ಬೆಳಗಾವಿ :
ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ಲಿಂಗಾಯತ ಸಂಘಟನೆಯಿಂದ ರವಿವಾರ ಅರ್ಥಪೂರ್ಣವಾಗಿ ಕನಾ೯ಟಕ ರಾಜ್ಯೋತ್ಸವ ಆಚರಿಸಲಾಯಿತು.
ಯಾವುದೇ ಕರ್ಕಶ ಡಿ.ಜೆ. ಸೌಂಡಗಳ ಅಬ್ಬರವಿಲ್ಲದೇ ಭಕ್ತಿಪೂರ್ವಕವಾಗಿ ನಾಡು-ನುಡಿ-ಸಂಸ್ಕೃತಿ ಕುರಿತು ಗೀತ ಮತ್ತು ನೃತ್ಯ ವೈಭವ ಮೆರೆಯಲಾಯಿತು.

ಮಹಾದೇವಿ ಅರಳಿ ಅವರ ಪ್ರಾಥ೯ನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೂರೆಯಿತು. ಆರಂಭದಲ್ಲಿ ಇತ್ತೀಚೆಗೆ ಲಿಂಗೈಕ್ಯರಾದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.
ಜ್ಞಾನವಿ ಘೊಪ೯ಡೆ, ಸುನಿಲ ಸಾಣಿಕೊಪ್ಪ, ಮಹಾದೇವಿ ಅರಳಿ, ದ್ರಾಕ್ಷಾಯಣಿ ಪೂಜಾರ, ಜಯಶ್ರೀ ಚಾವಲಗಿ, ಕುಮಾರ, ಚಿನ್ಮಯ, ಚೇತನ, ಬಿ ಪಿ. ಜೇವಣಿ, ಶಂಕರ ಗುಡಸ, ಸತೀಶ ಪಾಟೀಲ, ಶೀಲಾ ಪಾಟೀಲ, ಬಸಮ್ಮಾ ಮುಂತಾದವರು ಸುಶ್ರಾವ್ಯವಾಗಿ ನಾಡಗೀತೆಗಳನ್ನು ಹಾಡಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಚಂದನಾ ಕೊಟಗಿ ಕಿತ್ತೂರ ರಾಣಿ ಚೆನ್ನಮ್ಮಳಾಗಿ, ಸುಜನ ದೇವರಮನಿ ಸಂಗೊಳ್ಳಿ ರಾಯಣ್ಣನಾಗಿ ಅಭಿನಯಿಸಿ ಎಲ್ಲರ ಮನಸೂರೆಗೊಂಡರು.

ರೂಪಾ ಚೌಗಲಾ, ದೀಪಾ ಪಾಟೀಲ ಮತ್ತು ಲಕ್ಷೀ ಜೇವಣಿ ತಂಡದಿಂದ ಹಚ್ಚೆವು ಕನ್ನಡದ ದೀಪ ನೃತ್ಯ ಜರುಗಿತು. ಈ ನೃತ್ಯ ರೂಪಕದಲ್ಲಿ ಕನ್ನಡದ ಎಲ್ಲ ಹಾಡುಗಳು ಕೇಳಿಬಂದವು. ಅದರಲ್ಲೂ ಅ ಆ ಇ ಈ ಅಕ್ಷರ ಮಾಲೆ ಹಾಡಿನ ನೃತ್ಯ ಎಲ್ಲರ ಮನಸೆಳೆಯಿತು.

ಅಧ್ಯಕ್ಷತೆಯನ್ನು ಈರಣ್ಣಾ ದೇಯನ್ನವರ ವಹಿಸಿದ್ದರು. ಸಂಗಮೇಶ ಅರಳಿ ಸ್ವಾಗತಿಸಿದರು. ಸದಾಶಿವ ದೇವರಮನಿ ಕಾರ್ಯಕ್ರಮ ನಿರೂಪಿಸಿದರು. ಕಸ್ತೂರಿ ಮೂಲಿಮನಿ ದಾಸೋಹ ಸೇವೆಗೈದರು.

ಶಿರಗುಪ್ಪಿ ಶೆಟ್ಟರ, ಅನಿಲ ರಘಶೆಟ್ಟಿ, ಬಿ.ಬಿ. ಮಠಪತಿ, ಎಂ.ವೈ. ಮೆಣಸಿನಕಾಯಿ, ಚನಬಸಪ್ಪ ಅಂಗಡಿ, ಚೆನ್ನಪ್ಪಾ ನರಸನ್ನವರ, ಶಿವಾನಂದ ರೂಡಬಸನ್ನವರ, ಬಸವರಾಜ ಬಿಜ್ಜರಗಿ, ಲಕ್ಷ್ಮೀಕಾಂತ ಗುರವ, ಜೋತಿ ಬದಾಮಿ, ಶಿವಲೀಲಾ ಗೌಡರ ಸಾಣಿಕೊಪ್ಪ ಮುಂತಾದ ಶರಣ ಶರಣೆಯರು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
