’24‌×7 ಬಸವ ತತ್ವ ಪ್ರಚಾರ ಮಾಡುತ್ತಿರುವ ಲಿಂಗಾಯತ ಸಂಘಟನೆ’

ಬೆಳಗಾವಿ

ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ರವಿವಾರದಂದು ಸಾಮೂಹಿಕ ಪ್ರಾಥ೯ನೆ, ವಚನ ವಿಶ್ಲೇಷಣೆ ಕಾರ್ಯಕ್ರಮ ನಡೆಯಿತು.

ಪ್ರಾರಂಭದಲ್ಲಿ ಶರಣೆ ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಬಸವರಾಜ ಗುರನಗೌಡ್ರ, ವಿ ಕೆ ಪಾಟೀಲ, ಆನಂದ ಕಕಿ೯, ಸುನೀಲ ಸಾಣಿಕೊಪ್ಪ, ಅಕ್ಕಮಹಾದೇವಿ ತೆಗ್ಗಿ, ಜಯಶ್ರೀ ಚವಲಗಿ ವಚನ ವಿಶ್ಲೇಷಣೆ ಮಾಡಿದರು.

ಶಂಕರ ಗುಡಸ ಅವರು ಬಿಕ್ಷುಕನು ಕಂಡ ಕಥೆ ಇತರ ಕಥೆಗಳನ್ನು ಮನಮುಟ್ಟವಂತೆ ಹೇಳಿದರು. ಸುನೀಲ ಸಾಣಿಕೊಪ್ಪ ಅವರು ಕಾಯಕ ಮಹತ್ವದ ಕುರಿತು ಮಾತನಾಡಿದರು. ಹಾಗೇ ಬಸವ ಜಯಂತಿ ಮಹತ್ವ ತಿಳಿಸಿದರು. ಮೇ 4, 2025 ನಾವೆಲ್ಲ ಸೇರಿ ಬಸವ ಜಯಂತಿ ಆಚರಿಸೋಣ ಎಲ್ಲರೂ ಬನ್ನಿರಿ ಎಂದರು.

ಪ್ರಸಾದ ದಾಸೋಹ ಸೇವೆ ಶರಣ ಶಿವರಾಜ ಇಟಗಿ ವಕೀಲರದಾಗಿತ್ತು. ಆನಂದ ಕಕಿ೯ ನಿರೂಪಿಸಿದರು. ರಾಜಶೇಖರ ಡೋಣಿ, ಅತಿಥಿಗಳಾಗಿ ಆಗಮಿಸಿದ್ದರು.

24‌×7 ಅವಧಿ ಬಸವ ತತ್ವವನ್ನು ಲಿಂಗಾಯತ ಸಂಘಟನೆ ನಿರಂತರ ಪ್ರಚಾರ ಮಾಡುತ್ತಿದ್ದು ಹೀಗೆ ಸಾಗಲಿ ಎಂದು ಎಂ ಬಿ ಝಿರಲಿ ಹೇಳಿದರು.

ಅನಿಲ ರಘಶೆಟ್ಟಿ, ಬಸವರಾಜ ಗುರನಗೌಡರ, ಶೇಖರ ವಾಲಿಇಟಗಿ, ಸದಾಶಿವ ದೇವರಮನಿ, ಮಹಾಂತೇಶ ಮೆಣಸಿನಕಾಯಿ, ಬಸವರಾಜ ಕರಡಿಮಠ, ಕುಮಾರ ಪಾಟೀಲ, ಎಸ್‌.ಎಸ್‌. ಪೂಜಾರ, ಗುರುಸಿದ್ದಪ್ಪ ರೇವಣ್ಣವರ, ಶಿವಾನಂದ ನಾಯಕ, ಸದಾಶಿವ ದೇವರಮನಿ, ಸೋಮಶೇಖರ ಕತ್ತಿ, ಶಾಂತಾ ಕಂಬಿ, ಬಸವರಾಜ ಬಿಜ್ಜರಗಿ, ತಿಗಡಿ ದಂಪತಿಗಳು ಗಂಗಪ್ಪ ಉಣಕಲ್ಲ, ರಾಮಾಪೂರಿ ದಂಪತಿ, ಕೆಂಪಿಗೌಡರ ದ೦ಪತಿಗಳು ಉಪಸ್ಥಿತರಿದ್ದರು. ಆನಂದ ಕಕಿ೯ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
Leave a comment

Leave a Reply

Your email address will not be published. Required fields are marked *