ಲಿಂಗಾಯತ ಸಂಘಟನೆ ಕಾರ್ಯಕ್ರಮದಲ್ಲಿ ಪ್ರೊ. ವಿರೂಪಾಕ್ಷ ದೊಡಮನಿ ಉಪನ್ಯಾಸ

ಬೆಳಗಾವಿ

ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ರವಿವಾರದಂದು ಸಾಮೂಹಿಕ ಪ್ರಾಥ೯ನೆ, ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಪ್ರೊ. ವಿರೂಪಾಕ್ಷ ಬಾ. ದೊಡಮನಿ ಉಪನ್ಯಾಸ ನೀಡುತ್ತ, ಜ್ಞಾನಜ್ಯೋತಿಗೆ ಸಾಧುಮಾನ್ಯರು ಎಣ್ಣೆ ಹಾಕಬೇಕು. ನೋಡುವ ದೃಷ್ಟಿ ಬದಲಾಗಬೇಕು. ಸಮಯ ಮಾಡಿಕೊಂಡು ಶರಣರ ಮಾತು ಆಲಿಸಬೇಕು. ಮನಸಿಗೆ ಬಂದ್ದದೆಲ್ಲಾ ಬಯಸಬಾರದು. ದೀಪದ ಗುಣ ಅಳವಡಿಸಿಕೊಳ್ಳಬೇಕು, ಅತಿಥಿಗಳನ್ನು ಆದರಿಸಬೇಕು. ಶಿಷ್ಯನೊವ೯ನು ನನ್ನ ಹೆಸರು ಅಜರಾಮರಾಗಿ ಉಳಿಯಲು ಏನು ಮಾಡಬೇಕು ಎಂದಾಗ ಗುಡ್ಡದ ತುದಿಗೆ ಕರೆದುಕೊಂಡು ಹೋಗಿ ಪ್ರತಿದ್ವನಿ ಹೇಗೆ ಬರುವುದು ತೋರಿಸಿದರು. ನಾವು ಹೇಗೆ ಇರುತ್ತೇವೆಯೋ ಹಾಗೆ ಜೀವನ ನಮ್ಮಲ್ಲಿ ಅರಿಷಡ್ವಗಳು ಗೆಲ್ಲಬೇಕು ಮನಸ್ಸು ಸ್ವಚ್ಛವಿರಬೇಕು. ನಡೆ ನುಡಿ ಒಂದೆ ಇರಬೇಕು. ನಮ್ಮ ತಪ್ಪುಗಳನ್ನ ನಾವು ತಿದ್ದಿಕೊಳ್ಳಬೇಕು. ಶರಣರ ಸಂತರ ಆದಶ೯ಗಳನ್ನ ಅಳವಡಿಸಿಕೊಳ್ಳಬೇಕು ಎಂದರು.

ಬಿ. ಪಿ. ಜೇವಣಿಯವರು ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಆನಂದ ಕರಕಿ, ವಿ. ಕೆ. ಪಾಟೀಲ, ಅಕ್ಕಮಹಾದೇವಿ ತೆಗ್ಗಿ, ಜಯಶ್ರೀ ಚಾವಲಗಿ, ದಾಕ್ಷಾಯಿಣಿ ಪೂಜಾರ, ಸುನಿಲ ಸಾಣಿಕೊಪ್ಪ ವಚನ ವಿಶ್ಲೇಷಣೆ ಮಾಡಿದರು. ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ದ್ರಾಕ್ಷಯಿಣಿ ಪೂಜಾರ ದಾಸೋಹ ಸೇವೆಗೈದರು. ಇದೇ ಸ೦ದಭ೯ದಲಿೢ ಶಿವಪುತ್ರಯ್ಯ ಪೂಜಾರ ಇವರ ೮೧ನೇಯ ಹುಟ್ಟುಹಬ್ಬ ಆಚರಿಸಲಾಯಿತು.

ಮಹಾಂತೇಶ ತೋರಣಗಟ್ಟಿ, ಆನಂದ ಕರಕಿ, ಬಸವರಾಜ ಪೂಜಾರ, ಮಹಾಂತೇಶ ಇ೦ಚಲ, ಬಸವರಾಜ ಕರಡಿಮಠ, ಕಾಡೆ,ಸುಶೀಲಾ ಗುರವ, ದೊಡಗೌಡ ಪಾಟೀಲ, ರುದ್ರಗೌಡ ಪಾಟೀಲ, ಗಂಗಪ್ಪ ಉಣಕಲ್, ಮಹಾಂತೇಶ ಮೆಣಸಿನಕಾಯಿ, ಬಸವರಾಜ ಛಟ್ಟರಕಿ, ಸಿದ್ಧಪ್ಪ ಸಾರಾಪೂರೆ, ಮರಲಿಂಗಣ್ಣವರ, ಗುರುಸಿದ್ದಪ್ಪ ರೇವಣ್ಣವರ, ಕೆಂಪಣ್ಣಾ ರಾಮಾಪೂರೆ ದಂಪತಿಗಳು, ಲಕ್ಷೀಕಾಂತ ಗುರವ, ಶೇಖರ ವಾಲಿಇಟಗಿ, ತಿಗಡಿ ದಂಪತಿಗಳು, ಶಿವಾನಂದ ನಾಯಕ, ಎಸ್ ಎಸ್ ಪೂಜಾರ ದಂಪತಿಗಳು, ಗಂಗಾಧರ ಹಿತ್ತಲಮನಿ, ಶರಣ ಶರಣೆಯರು ಉಪಸ್ಥತರಿದ್ದರು. ಆನಂದ ಕಕಿ೯ ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *