ಮಠಗಳು ತಮ್ಮ ಭಕ್ತರಿಗೆ ಲಿಂಗಾಯತ ಧರ್ಮ, ಆಚರಣೆಗಳ ಬಗ್ಗೆ ಅರಿವು ಮೂಡಿಸುವ ತನಕ ಲಿಂಗಾಯತರು ಗುಲಾಮಿತನದಲ್ಲಿ ಮುಂದುವರೆಯುತ್ತಾರೆ.
ಮೈಸೂರು
ಲಿಂಗಾಯತ ಧರ್ಮದ ಮುಂದಿರುವ ಸವಾಲುಗಳನ್ನು ಎದುರಿಸಲು ಜನವರಿ 17 ಧಾರವಾಡದಲ್ಲಿ ಲಿಂಗಾಯತ ಮಠಗಳ ಒಕ್ಕೂಟದ ವತಿಯಿಂದ ಒಂದು ಮಹತ್ವದ ಸಭೆ ಕರೆದಿರುವುದು ಸ್ವಾಗತಾರ್ಹ.
ಬಸವ ತತ್ವದ ಒಬ್ಬ ಸಾಮಾನ್ಯ ಹೋರಾಟಗಾರನಾಗಿ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಲಿಂಗಾಯತ ಮಠಗಳ ಬಕ್ಕೂಟ ಸ್ಥಾಪನೆಯಾಗಿ ಇಲ್ಲಿಗೆ ನಾಲ್ಕು ವರ್ಷಗಳಾಯಿತು. ಅದರ ದೇಯೋದ್ದೇಶವೇನು, ರಾಜ್ಯಾದ್ಯಂತ ವ್ಯವಸ್ಥಿತವಾಗಿ ಸಂಘಟಿತವಾಗಿದೆಯೇ, ಇಲ್ಲಿಯವರೆಗೆ ಮಾಡಿರುವುದೇನು, ನನಗೆ ಸ್ಪಷ್ಟವಾಗಿಲ್ಲ.
ನನಗೆ ತಿಳಿದ ಮಟ್ಟಿಗೆ ಮಠಗಳ ಒಕ್ಕೂಟ ಸ್ಥಾಪನೆಯಾಗಿದ್ದು ಲಿಂಗಾಯತ ಸಮುದಾಯದಲ್ಲಿ ಶರಣ ಸಂಸ್ಕೃತಿ ಬೆಳೆಸಲು ಮತ್ತು ನಿಜಾಚರಣೆಗಳನ್ನು ಜನಪ್ರಿಯಗೊಳಿಸಲು. ಈ ದಿಕ್ಕಿನಲ್ಲಿ ಮಾಡಿರುವ ಕೆಲಸವೇನು, ನನಗೆ ಸ್ಪಷ್ಟವಾಗಿಲ್ಲ, ಆದರೆ ಇನ್ನು ಮುಂದೆ ನಿಜಾಚರಣೆಗಳನ್ನು ಜನರಿಗೆ ತಲುಪಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿಕೊಳುತಿದ್ದೇನೆ. .
ಶೇಕಡಾ 10ರಷ್ಟು ಲಿಂಗಾಯತರು ಇಲ್ಲಿಯವರೆಗೆ ಶರಣ ಸಂಸ್ಕೃತಿಗೆ ಬಂದಿರಬಹುದು. ಉಳಿದವರು ಇನ್ನೂ ಕಂದಾಚಾರಗಳಲ್ಲೇ ಮುಳುಗಿದ್ದಾರೆ.
ಎಲ್ಲಿಯವರೆಗೆ ಮಠಗಳು ತಮ್ಮ ಭಕ್ತರಿಗೆ ಲಿಂಗಾಯತ ಧರ್ಮ ಮತ್ತು ಆಚರಣೆಗಳನ್ನು ತಿಳಿಸಿಕೊಡಲಾಗುವುದಿಲ್ಲವೋ ಅಲ್ಲಿಯವರೆಗೆ ಲಿಂಗಾಯತ ಸಮುದಾಯ ಗುಲಾಮಿತನದಲ್ಲಿ ಮುಂದುವರಿಯುತ್ತದೆ. ಈ ಗುಲಾಮಗಿರಿಯಿಂದಲೇ ಸಮುದಾಯದ ಮೇಲೆ ದಾಳಿಯಾಗುತ್ತಿದೆ ಎಂಬ ಕನಿಷ್ಠ ಅರಿವು ಇಲ್ಲದೆಯೇ ನಾವು ಬದುಕುತ್ತಿದ್ದೇವೆ.
ಮಠಗಳ ಒಕ್ಕೂಟ ಮೊದಲು ಶಿವಯೋಗ, ನಿಜಾಚಾರಣೆ, ಲಿಂಗಾಯತ ಸಿದ್ದಾಂತ ಮತ್ತು ಲಿಂಗಾಯತ ಧರ್ಮದ ಬಗ್ಗೆ ಪ್ರಚಾರ ಮಾಡಬೇಕು. ಅದರಿಂದ ಸಮುದಾಯ ಜಾಗೃತಗೊಂಡರೇ ಯಾವುದೇ ದಾಳಿಯನ್ನು ತಡೆಯುವುದು ಸುಲುಭವಾದ ಕೆಲಸವಾಗುತ್ತದೆ.
ಲಿಂಗಾಯತ ಧರ್ಮ ಒಂದು ಅವೈದಿಕ ಧರ್ಮ ಮತ್ತು ಇತರೆ ಆರು ಧರ್ಮಗಳ ಹಾಗೆ ಸಂವಿಧಾನ ಮಾನ್ಯತೆ ಪಡೆಯುವ ಎಲ್ಲಾ ಅರ್ಹತೆಗಳಿವೆ ಎನ್ನುವ ಸತ್ಯವನ್ನು ಲಿಂಗಾಯತರಿಗೆ ತಲುಪಿಸಬೇಕು.
ಈ ದಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ಮಾಡಿ ಯುದ್ದೋಪಾದಿಯಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಮನೆಮನೆಗಳಲ್ಲಿ ಲಿಂಗಾಯತ ಧರ್ಮ ಸ್ಥಾಪನೆ ಮಾಡುವ ಕೆಲಸವಾಗಬೇಕಿದೆ. ಜನರು ಬಸವತತ್ವ ಪ್ರಚಾರಕರ ಮಾತು ಕೇಳುವುದಿಲ್ಲ. ಆದರೆ ಮಠದ ಸ್ವಾಮಿಗಳ ಮಾತನ್ನು ಸುಲಭವಾಗಿ ಕೇಳುತ್ತಾರೆ.
ಸಾಮಾನ್ಯ ಕಾರ್ಯಕರ್ತರ ಮನವಿ ಸೂಕ್ತವಾಗಿದೆ ಮಠಾಧೀಷರು ಒಗ್ಗೂಡಬೇಕು.