ಬೆಳಗಾವಿ
ರಕ್ತದಾನ ಮಾಡುವುದರಿಂದ ಮೂರು ಲಾಭಗಳಿವೆ. ರಕ್ತದಾನದಿಂದ ಕ್ಯಾನ್ಸರ ಬರುವುದಿಲ್ಲ, ಹೃದಘಾತವಾಗುವುದಿಲ್ಲ, ಬಿಪಿ- ಶುಗರ ಬರುವುದಿಲ್ಲ. ೧೮ ರಿಂದ ೬೦ವಷ೯ ಒಳಗಿನ ರಕ್ತದಾನ ಮಾಡಬೇಕೆನ್ನುವವರಿಂದ ರಕ್ತ ಪಡೆಯಲಾಗುವುದೆಂದು ಕೆ.ಎಲ್.ಇ. ಆಸ್ಪತ್ರೆಯ ಮುಖ್ಯಸ್ಥ ಡಾ. ಎಸ್.ಪಿ. ಆನಂದ ತಿಳಿಸಿದರು.
ಲಿಂಗಾಯತ ಸಂಘಟನೆ ವತಿಯಿಂದ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ರವಿವಾರ ವಾರದ ಸಾಮೂಹಿಕ ಪ್ರಾಥ೯ನೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ರಕ್ತದ ಮಹತ್ವ ತಿಳಿಸಿಕೊಟ್ಟರು.
ದಿವ್ಯಸಾನಿದ್ಯವನ್ನು ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಮತ್ತು ಶಿವಯೋಗಿ ಸ್ವಾಮಿಗಳು ವಹಿಸಿದ್ದರು.
ಪ್ರಾಥ೯ನೆ ಮಾಡುವುದರಿಂದ ಸುತ್ತಲೂ ಶಕ್ತಿಯಾಗಿ ಮಾಪ೯ಡುತ್ತದೆ. ಚಮ೯ದಾನ, ಅಂಗಾಂಗದಾನ, ರಕ್ತದಾನ, ದೇಹದಾನ ಮಾಡಬೇಕು. ಇದರಿಂದ ಬೇರೆಯವರಿಗೆ ಜೀವಕ್ಕೆ ಉಪಯುಕ್ತವಾಗುತ್ತದೆ. ನಾನು ಸದಾ ತಮ್ಮ ಸಂಘಟನೆ ಜೊತೆಯಾಗಿ ಇರುತ್ತೆನೆ, ಈ ಕಾಯ೯ಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೖಸಿದರು.
ಅಧ್ಯಕ್ಷತೆ ವಹಿಸಿದ ಈರಣ್ಣಾ ದೇಯಣ್ಣವರ ಅವರು ಕಾರಂಜಿಮಠ ಸ್ವಾಮಿಗಳ ೭೫ ನೇ ಜನ್ಮದಿನದ ಕಾಯ೯ಕ್ರಮದ ನಿಮಿತ್ಯ ರಕ್ತದಾನ ಶಿಬಿರ ಏಪ೯ಡಿಸಲಾಗಿದೆ. ತಾವೆಲ್ಲರೂ ಹೆಚ್ಚಿನ ಸಂಖ್ಯೆ ಯಲ್ಲಿ ರಕ್ತದಾನ ಮಾಡಿರಿ ಎಂದು ಸೂಚಿಸಿದರು.
ಶಂಕರ ಗುಡಸ ಅವರು ಬೆಳಗಾವಿ ಮೂಲಮಠ ಕಾರಂಜಿಮಠ ಮಠದ ಕುರಿತು ತಿಳಿಸಿದರು. ವೇದಿಕೆ ಮೇಲೆ ಕಾರಂಜಿಮಠ ಗುರುಸಿದ್ಧ ಸ್ವಾಮಿಗಳು, ಶಿವಯೋಗಿ ದೇವರು, ಉಪಾಧ್ಯಕ್ಷರಾದ ಸಂಗಮೇಶ ಅರಳಿ, ಕಾಯ೯ದಶಿ೯ ಸುರೇಶ ನರಗುಂದ, ಖಂಜಾಚಿ ಸತೀಶ ಪಾಟೀಲ, ದಾಸೋಹ ಸೇವೆ ನೀಡಿದ ಎಸ್.ಎಸ್. ಪೂಜೇರಿ ನಿವೃತ್ತ ಅಭಿಯಂತರರು ಇದ್ದರು.
ಪ್ರಾರಂಭದಲ್ಲಿ ಆನಂದ ಕಕಿ೯, ವಿ.ಕೆ. ಪಾಟೀಲ, ಸುಜಾತಾ ಮತ್ತಿಕಟ್ಟಿ, ಸುವರ್ಣ ಗುಡಸ, ಜಯಶ್ರೀ ಚಾವಲಗಿ, ಬಸಮ್ಮಾ, ಶ್ವೇತಾ ಮು೦ಗರವಾಡಿ, ಶಂಕರ ಗುಡಸ ಈ ಎಲ್ಲ ಶರಣ, ಶರಣೆಯರು ವಚನ ಹೇಳಿದರು.ಸದಾಶಿವ ದೇವರಮನಿ ನಿರೂಪಿಸಿದರು.
ಎಂಬತ್ತಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು, ಅದರಲ್ಲಿ ಮುಸ್ಲಿಂ ಸಮಾಜದ ದಂಪತಿ ರಕ್ತದಾನ ಮಾಡಿ ಭಾವೈಕ್ಯತೆಗೆ ಸಾಕ್ಷಿಯಾದರು.
ಬಸವರಾಜ ಚಟ್ಟೇರ, ವಿರೂಪಾಕ್ಷಿ ದೊಡ್ಡಮನಿ, ಎಂ.ವೈ. ಮೆಣಸಿನಕಾಯಿ, ಶಿವಾನಂದ ಲಾಳಸಂಗಿ, ಜ್ಯೋತಿ ಬದಾಮಿ, ಕಮಲಾ ಗಣಾಚಾರಿ, ಅಕ್ಕಮಹಾದೇವಿ ತೆಗ್ಗಿ, ಪ್ರಸಾದ ಹೀರೇಮಠ, ಡಾ. ಮಹೇಶ ಗುರಣಗೌಡ್ರ, ಬಸವರಾಜ ಕರಡಿಮಠ, ಆನಂದ ಶೆಟ್ಟಿ, ಅನಿಲ ರಗಶೆಟ್ಟಿ, ಶೇಖರ ವಾಲಿ ಇಟಗಿ, ವಾಯ್.ಎಸ್. ಪಾಟೀಲ, ಶ್ರೀದೇವಿ ನರಗುಂದ, ಮತ್ತಿತರ ಶರಣ ಶರಣೆಯರು ಉಪಸ್ತಿತರಿದ್ದರು. ಸದಾಶಿವ ದೇವರಮನಿ ನಿರೂಪಿಸಿದರು. ಸಂಗಮೇಶ ಅರಳಿ ವಂದಿಸಿದರು.