ಮೈಸೂರು ಬಸವ ಜಯಂತಿಗೆ ಸಿದ್ಧವಾಗಲು 21 ಜನರ ಸಮಿತಿ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು:

ನಗರದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ – 2026 ಆಚರಣೆಯ ಪೂರ್ವಸಿದ್ಧತೆಗೆ ಅನುಗುಣವಾಗಿ ಲಿಂಗಾಯತ ಸಂಘ-ಸಂಸ್ಥೆಗಳ ವತಿಯಿಂದ 21 ವಿವಿಧ ಸಮಿತಿಗಳನ್ನು ರಚಿಸಿ ಅಧ್ಯಕ್ಷರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಜಯಂತಿಯನ್ನು ಅರ್ಥಪೂರ್ಣ, ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿದ್ದು, ಸಮಿತಿಯ ಅಧ್ಯಕ್ಷರು ಇದೇ 28ರೊಳಗೆ ಸದಸ್ಯರ ಪಟ್ಟಿಯನ್ನು ಸಲ್ಲಿಸಲಿದ್ದಾರೆ.

ಈ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಪ್ರಚಾರ ಹಮ್ಮಿಕೊಳ್ಳವುದರ ಮೂಲಕ  ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಉದ್ದೇಶ ಹೊಂದಿದ್ದು, ಯೂಟ್ಯೂಬ್ ಮೂಲಕ ಸಮಾಜದ ಹಿರಿಯರ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸುವ ಯೋಜನೆಯನ್ನೂ ರೂಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಬಸವ ಜಯಂತಿ ಸಮಿತಿ ಹೆಸರು, ಅಧ್ಯಕ್ಷರು ಈ ಕೆಳಗಿನಂತೆ ಆಯ್ಕೆಗೊಂಡಿರುವರು.

೧ ಕಾರ್ಯಕ್ರಮ ಸಮಿತಿ-ಪುಟ್ಟರಾಜು

೨ ಸ್ವಾಗತ ಸಮಿತಿ-ಕುಮಾರಸ್ವಾಮಿ

೩ ವೇದಿಕೆ ಸಮಿತಿ-ಶರತ್ ಪುಟ್ಟಬುದ್ದಿ

೪ ಅತಿಥಿ ಸತ್ಕಾರ ಸಮಿತಿ -ಕೆ.ಎಚ್. ಕಿರಣ್

೫ ಮೆರವಣಿಗೆ ಸಮಿತಿ-ಕೆ.ವಿ.ಮಲ್ಲೇಶ್

೬ ನಗರ ಪ್ರಚಾರ ಸಮಿತಿ -ಜೀವದಾರ ಗಿರೀಶ್

೭ ತಾಲೂಕು ಪ್ರಚಾರ ಸಮಿತಿ -ಲೋಹಿತ್ ದೊರೆಸಾಮಿ

೮ ಕಲಾಮಂದಿರ ಹೊರಾಂಗಣ ಅಲಂಕಾರ-ಬಿ.ಆ‌ರ್. ಶಿವಕುಮಾ‌ರ್

೯ ಪುತ್ಥಳಿ ಅಲಂಕಾರ-ಆಟೊ ಮಹೇಶ್

೧೦ ಪ್ರಸಾದ ವ್ಯವಸ್ಥೆ-ದೂರ ಪರಶಿವಮೂರ್ತಿ

೧೧ ಮಹಿಳಾ ಸಮಿತಿ-ಮಲ್ಲಿಕಾ ಮಹದೇವು

೧೨ ಮಕ್ಕಳ ಸಮಿತಿ-ದಿವ್ಯ ಚೇತನ

೧೩ ಗ್ರಾಮಾಂತರ ಯುವ ಸಮಿತಿ-ಸೋಮಶೇಖ‌ರ್ ಬೀರಿಹುಂಡಿ

೧೪ ನಗರ ಯುವ ಸಮಿತಿ-ಮಲ್ಲೇಶ ಮಲ್ಲು

೧೫ ಸಾಂಸ್ಕೃತಿಕ ಸಮಿತಿ-ಶಾರದಾ ಶಿವಲಿಂಗಸ್ವಾಮಿ

೧೬ ಆರೋಗ್ಯ ಸಮಿತಿ-ಮಹೇಶ್

೧೭ ಸಾಮಾಜಿಕ ಮಾಧ್ಯಮ-ಡಿ.ಚಂದ್ರಶೇಖ‌ರ, ಫೋಟೊ ಮಹೇಂದ್ರ

೧೮ ಸ್ಮರಣ ಸಂಚಿಕೆ -ಡಿ.ಎಸ್‌.ಸದಾಶಿವಮೂರ್ತಿ

೧೯ ಹಣಕಾಸು ನಿರ್ವಹಣೆ-ಕೆ.ಎಸ್‌. ಮಹದೇವ ಪ್ರಸಾದ್

೨೦ ಸ್ವಚ್ಛತಾ ಸಮಿತಿ-ಬಾನು ಮೋಹನ್

೨೧ ಮಾಧ್ಯಮ ವಕ್ತಾರರು-ಬಿ.ವಿ. ಮಂಜುನಾಥ.


ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *