ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ, ಉಪನ್ಯಾಸ

ಬೆಳಗಾವಿ:

ಪ್ರಕೃತಿಯಲ್ಲಿ ಸ್ತ್ರೀ ಪುರುಷ ಎಂಬ ಭೇದಭಾವವಿಲ್ಲ. ಯಾರಿಗೆ ಆಗಲಿ ಅಹಂಕಾರ ಇರಬಾರದು. ಮಹಿಳೆಯರು ಸ್ವಯಂಶಕ್ತಿ ಬೆಳೆಸಿಕೊಂಡು ಸ್ವಾಭಿಮಾನಿಗಳಾಗಬೇಕೆಂದು ಬೆಳಗಾವಿ ಬಸವತತ್ವ ಅನುಭಾವ ಕೇಂದ್ರದ ವಾಗ್ದೇವಿ ತಾಯಿ ಹೇಳಿದರು.

ಡಾ. ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ರವಿವಾರ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಸತಿ ಎಂದರೆ ಸರ್ವ ಸಮರ್ಪಣೆಯವಳು. ತನು, ಮನ ಎಲ್ಲ ಅರ್ಪಣೆ ಮಾಡಿಕೊಳ್ಳುವವಳು. ಮಾತೆಯಾದ ಮಹಿಳೆ ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸಾಂತ್ವಾನ ಗುಣಗಳನ್ನು ತನ್ನ ಜನನದಿಂದಲೇ ಮೈಗೂಡಿಸಿಕೊಂಡು ಬಂದಿದ್ದಾಳೆ. ಸ್ತ್ರೀ ಸಾಗರವಿದ್ದಂತೆ, ಪುರುಷ ಅದರಲ್ಲಿನ ಅಲೆ ಇದ್ದಂತೆ. ನಿರ್ಮಾಣ, ನಿರ್ವಹಣೆ, ನಿರ್ನಾಮ ಸ್ತ್ರೀಯಿಂದಲೇ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಅಧ್ಯಕ್ಷ ಈರಣ್ಣಾ ದೇಯಣ್ಣವರ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ, ಅಕ್ಕಮಹಾದೇವಿ, ಬೆಳವಡಿ ಮಲ್ಲಮ್ಣ, ಅಕ್ಕಮಹಾದೇವಿಯಂಥವರ ಆದರ್ಶ ಗುಣ ಬೆಳೆಸಿಕೊಳ್ಳಬೇಕು ಎಂದರು.

ಮಹಾದೇವಿ ಅರಳಿ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಲಕ್ಷ್ಮಿ ಜೇವಣಿ ಕಾರ್ಯಕ್ರಮ ನಿರೂಪಿಸಿದರು.

ಸಂಗಮೇಶ ಅರಳಿ ವಂದಿಸಿದರು. ಜಯಶ್ರೀ ಚಾವಲಗಿ ದಾಸೋಹ ಸೇವೆ ವಹಿಸಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಸುಜಾತಾ ಮತ್ತಿಕಟ್ಟಿ, ಅನಿತಾ ಚಟ್ಟೇರ, ಶೋಭಾ ದೇಯಣ್ಣವರ, ಶಾಂತಾ ಚಿನಿವಾಲರ, ವಿದ್ಯಾ ಕರಕಿ, ಶಾಂತಾ ಕಂಬಿ, ಸುರೇಖಾ ಮುಧೋಳ, ಶೋಭಾ ಅಂಗಡಿ, ಸುನಂದಾ ಕೆಂಪಿಗೌಡರ, ನಂದಾ ಬಗಲಿ, ಸದಾಶಿವ ದೇವರಮನಿ, ವಿ.ಕೆ. ಪಾಟೀಲ, ಶೇಖರ ವಾಲಿಇಟಗಿ, ಮಹಾಂತೇಶ ಮೆಣಸಿನಕಾಯಿ, ಗುರುಸಿದ್ದಪ್ಪ ರೇವಣ್ಣವರ, ಶಾರದಾ ಹಿರೇಮಠ, ಶಿವಾನಂದ ನಾಯಕ, ಆನಂದ ಕರಕಿ, ಮತ್ತಿತರ ಶರಣ-ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *