ಲಿಂಗಾಯತ ದರ್ಶನ ಸ್ವಾನುಭವದ ದರ್ಶನ: ಸೌಭಾಗ್ಯ ಲಕ್ಷ್ಮೀ

ಸಂಡೂರು :

ಪಟ್ಟಣದ ಪ್ರಭುದೇವರು ಸಂಸ್ಥಾನ ವಿರಕ್ತಮಠದಲ್ಲಿ ಈಚೆಗೆ 386ನೇ ಶಿವಾನುಭವ ಗೋಷ್ಠಿ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಹೊಸಪೇಟೆಯ ನಿವೃತ್ತ ಶಿಕ್ಷಕಿ ಸೌಭಾಗ್ಯ ಲಕ್ಷ್ಮೀ ಅವರು ‘ಅಕ್ಕನ ವಚನಗಳು ಮತ್ತು ದಾರ್ಶನಿಕತೆ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಅವರು ಲಿಂಗಾಯತ ದರ್ಶನ ಸ್ವಾನುಭವದಿಂದ ಉಂಟಾದ ದರ್ಶನ‌. ಶೂನ್ಯತತ್ವವೇ ಲಿಂಗಾಯತ ತತ್ವದ ಜೀವಾಳ.  ಜೀವನದ ದುಃಖ ನಿವಾರಿಸಿ ಪರಮ ಮೋಕ್ಷ ಸಾಧನೆಯೇ ಅದರ ಗುರಿ. ದರ್ಶನ ಶಾಸ್ತ್ರದಲ್ಲಿ ಜೀವನ ಸತ್ಯವನ್ನು ಕಾಣುತ್ತೇವೆ. ಬಸವಾದಿ ಶರಣರು ದಾರ್ಶನಿಕರು.  ಲಿಂಗಾಯತ ದರ್ಶನದಲ್ಲಿ ಅಷ್ಟಾವರಣ, ಪಂಚಾಚಾರ ಹಾಗೂ ಷಟಸ್ಥಲಗಳನ್ನು ಕಾಣುತ್ತೇವೆ.  ಕಾಯಕ ಹಾಗೂ ದಾಸೋಹ ದರ್ಶನ ಶರಣರು ಕೊಟ್ಟ ಅತ್ಯಂತ ದೊಡ್ಡ ದರ್ಶನ. ಬಸವಣ್ಣ ಇಷ್ಟಲಿಂಗದ ಜನಕ.  ಇಷ್ಟಲಿಂಗವೇ ದೇವರು.  ಶರಣರ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಕ್ಕನ ಬಳಗದ ಕಾನೂನು ಸಲಹೆಗಾರಾದ ನಾಗರಾಜ ಗುಡೇಕೋಟೆ ಆಸ್ತಿ ಹಂಚಿಕೆಯಲ್ಲಿ ಮಹಿಳೆಯರ ಪಾಲಿನ ಕುರಿತು ಕಾನೂನು ಅರಿವು ಕುರಿತು ಮಾತನಾಡಿದರು.

ಬಳಗದ ಗೌರವಾಧ್ಯಕ್ಷೆ ಅಂಕಮನಾಳ ಶಾಂತಮ್ಮ ಅವರು ಸ್ವರಚಿತ ಕವನ ವಾಚನ ಮಾಡಿದರು. ಅಕ್ಕನ ಬಳಗದ ಅಧ್ಯಕ್ಷೆ ಸರೋಜಾ ಜ್ಯೋತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿ.ಎ. ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿರುವ ಸಂಡೂರು ತಾಲೂಕಿನ ನಾಗಲಾಪುರದ ಪೂರ್ಣಿಮಾ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

ಕೊಪ್ಪಳದ ವಿಜಯಲಕ್ಷ್ಮಿ ಕೊರ್ಲಹಳ್ಳಿ ವಚನ ಗಾಯನದ ಸೇವೆ ಸಲ್ಲಿಸಿದರು.  ಸಿದ್ದಮ್ಮ ಬೆಳ್ಳಕಟ್ಟೆ ವಚನ ಪಠಣ ಮಾಡಿದರು. ವಿಶಾಲಾಕ್ಷಿ ಉಗ್ರಾಣದ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಶಶಿಕಲಾ, ಶೋಭಾ ಮತ್ತು ಅನುಪಮಾ ಪ್ರಾರ್ಥಿಸಿದರು.  ಸುಮಿತ್ರ ಹೂಳಗುಂದಿ ಸ್ವಾಗತಿಸಿದರು. ವಿದ್ಯಾ ಶಶಿಧರ ವಂದಿಸಿದರು. ಕೆ.ಎಸ್. ರತ್ನಮ್ಮ, ವೀರಭದ್ರಪ್ಪ, ವೆಸ್ಕೊ ಕಂಪನಿ ಸಂಡೂರು ಇವರಿಂದ ದಾಸೋಹ ಸೇವೆ ನಡೆಯಿತು. ಶರಣೆಯರು, ಶರಣರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *

ಉಪಾಧ್ಯಕ್ಷೆ, ಅಕ್ಕನ ಬಳಗ, ಸಂಡೂರು