ಲಿಂಗಾಯತ ಧರ್ಮ ಅಭಿಯಾನಕ್ಕೆ ರಾಷ್ಟ್ರೀಯ ಬಸವದಳದ ಬೆಂಬಲ ಅವಶ್ಯವಿದೆ

ಬೆಂಗಳೂರು

ಅಭಿಯಾನದ ಜಂಟಿ ಸಮಿತಿಯಲ್ಲಿ ಭಾಗವಹಿಸುವಂತೆ ಡಾ. ಗಂಗಾ ಮಾತಾಜಿ ಅವರನ್ನು ಆಹ್ವಾನಿಸುವುದು ಬಹಳ ಅವಶ್ಯವಿದೆ. ಅಥವಾ ಅವರು ಸೂಚಿಸಿದ ಪ್ರತಿನಿಧಿಯನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು.

ಬೆಂಗಳೂರು

ವರ್ಷಗಳ ನಂತರ ಲಿಂಗಾಯತ ಧರ್ಮ ಜಾಗೃತ ಅಭಿಯಾನ ಮತ್ತೆ ಶುರುವಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಅಭಿಯಾನ ರೂಪಿಸಲು ರಚನೆಯಾಗಿರುವ ಜಂಟಿ ಸಮಿತಿ ಇದೇ ತಿಂಗಳ 19ರಂದು ಧಾರವಾಡದಲ್ಲಿ ಸಭೆ ಸೇರಲಿದೆ.

ಆದರೆ ಈ ಸಮಿತಿಯಲ್ಲಿ ರಾಷ್ಟ್ರೀಯ ಬಸವದಳ ಇಲ್ಲದಿರುವುದು ನೋಡಿ ಆಶ್ಚರ್ಯವಾಗಿದೆ.

ಲಿಂಗಾನಂದ ಅಪ್ಪಾಜಿ ಮತ್ತು ಮಾತಾಜಿ ಲಿಂಗಾಯತ ಧರ್ಮದ ರಕ್ಷಣೆಗೆ ಕಟ್ಟಿದ ಒಂದು ದೊಡ್ಡ ಗಣಾಚಾರಿ ಪಡೆ ರಾಷ್ಟ್ರೀಯ ಬಸವದಳ. ಎಲ್ಲಾ ಜಿಲ್ಲೆಗಳಲ್ಲಿಯೂ ಇಂದೂ ಸಕ್ರಿಯವಾಗಿರುವ ಸಂಘಟನೆಯಿದು. ಚಾಮರಾಜನಗರ, ಮೈಸೂರು, ಬೆಂಗಳೂರು, ತುಮಕೂರುಗಳಂತಹ ಜಿಲ್ಲೆಗಳಲ್ಲಿಯೂ ಕೆಲಸ ಮಾಡುತ್ತಿರುವ ಕಾರ್ಯಕರ್ತರಿದ್ದಾರೆ. ಮಧ್ಯ ಮತ್ತು ಉತ್ತರ ಕರ್ನಾಟಕಗಳಲ್ಲಿ ರಾಷ್ಟ್ರೀಯ ಬಸವದಳ ಇನ್ನೂ ಬಲಿಷ್ಠವಾಗಿದೆ.

ನಮ್ಮ ಕಾರ್ಯಕರ್ತರು ಹಳ್ಳಿ ಹಳ್ಳಿಗೆ ಹೋಗಿ ಧರ್ಮ ಪ್ರಚಾರ ಮಾಡುತ್ತಿದ್ದಾರೆ. ನಾನು ನೋಡಿರುವ ಹಾಗೆ ಲಿಂಗಾಯತ ಧರ್ಮದ ಸಂಘಟನೆಗಳಲ್ಲಿ ಬಹಳ ಬದ್ಧತೆಯಿರುವುದು ಇವರಿಗೇನೇ, ಯಾವುದೇ ಭೀತಿ, ಹಿಂಜರಿಕೆಯಿಲ್ಲದೆ ಕೆಲಸ ಮಾಡುತ್ತಿರುವುದೆಂದರೆ ಇವರೇ. ಗಂಗಾ ಮಾತಾಜಿ ಒಂದು ದಿನವೂ ಸುಮ್ಮನೆ ಕೂರುವುದಿಲ್ಲ.

ರಾಷ್ಟ್ರೀಯ ಬಸವದಳಕ್ಕೆ ಹೋರಾಟ ಮಾಡಿ ಅನುಭವವಿದೆ. 2017ರಲ್ಲಿ ಲಿಂಗಾಯತ ಧರ್ಮದ ರ್ಯಾಲಿಯನ್ನು ಬೀದರಿನಲ್ಲಿ ಶುರು ಮಾಡಿದ್ದೇ ಮಾತಾಜಿ. ಆಗಿನ್ನೂ ರಾಜಕಾರಣಿಗಳು ಬಂದಿರಲಿಲ್ಲ. ಆದರೂ ಕಾರ್ಯಕರ್ತರನ್ನು ಬಳಸಿಕೊಂಡು ದೊಡ್ಡ ಹೋರಾಟ ಶುರು ಮಾಡಿದ್ದರು. ಬೇರೆ ಬೇರೆ ಮಠಾದೀಶರನ್ನು ಒಪ್ಪಿಸಿ ಹೇಗೆ ಅವರ ಬೆಂಬಲ ಪಡೆಯಬೇಕೆಂದು ತೋರಿಸಿಕೊಟ್ಟವರೂ ಮಾತಾಜಿ ಅವರೇ. ಇಷ್ಟು ದೊಡ್ಡ ಸಂಘಟನೆಯನ್ನು ಸಕ್ರಿಯವಾಗಿ ಜೋಡಿಸಿಕೊಂಡರೆ ಮಾತ್ರ ಅಭಿಯಾನ ಜನರನ್ನು ಮುಟ್ಟುತ್ತದೆ.

ಅಭಿಯಾನದ ಜಂಟಿ ಸಮಿತಿಯಲ್ಲಿ ಭಾಗವಹಿಸುವಂತೆ ಡಾ. ಗಂಗಾ ಮಾತಾಜಿ ಅವರನ್ನು ಆಹ್ವಾನಿಸುವುದು ಬಹಳ ಅವಶ್ಯವಿದೆ. ಅಥವಾ ಅವರು ಸೂಚಿಸಿದ ಪ್ರತಿನಿಧಿಯನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು.

ರಾಷ್ಟ್ರೀಯ ಬಸವದಳ ಮಾತ್ರವಲ್ಲ ಅಭಿಯಾನ ಸಫಲವಾಗಬೇಕಾದರೆ ಎಲ್ಲಾ ಬಸವ ಸಂಘಟನೆಗಳನ್ನು ಹೀಗೆಯೇ ಜೊತೆಗೆ ಕರೆದುಕೊಂಡು ಹೋಗಬೇಕು. ಅವುಗಳ ಮುಖಂಡರನ್ನು, ಕಾರ್ಯಕರ್ತರನ್ನು ಮಾತನಾಡಿಸಿಯೇ ಅಭಿಯಾನದ ಉದ್ದೇಶ, ಕಾರ್ಯತಂತ್ರ, ಚಟುವಟಿಕೆಗಳನ್ನು ರೂಪಿಸಬೇಕು.

ಈ ಸಂದರ್ಭದಲ್ಲಿ ನನ್ನ ರಾಷ್ಟ್ರೀಯ ಬಸವದಳದ ಬಂಧುಗಳಿಗೆ ಒಂದು ಕಿವಿ ಮಾತು. ಲಿಂಗಾಯತ ಧರ್ಮದಲ್ಲಿ ವಿವಿಧ ರೀತಿಯ ಆಚರಣೆಗಳಿವೆ, ಬೇರೆ ಬೇರೆ ರೀತಿಯಲ್ಲಿ ಬದ್ಧತೆಯಿರುವ ಜನರಿದ್ದಾರೆ. ನಮ್ಮ ಆಚರಣೆ, ನಂಬಿಕೆಗಳೇ ಶ್ರೇಷ್ಠವೆಂದು ಬೇರೆಯವರ ಕಾಲೆಳೆಯುವುದು ಬೇಡ.

ಲಿಂಗಾಯತ ಧರ್ಮ ಜಾಗೃತವಾದರೆ ಪ್ರತಿಯೊಬ್ಬರೂ ಕ್ರಮೇಣ ಬಸವಾದಿ ಶರಣರು ತೋರಿಸಿದ ದಾರಿಗೆ ಬರುತ್ತಾರೆ. ಅಲ್ಲಿಯವರೆಗೆ ತಾಳ್ಮೆಯಿಂದ ಎಲ್ಲರ ಜೊತೆ ಮುಕ್ತವಾಗಿ ಕೆಲಸ ಮಾಡುವ ಮನೋಭಾವ ತೋರೋಣ.

Share This Article
8 Comments
  • ಈಗಿರುವ ಸಮೀತಿಯಲ್ಲಿ ಸಂಘಟನೆಯ ಅನುಭವ ಇರುವವರ ಸಂಖ್ಯೆ ಬಹಳ ಕಡಿಮೆ ಇದೆ , ರಾಷ್ಟ್ರೀಯ ಬಸವ ದಳ ಇಲ್ಲದೆ ಅಭಿಯಾನ ಯಶಸ್ವಿಯಾಗದು.

  • ಹೌದು ಸರ್. ನಿಮ್ಮ ಅಭಿಪ್ರಾಯವನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಎಲ್ಲಾ ಬಸವಪರ ಸಂಘಟನೆಗಳಲ್ಲಿ RBD ನೇ ಅತ್ಯಂತ ಬಲಿಷ್ಠವಾದ ಸಂಘಟನೆ. ಒಂದು ರೀತಿಯಲ್ಲಿ ಬೆನ್ನೆಲುಬು ಇದ್ದಂತೆ. ಮೊದಲನೇ JLM ಮಹಾಧಿವೇಶನ ಬಸವಕಲ್ಯಾಣ ದಲ್ಲಿ ಅತ್ಯಂತ ಯಶಸ್ವಿಯಾಗಲು ಕಾರಣ RBD ಯೇ ಎಂಬುದು ನಮಗೆ ಗೋಚರಿಸಿತು. ” ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ” ಎಂಬ ಬಸವಣ್ಣ ನವರ ವಚನದಂತೆ ಕಾರ್ಯ ಪ್ರವೃತ್ತರಾಗೋಣ.

  • ಶರಣರೇ ಯಾವುದೇ ಕಾರಣಕ್ಕೂ ರಾಜಕಾರಣಿಗಳನ್ನು ಸೇರಿಸಿಕೊಳ್ಳಬೇಡಿ ಹಾಲಿ ಆಗಲಿ ಮಾಜೀ ಆಗಲಿ ಬೇಡ ಅವರೇ ನಮ್ಮನ್ನು ದಿಕ್ಕುತಪ್ಪಿಸುತ್ತಾರೆ

    • ರಾ.ಬ.ದಳವು ಪೂಜ್ಯ ಲಿಂ.ಅಪ್ಪಾಜಿ ಮಾತಾಜಿ ಅವರ ಗರಡಿಯಲ್ಲಿ ಬೆಳೆದ ಗಟ್ಟಿಯಾದ ಸಂಘಟನೆಯಾಗಿದೆ. ಈ ಸಂಸ್ಥೆಯಲ್ಲಿ ಲಿಂಗಾಯತ ಧರ್ಮದ ಮಾನ್ಯತೆಯ ಆಂದೋಲನಕ್ಕೆ ಈ ಹಿಂದೆ ಹೋರಾಟ ಮಾಡಿದ ಅನುಭವವಿದೆ. ಇದರ ಜೊತೆಗೆ ಎಲ್ಲಾ ಬಸವಪರ ಸಂಸ್ಥೆಗಳೊಂದಿಗೆ ಒಗ್ಗಟ್ಟಾಗಿ ಮುಂದುವರಿಯುವುದು ಸರಿಯೆನಿಸುತ್ತದೆ.

    • ತತ್ವ ನಿಷ್ಠ ಶರಣರು ಕೇವಲ ರಾಷ್ಟ್ರೀಯ ಬಸವ ದಳದಲ್ಲಿ ಸಿಗುತ್ತಾರೆ ತತ್ವದ ವಿಚಾರ ಬಂದಾಗ ರಾಜಿ ಮಾಡಿಕೊಳ್ಳುವ ಮಾತೆ ಇಲ್ಲ ರಾಷ್ಟ್ರೀಯ ಬಸವ ದಳದ ಶರಣರಲ್ಲಿ ಅದಕ್ಕೆ ರಾಷ್ಟ್ರೀಯ ಬಸವ ದಳದ ಶರಣರ ವಿಶ್ವಾಸಕ್ಕೆ ತೆಗೆದುಕೊಂಡು ಹೊಗಿದರೆ ಜನ ಜಾಗೃತಿ ಅಭಿಯಾನ ಯಶಸ್ವಿಯಾಗಿ ನಡೆಯುತ್ತೆ ಶರಣು ಶರಣಾರ್ಥಿಗಳು

  • ಬಸವ ತತ್ವ ಸಾರುವ ಎಲ್ಲ ಸಂಘಟನೆಗಳು ಸೇರಿ, ಲಿಂಗಾಯತ ಧರ್ಮದ ಸಲುವಾಗಿ ಹೋರಾಟ ಮಾಡಬೇಕು.
    ಆ ಸಂಘಟನೆಗಳು ಮನುವಾದಿಗಳ ಜೊತೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಾವುದೇ ಲಾಭಕ್ಕಾಗಿ, ವಿಚಾರಕ್ಕಾಗಿ ಭಾಗವಹಿಸಿ, ಹೋರಾಟದ ದಿಕ್ಕು, ದಿಶೇ ತಪ್ಪಿಸಬಾರದು.
    ಇದು ಮುಖ್ಯ.

  • ಬಸವ/ಶರಣ/ವಚನ ತತ್ವಗಳಲ್ಲಿ ನಂಬಿಕೆಗಿರುವ ಎಲ್ಲರನ್ನೂ ಒಳಗೊಳ್ಳಲಿ.

  • ಪೂಜ್ಯ ಗಂಗಾಮಾತಾಜಿ ಅವರ ಪ್ರತಿನಿಧಿ ದಿ. 19.9.2025 ರ ಸಭೆಯಲ್ಲಿ ಉಪಸ್ಥಿತರಿರುತ್ತಾರೆ.

Leave a Reply

Your email address will not be published. Required fields are marked *

ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು ಘಟಕ