ಇಷ್ಟಲಿಂಗವು ನಿರಾಕಾರ ಶಿವನನ್ನು ಪೂಜಿಸುವ ಲಿಂಗಾಯತರ ಹೆಗ್ಗುರುತು. ಗುರುವಿನಿಂದ ಲಿಂಗವನ್ನು ವಿಧಿಪೂರ್ವಕವಾಗಿ ಪಡೆಯುವವರೇ ಲಿಂಗಾಯತರು. (ಲಿಂಗ+ಆಯತ ಅಥವಾ ವಿಧಿಪೂರ್ವಕ.)
ವೀರಶೈವ ಆರಾಧ್ಯರ ಸಣ್ಣ ಲಿಂಗ ಅವರು ಆರಾಧಿಸುತ್ತಿದ್ದ ಸ್ಥಾವರ ಲಿಂಗದ ಪ್ರತೀಕವಾಗಿತ್ತು. ವೃದ್ದರು ಪೂಜಿಸಲೆಂದು ಅದನ್ನು ಮನೆಯಲ್ಲಿ ಮಣೆಯ ಮೇಲಿಡುತ್ತಿದ್ದರು.
ಪ್ರವಾಸಕ್ಕೆ ಹೋದಾಗ ಸಣ್ಣಲಿಂಗವನ್ನು ತಮ್ಮೊಡನೆ ತೆಗೆದುಕೊಂಡು ಹೋಗಿ, ಹಿಂತಿರುಗಿದ ಮೇಲೆ ಮನೆಯಲ್ಲಿ ಮತ್ತೆ ಇಡುತ್ತಿದ್ದರು. ಲಿಂಗಾಯತರಲ್ಲಿ ಸ್ಥಾವರಲಿಂಗದ ಕಲ್ಪನೆಯೇ ಇಲ್ಲ.
ಆರಾಧ್ಯರಿಗೆ ಜನಿವಾರ ಕಡ್ಡಾಯವಾಗಿದ್ದರೆ, ಸಣ್ಣ ಲಿಂಗ ಐಚ್ಛಿಕವಾಗಿತ್ತು. ಆದರೆ ಶರಣರ ಪ್ರಭಾವದಿಂದ ಅವರಂತೆ ತಾವೂ ಸಣ್ಣ ಲಿಂಗವನ್ನು ಕೊರಳಲ್ಲಿ ಧರಿಸಲು ಶುರುವಾದರು.
ಅದರಿಂದ ಸಾಮಾನ್ಯ ಲಿಂಗಾಯತರಲ್ಲಿ ಶರಣ ಜಂಗಮರು, ಆರಾಧ್ಯ ಜಾತಿ ಜಂಗಮರು ಒಂದೇ ಎನ್ನುವ ಭ್ರಮೆ ಬೆಳೆದು, ಆರಾಧ್ಯರ ಆಚಾರ್ಯರಾಗಿದ್ದ ಪಂಚಾಚಾರ್ಯರನ್ನು ಅನುಸರಿಸಲಾರಂಭಿಸಿದರು.
(‘ಪಂಚಾಚಾರ್ಯರ ನಿಜಸ್ವರೂಪ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)