳು. ಇದಕ್ಕೆಲ್ಲಾ ಪರಿಹಾರವಾಗಿ ರಾಜ್ಯಾದ್ಯಂತ ಒಂದು ಅಭಿಯಾನ ರೂಪಿಸಲು ಕೂಡ ಪ್ರಯತ್ನಿಸಲಾಗುವುದು ಎಂದು ತಿಳಿದು ಬಂದಿದೆ.

ಸಾಣೇಹಳ್ಳಿ ಶ್ರೀಗಳು ನಡೆಸಿದ್ದ ‘ಮತ್ತೆ ಕಲ್ಯಾಣ’ ಅಭಿಯಾನವನ್ನು ಎಲ್ಲಾ ಮಠಾಧೀಶರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾದ ಸಹಯೋಗದಲ್ಲಿ ವಿಸ್ತರಿಸುವ ಸಾಧ್ಯತೆಯನ್ನು ಚರ್ಚಿಸಲಾಗುವುದು.”
“ಸಮಾಜದ ಮುಂದಿರುವ ಆತಂಕಗಳ ಬಗ್ಗೆ ಲಿಂಗಾಯತ ಮಠಾಧಿಪತಿಗಳಾದವರು ನಾವು ಏನು ಮಾಡಬೇಕು, ಏನೇನು ಐಡಿಯಾಗಳಿವೆ ಎಂದು ಎಲ್ಲರಿಂದ ಕೇಳಿ ಚರ್ಚಿಸಲಾಗುವುದು. ನಂತರ ಸಭೆಯಲ್ಲಿ ಬರುವ ನಿರ್ಣಯವನ್ನು ಎಲ್ಲರೂ ಆಚರಣೆಗೆ ತರಲು ಶ್ರಮಿಸುತ್ತೇವೆ,” ಎಂದು ಒಕ್ಕೊಟದ ಕಾರ್ಯದರ್ಶಿ ಹಂದಿಗುಂದ ವಿರಕ್ತಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ಬಸವ ಮೀಡಿಯಾಕ್ಕೆ ಹೇಳಿದ್ದರು.

ಲಿಂಗಾಯತ ಯುವಕರ ಈ ಸಮಸ್ಯೆಯ ಬಗ್ಗೆ ಬಹಳ ದಿವಸದಿಂದ ವೈಯಕ್ತಿಕವಾಗಿ ಎಲ್ಲರೂ ಮಾತಾಡುತ್ತ ಇದ್ದೇವೆ. ಈಗ ಎಲ್ಲರೂ ಸೇರಿ, ಚರ್ಚೆ ಮಾಡಿ ಅದರ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಈ ಸಭೆ ಕರೆಯಲಾಗಿದೆ, ಎಂದು ಹೇಳಿದ್ದರು.
ನಾಡಿನ ಬಸವ ಭಕ್ತರು ಮಠಾಧೀಶರ ಸಭೆಯನ್ನು ಉತ್ಸಾಹದಿಂದ ಸ್ವಾಗತಿಸಿ, ಒಂದು ಮನವಿ ಪತ್ರದ ಮೂಲಕ ಅಭಿಪ್ರಾಯ, ಸಲಹೆಗಳನ್ನು ಪೂಜ್ಯರ ಜೊತೆ ಹಂಚಿಕೊಂಡಿದ್ದಾರೆ.
The important development is that the Federation of Lingayat Mathadisharas met in Dharwad under the leadership of Gaddag and Sanehalli Shree took a great decision to organi ise a movement all over the state with the objectives of (1). Vrestingbaeareness about Basava philosophy (2) to combat the RSS forces (3). to reach all lingayats rural side etc. The Dagad Shree mentioned about their role of Basava Media in education the Lingayat youths about the RSS and VHP in Karnatakaa.