ಬೆಳಗಾವಿ
ವಚನ ಪಿತಾಮಹ ಡಾ. ಫ ಗು ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಸಾಮೂಹಿಕ ಪ್ರಾರ್ಥನೆ, ವಚನ ವಿಶ್ಲೇಷಣೆ ಕಾರ್ಯಕ್ರಮ ನಡೆಯಿತು.
ಮಂಗಲಾ ಕಾಗತಿಕರ, ಲಕ್ಷ್ಮಿ ಜೇವಣಿ, ಅಕ್ಕಮಹಾದೇವಿ ತೆಗ್ಗಿ, ವಿ ಕೆ ಪಾಟೀಲ, ಬಸವರಾಜ ಬಿಜ್ಜರಗಿ, ಶಿವಕುಮಾರ ಪಾಟೀಲ, ಮಹದೇವ ಕೆಂಪಿಗೌಡರ, ಶಂಕರ ಗುಡಸ, ಸದಾಶಿವ ದೇವರಮನಿ, ಸುನೀಲ ಸಾಣಿಕೊಪ್ಪ ವಚನ ವಿಶ್ಲೇಷಣೆ ಮಾಡಿದರು.
ಗುಜರಾತನ ಸೂರತ್ನಲ್ಲಿ ನಡೆದ ರಾಷ್ಟ್ರಮಟ್ಟದ ಈಜು ಸ್ಪದೆ೯ಯಲ್ಲಿ ಪ್ರಥಮ ಸ್ಥಾನದಲ್ಲಿ ವಿಜೇತರಾದ ಲಕ್ಷಮಣ ಕುಂಬಾರ ಅವರನ್ನು ಲಿಂಗಾಯತ ಸಂಘಟನೆಯಿಂದ ಸನ್ಮಾನಿಸಲಾಯಿತು.
ಸಂಗಮೇಶ ಬಾಬು ತಿಗಡಿ ದಾಸೋಹ ಸೇವೆ ಗೈದರು. ಶೇಖರ ವಾಲಿಇಟಗಿ, ಮಹಾಂತೇಶ ಮೆಣಸಿನಕಾಯಿ, ಶಿವಾನoದ ತಲ್ಲೂರ, ಮ. ಬ. ಕರಿಕಟ್ಟಿ, ಸುವಣಾ೯ ತಿಗಡಿ, ನಂದಾ ಬಗಲಿ, ಪ್ರೀತಿ ಮಠದ, ಶಿವಾನಂದ ನಾಯಕ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸುರೇಶ ನರಗುಂದ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಸಂಗಮೇಶ ಅರಳಿ ನಿರೂಪಿಸಿದರು, ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.