ಬೆಂಗಳೂರು
ಲಿಂಗಾಯತ ಧರ್ಮದ ಪರವಾಗಿ ಪುಣೆಯ ನಿವಾಸಿ ಡೈರೆಕ್ಟರ್ ಸತೀಶ್ ಕುಮಾರ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಳೆದ ಮೂರು ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಇದನ್ನು ಯೂಟ್ಯೂಬಿನಲ್ಲಿ ವೀಕ್ಷಿಸಿದ್ದಾರೆ.
ಸಾವಿರಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ. ಇವರೆಲ್ಲಾ ಬಹುತೇಕವಾಗಿ ಸತೀಶ್ ಅವರ ನಿಲುವಿಗೆ ಬಲವಾಗಿ ಬೆಂಬಲ ಸೂಚಿಸುತ್ತಿರುವುದನ್ನು ನೋಡಿದರೆ ಇಂದು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಿಗುತ್ತಿರುವ ಜನಮನ್ನಣೆ ಅರ್ಥವಾಗುತ್ತದೆ.
ಹಿಂದೂ ಧರ್ಮವಲ್ಲ, ಒಂದು ಜೀವನ ಶೈಲಿ ಮಾತ್ರ, ಲಿಂಗಾಯತರು ಹಿಂದೂಗಳಲ್ಲ, ಎಂದು ಸತೀಶ್ ಕುಮಾರ್ ಹೇಳುತ್ತಾರೆ. ಬ್ರಾಹ್ಮಣ್ಯದ ತಾರತಮ್ಯತೆಯ, ಮೂಢನಂಬಿಕೆಗಳ ವಿರುದ್ಧ ಬಸವಣ್ಣನವರು ಪರ್ಯಾಯ ಧರ್ಮ ಕಟ್ಟಿದರು.
ಇದನ್ನು ‘ವೀರಶೈವ ಲಿಂಗಾಯತ’ ಎಂದು ಕರೆಯಬಾರದು. ಬೇಕಾದರೆ ಬರೀ ‘ಲಿಂಗಾಯತ’ ಅಥವಾ ‘ಬಸವ ಲಿಂಗಾಯತ’ ಎಂದು ಕರೆಯಬಹುದು. ಲಿಂಗಾಯತ ಧರ್ಮದಲ್ಲಿ ಜಾತಿ ಪದ್ಧತಿ ಹೋದರೆ ಮಾತ್ರ ತಾನದನ್ನು ಒಪ್ಪಿಕೊಳ್ಳುತೇನೇಂದು ಸತೀಶ್ ಷರತ್ತು ಕೂಡ ಹಾಕುತ್ತಾರೆ.
ಸುಲುಭವಾದ ವಿಚಾರವನ್ನು ಸರಳವಾದ ಮಾತುಗಳಲ್ಲಿ ಸತೀಶ್ ವಿವರಿಸುತ್ತಾರೆ. ಇದರಿಂದಲೇ ವಿಡಿಯೋ ವೈರಲ್ ಆಗಿರುವ ಹಾಗೆ ಕಾಣುತ್ತದೆ. ಸರಳತೆ, ಸಮಾನತೆ, ವೈಚಾರಿಕತೆ ಲಿಂಗಾಯತ ಧರ್ಮದಲ್ಲಿರುವ ಆಕರ್ಷಕ ವಿಷಯಗಳು.
ಇದು ಲಿಂಗಾಯತ ಧರ್ಮದ ಪ್ರಚಾರಕರು ಗಮನಿಸಬೇಕಾದ ವಿಷಯ.