ಪುಣೆ
ಕರ್ನಾಟಕದ ಬಸವ ಪ್ರಣೀತ ವಿರಕ್ತ ಪರಂಪರೆಯ ಮಠಾಧೀಶರ ಪ್ರತಿಜ್ಞೆ ಹೀಗಿರಬೇಕು.
1 ನಾನು ಬಸವ ತತ್ವಗಳನ್ನು ವಚನ ಸಾಹಿತ್ಯವನ್ನು ಹೊರತು ಪಡಿಸಿ ಅನ್ಯ ಸಾಹಿತ್ಯವನ್ನು ಪ್ರಸಾರ ಮಾಡುವುದಿಲ್ಲ.
2 ನಾನು ಭಕ್ತರಿಂದ ನೇಮಕಗೊಂಡ ಶರಣ ಕಿಂಕರ ಎಂದು ನಂಬಿದ್ದೇನೆ.
3 ನಾನು ಸಾಮಾನ್ಯರಲ್ಲಿ ಅತಿ ಸಾಮಾನ್ಯನಾಗಿ ಸರಳ ಆಹಾರ ಸರಳ ಜೀವನ ಪದ್ದತಿಯನ್ನು ಕೈಗೊಳ್ಳುತ್ತೇನೆ. ನನಗೆ ಯಾವುದೇ ಸೇವಕರಿಲ್ಲದೆ ನನ್ನ ಕೆಲಸಗಳನ್ನು ನಾನೇ ಮಾಡುತ್ತೇನೆ.
4 ನಾನು ಶ್ರೀಮಠದಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳನ್ನು ಬಳಸದೆ ಸಾಮಾನ್ಯರು ಬಳಸುವ ವಾಹನಗಳಲ್ಲಿ ಚಲಿಸುವೆನು
5 ನನ್ನ ಶ್ರೀ ಮಠದಲ್ಲಿ ಎಲ್ಲ ಕಾಯಕ ವರ್ಗದ ಶರಣರ ಜಯಂತಿಯನ್ನು ಆಚರಿಸುತ್ತೇನೆ .
6 ನಮ್ಮ ಶ್ರೀಮಠದಲ್ಲಿ ಬಸವಣ್ಣನವರೇ ಲಿಂಗಾಯತ ಧರ್ಮಗುರು ವಚನಗಳೇ ಧರ್ಮ ಗ್ರಂಥ, ಷಟಸ್ಥಲಗಳೇ ಸಾಧನೆಯ ಮಾರ್ಗವೆಂದು ನಂಬಿ ನಡೆದುಕೊಳ್ಳುತ್ತೇವೆ
7 ನಮ್ಮ ಶ್ರೀ ಮಠದಲ್ಲಿ ಗದ್ದುಗೆ ಪೂಜೆ ಪಾದಪೂಜೆ ಮಾಡಿ ಜನರನ್ನು ಸುಲಿಗೆ ಮಾಡಲಾಗುವುದಿಲ್ಲ ಎಂದು ಮಠದ ಹೊರಗೆ ಫಲಕವನ್ನು ಹಾಕುತ್ತೇವೆ.
8 ನಮ್ಮ ಶ್ರೀಮಠದಲ್ಲಿ ಕಾಯಿ ಕರ್ಪುರ ಉರುಳು ಸೇವೆ ದೀಡ ನಮಸ್ಕಾರ ಮುಂತಾದ ಅನಿಷ್ಠ ಪದ್ದತಿಗಳನ್ನು ನಿಷೇದಿಸುತ್ತೇವೆ.
9 ರಥ ತೇರು ಜಾತ್ರೆ ಉತ್ಸವಗಳಂತಹ ಧಾರ್ಮಿಕ ಭಾವನೆಗಳನ್ನು ಕಡಿಮೆಗೊಳಿಸಿ ಶರಣರ ಅನುಭವ ಮಂಟಪದ ಮಾದರಿಯಲ್ಲಿ ವಚನಗಳ ಆಶಯದಂತೆ ಕಾರ್ಯಕ್ರಮಗಳನ್ನು ಏರ್ಪಡಿಸುವೆವು.
10 ನನ್ನ ಶ್ರೀಮಠದಲ್ಲಿ ನನ್ನ ನಂತರ ನನ್ನ ಸಂಬಂಧಿಕರನ್ನು ನೆಂಟರನ್ನು ನನ್ನ ಒಳಪಂಗಡದ ಜನರನ್ನು ಯಾವುದೇಕಾಲಕ್ಕೂ ಶ್ರೀ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡುವುದಿಲ್ಲ
11 ನನ್ನ ಶ್ರೀ ಮಠದಲ್ಲಿ ಅಡ್ಡ ಪಲ್ಲಕ್ಕಿಉತ್ಸವ ಮತ್ತು ಸಿಂಹಾಸನಗಳನ್ನು ಸಂಪೂರ್ಣ ತೆಗೆದು ಹಾಕಲಾಗುವುದು
12 ಶ್ರೀಮಠದ ಹಣದ ವ್ಯವಹಾರವನ್ನು ಪ್ರತಿ ವರ್ಷ ಭಕ್ತರ ಮುಂದೆ ಇಟ್ಟು ಪಾರದರ್ಶಕವಾಗಿರುತ್ತೇವೆ.
13 ನನ್ನ ಶ್ರೀ ಮಠದಲ್ಲಿ ಅಸ್ಪ್ರಶ್ಯ ನಿವಾರಣೆಗೆ ಆದ್ಯತೆ ನೀಡಿ ಎಲ್ಲಾ ಕಾಯಕ ವರ್ಗದ ಶ್ರಮಜೀವಿಗಳನ್ನು ಒಂದೇ ರೀತಿಯಲ್ಲಿ ಕಾಣುತ್ತೇವೆ.
14 ನನ್ನ ಶ್ರೀ ಮಠವು ನಡೆಸುವ ಶೈಕ್ಷಣಿಕ ಸಂಸ್ಥೆಗಳಲ್ಲಿಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡೊನೇಷನ್ ಇಲ್ಲದೆ ಮೆಡಿಕಲ್ ಇಂಜಿನಿಯರಿಂಗ್ ಮುಂತಾದ ತರಬೇತಿ ಶಿಕ್ಷಣ ಕೋರ್ಸಗಳಿಗೆ ಪ್ರವೇಶ ನೀಡುವುದಲ್ಲದೆ ಅವರಿಗೆ ಉದ್ಯೋಗ ಖಾತರಿ ಯೋಜನೆಗೆ ಸಹಾಯ ಮಾಡುತ್ತೇವೆ.
15 ನನ್ನ ಶ್ರೀ ಮಠದಲ್ಲಿ ಸಂಸ್ಕೃತ ಪಾಠ ಶಾಲೆ ವೈದಿಕ ಪಾಠ ಶಾಲೆಗಳನ್ನು ಮುಚ್ಚಿ ಅವುಗಳ ಸ್ಥಳದಲ್ಲಿ ವಚನ ಪಾಠ ಶಾಲೆಗಳನ್ನು ತೆರೆಯುತ್ತೇವೆ.
16 ನನ್ನ ಶ್ರೀಮಠದಲ್ಲಿ ಆನೆ ಒಂಟಿ ಕುದುರೆ ಮುಂತಾದ ಪ್ರಾಣಿಗಳನ್ನು ಸಾಕಿ ಸರಕಾರೀ ನಿಯಮವನ್ನು ಉಲ್ಲಂಘನೆ ಮಾಡುವುದಿಲ್ಲ
17 ವಿಜಯಪುರದ ಹರಿಜನ ಹುಡುಗಿ ದಾನಮ್ಮ ಕುದುರೆಮೋತಿ ಪಾರವ್ವ ಮುಂತಾದ ಮುಗ್ಧ ಮಹಿಳೆಯರ ಮೇಲೆ ಅತ್ಯಾಚಾರ ಕೊಲೆ ಮಾಡಿದಾಗ ನಾನು ಬಹಿರಂಗವಾಗಿ ಕ್ರೂರ ವ್ಯವಸ್ಥೆಯ ವಿರುದ್ಧ ಹೋರಾಡುತ್ತೇನೆ. ಕಿತ್ತೂರಿನ ಶ್ರೀ ಮಠದಲ್ಲಿ ಶಿಶು ಬಲಿ ಕೊಟ್ಟಂತಹ ಪ್ರಕರಣಗಳು ಕಂಡು ಬಂದಲ್ಲಿ ಅದನ್ನು ಉಗ್ರವಾಗಿ ಖಂಡಿಸಿ ಹೋರಾಡುತ್ತೇವೆ.
18 ನಮ್ಮ ಶ್ರೀಮಠದಲ್ಲಿ ಮಹಿಳಾ ಹೋಲಿಗೆ ಕೇಂದ್ರ ನೇಯೆಗೆಯ ತರಬೇತಿ ಪೇಂಟಿಂಗ್ ಮುಂತಾದ ಗೃಹ ಕೈಗಾರಿಕೆಗಳ ಜೊತೆಗೆ ಉಪ್ಪಿನ ಕಾಯಿ ಹಪ್ಪಳ ಮುಂತಾದ ಖಾದ್ಯ ವಸ್ತುಗಳ ತಯಾರಿಕೆಗೆ ಮಹಿಳೆಯರಿಗೆ ಕಡಿಮೆ ದರದ ಬಡ್ಡಿಯಲ್ಲಿ ಸಾಲವನ್ನು ನೀಡುತ್ತೇವೆ. ಮಹಿಳಾ ಸಬಲೀಕರಣ ನಿರುದ್ಯೋಗ ಸಮಸ್ಯೆಗೆ ಸ್ಪಂದಿಸುತ್ತೇವೆ
19 ಯಾವುದೇ ರಾಜಕೀಯ ಪಕ್ಷಗಳ ಜೊತೆಗೆ ಒಳಒಪ್ಪಂದ ಮಾಡಿಕೊಂಡು ಬಸವ ತತ್ವ ಸಿದ್ಧಾಂತಗಳನ್ನು ಬಲಿಕೊಡುವುದಿಲ್ಲ.
20 ನಮ್ಮ ಶ್ರೀಮಠದ ಸುತ್ತುಮುತ್ತಲಿನ ಪ್ರದೇಶಗಲ್ಲಿ ಶರಣರ ಸ್ಮಾರಕಗಳು ಕಂಡು ಬಂದಲ್ಲಿ ಅವುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ನಾವೇ ಹೊರುತ್ತೇವೆ.
21 ಮಠದ ಆದಾಯದಲ್ಲಿ ಮಠದ ಅಭಿವೃದ್ಧಿ ಮಾಡುತ್ತಾ ಸರಕಾರೀ ಅನುದಾನವನ್ನು ಬೇಡುವುದಿಲ್ಲ
22 ನೈಸರ್ಗಿಕ ಸಂಪತ್ತು ಕೃಷಿ ಅರಣ್ಯ ಮುಂತಾದ ಸಂರಕ್ಷಣೆಗೆ ನಾವು ಬದ್ಧರು
23 ನನ್ನ ಶ್ರೀ ಮಠದಲ್ಲಿ ಯಾವುದೇ ಕಾರಣಕ್ಕೂ ಮಠಾಧೀಶರ ಹುಟ್ಟು ಹಬ್ಬ ಪೀಠಾರೋಹಣ ಉತ್ಸವ ತುಲಾ ಭಾರ ಲಕ್ಷ ದೀಪೋತ್ಸವ ಕೋಟಿ ಬಿಲ್ವಾರ್ಚನೆ
ತುಪ್ಪದ ದೀವಿಗೆ ಉತ್ಸವ ಮುಂತಾದ ಶೋಷಣೆಗಳಿಗೆ ಅವಕಾಶ ನೀಡುವುದಿಲ್ಲ
24 ಮಠದ ಕಾರ್ಯಕ್ರಮದಲ್ಲಿ ಭಕ್ತರೊಂದಿಗೆ ಸಮಾನ ವೇದಿಕೆಯಲ್ಲಿ ಕುಳಿತು ಕಾರ್ಯಕ್ರಮ ನಡೆಸುತ್ತೇನೆ
25 ನಮ್ಮ ಶ್ರೀ ಮಠದ ವತಿಯಿಂದ ವರ್ಷಕ್ಕೊಮ್ಮೆ ಬಡ ಭಕ್ತರ ಮಕ್ಕಳ ಕಲ್ಯಾಣ ಮಹೋತ್ಸವವನ್ನು ನಮ್ಮ ಶ್ರೀ ಮಠದ ಖರ್ಚಿನಲ್ಲಿ ಬಸವ ತತ್ವದ ಅನುಗುಣವಾಗಿ
ಏರ್ಪಡಿಸುತ್ತೇವೆ.
26 ಸಾವಯವ ಕೃಷಿಯನ್ನು ಅನುಷ್ಟಾನಗೊಳಿಸುತ್ತೇವೆ
27 ನಮ್ಮ ಶ್ರೀ ಮಠದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯದೆ ಅಪ್ಪಟ ಕನ್ನಡ ಭಾಷೆಯಲ್ಲಿ ನಮ್ಮೂರಿನ ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ನೀಡುತ್ತೇವೆ.
28 ನಮ್ಮ ಶ್ರೀ ಮಠದಲ್ಲಿ ಬಸವಣ್ಣ ಡಾ ಫ ಗು ಹಳಕಟ್ಟಿ ಹರ್ಡೇಕರ ಮಂಜಪ್ಪ ಎಡೆಯೂರು ತೋಂಟದ ಸಿದ್ಧಲಿಂಗ ಯತಿಗಳ ಭಾವ ಚಿತ್ರವನ್ನು ಉಳಿದ 256 ಶರಣರ ಭಾವ ಚಿತ್ರಗಳೊಂದಿಗೆ ಅನಾವರಣಗೊಳಿಸಿ ಅವರ ಬಗ್ಗೆ ಚಿಕ್ಕ ಪುಟ್ಟ ಪರಿಚಯ ಪುಸ್ತಕವನ್ನು ಉಚಿತವಾಗಿ ಕೊಡುತ್ತೇವೆ.
29 ಶರಣರ ಬಗ್ಗೆ ನಡೆಯುವ ವಿಶ್ವ ವಿದ್ಯಾಲಯದ ಸಂಶೋಧನಾ ಪ್ರಬಂಧಗಳನ್ನು ನಾವು ನಮ್ಮ ಶ್ರೀ ಮಠದಿಂದ ಪ್ರಕಟಿಸುತ್ತೇವೆ.
30 ನಮ್ಮ ವಿರಕ್ತ ಪರಂಪರೆಗೆ ಎಡೆಯೂರು ಸಿದ್ಧಲಿಂಗ ಯತಿಗಳು ಜೇವರ್ಗಿ ಷಣ್ಮುಖ ಶಿವಯೋಗಿಗಳು ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಮುರುಗೋಡ ಶ್ರೀ ಮಹಾಂತ ಶಿವಯೋಗಿಗಳು , ಗುರು ಮಲ್ಲೇಶ್ವರ ಸ್ವಾಮಿಗಳು ಇಳಕಲ್ಲಿನ ಲಿಂಗೈಕ್ಯ ಡಾ ಮಹಾಂತ ಸ್ವಾಮಿಗಳು ಗದಗಿನ ಲಿಂಗೈಕ್ಯ ಡಾ ಸಿದ್ಧಲಿಂಗ ಸ್ವಾಮಿಗಳು ಮಾದರಿಯನ್ನಾಗಿ ಅವರ ಬೆಳಕಿನಲ್ಲಿ ಸಾಗುತ್ತೇವೆ.
ಈ ಎಲ್ಲಾ ಮೇಲಿನ ಪ್ರತಿಜ್ಞೆಗಳನ್ನು ಮಾಡಿ ನಾನು ನಾಡಿನ ತುಂಬೆಲ್ಲ ಬಸವ ಸಂಸ್ಕೃತಿಯ ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಬಸವಾದಿ ಶರಣರ ಮೇಲೆ ಬಸವ ಭಕ್ತರ ಸಮ್ಮುಖದಲ್ಲಿ ಪ್ರಮಾಣ ಮಾಡುತ್ತೇನೆ.
ಇದನ್ನು ಕನಿಷ್ಠ ಹತ್ತು ಜನರಿಗೆ ಫಾರ್ವರ್ಡ್ ಮಾಡಿ ಬಸವ ಭಕ್ತಿಗೆ ಪಾತ್ರರಾಗಲು ಕೋರಿಕೆ