ಮತ್ತಿಹಳ್ಳಿಯಲ್ಲಿ ಮಡುಗಟ್ಟಿದ ಮೌನ​

Basava Media
Basava Media
19Posts
Auto Updates

ಬಸವ ತತ್ವದ ಹೆಮ್ಮರವೆಂದು ಖ್ಯಾತರಾಗಿದ್ದ ಶತಮಾನದ ಶರಣ ವಿ.ಸಿದ್ರಾಮಣ್ಣನವರು ಸೋಮವಾರ ದಾವಣಗೆರೆಯಲ್ಲಿ ಲಿಂಗೈಕ್ಯರಾದರು. ೧೦೪ ವರ್ಷದ ತುಂಬಿದ ಬದುಕನ್ನು ಸವೆಸಿದ್ದ ಶರಣರ ಅಂತಿಮ ದರ್ಶನವನ್ನು ದಾವಣಗೆರೆಯ ಬಸವ ಭವನದಲ್ಲಿ ಅಭಿಮಾನಿಗಳು ಪಡೆದರು. ನಂತರ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿಯಲ್ಲಿ ಶರಣರ ಅಂತ್ಯಕ್ರಿಯೆ ನಡೆಯಿತು. ಬಸವ ಮೀಡಿಯಾದಿಂದ ಸಂಪೂರ್ಣ ವರದಿ.

1 year agoAugust 14, 2024 6:20 am

ಮತ್ತಿಹಳ್ಳಿಯಲ್ಲಿ ಮಡುಗಟ್ಟಿದ ಮೌನ

ಮೂವತ್ತಕ್ಕೂ ಹೆಚ್ಚು ಮಠಾಧೀಶರು, ಬಸವಣ್ಣನವರ ವಚನ ಪ್ರಚಾರಕರು, ಶರಣ ಸಾಹಿತ್ಯ ಪರಿಷತ್‍ ಪದಾಧಿಕಾರಿಗಳು ಲಿಂ.ವಿ.ಸಿದ್ದರಾಮಣ್ಣ ಅವರ ಅಂತಿಮ ದರ್ಶನ ಪಡೆದರು, ಎಂದು ಪ್ರಜಾವಾಣಿ ವರದಿ ಮಾಡಿದೆ.

ಪ್ರಜಾವಾಣಿ ವಾರ್ತೆ

ಲಿಂಗೈಕ್ಯರಾದ ಬಸವ ತತ್ವ ಪ್ರಚಾರಕ ವಿ.ಸಿದ್ದರಾಮಣ್ಣ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಮತ್ತಿಹಳ್ಳಿಯಲ್ಲಿ ಮಂಗಳವಾರ ನಡೆಯಿತು.

ದಾವಣಗೆರೆ, ಶಿರಮಾಗೊಂಡನಹಳ್ಳಿ, ಸಿದ್ದಯ್ಯನಕೋಟೆ, ಬೀದರ್ ಜಿಲ್ಲೆಯ ಬಸವಕಲ್ಯಾಣ, ಬಾಲ್ಕಿ, ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮೂವತ್ತಕ್ಕೂ ಹೆಚ್ಚು ಮಠಾಧೀಶರು, ಬಸವಣ್ಣನವರ ವಚನ ಪ್ರಚಾರಕರು, ಶರಣ ಸಾಹಿತ್ಯ ಪರಿಷತ್‍ ಪದಾಧಿಕಾರಿಗಳು ಲಿಂ.ವಿ.ಸಿದ್ದರಾಮಣ್ಣ ಅವರ ಅಂತಿಮ ದರ್ಶನ ಪಡೆದರು.

ಬೀದರ್‌, ದಾವಣಗೆರೆ, ಭಾಲ್ಕಿ, ಬಸವಕಲ್ಯಾಣದ ಬಸವ ಬಳಗ ಮತ್ತು ಭಜನೆ ಕಲಾವಿದರು ವಚನಗಳನ್ನು ಹಾಡುವ ಮೂಲಕ ಸಿದ್ದರಾಮಣ್ಣ ಶರಣರಿಗೆ ನುಡಿನಮನ ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ ತೆರಳಿ ಸಂಜೆ 4.30ಕ್ಕೆ ಅವರ ಸ್ವಂತ ಜಮೀನಿನಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮನೆಯ ಆವರಣದಲ್ಲಿ ಜರುಗಿದ ನುಡಿನಮನದಲ್ಲಿ ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ, ‘ಸಿದ್ದರಾಮ ಶರಣರು ಮತ್ತಿಹಳ್ಳಿಯಲ್ಲಿ ಜನಿಸಿದ್ದೇ ಪವಾಡ. ಕುಟುಂಬ ತೊರೆದು ಬಸವಕಲ್ಯಾಣ ತಲುಪಿ, ಅಲ್ಲಿ ಬಸವಣ್ಣನವರ ವಚನಗಳನ್ನು ಪ್ರಚುರಪಡಿಸಿದ್ದಾರೆ. ಬದುಕಿನ ಕೊನೆಯ ಕ್ಷಣಗಳನ್ನು ಸ್ವ ಗ್ರಾಮ ಮತ್ತಿಹಳ್ಳಿಯಲ್ಲಿದ್ದು ಶರಣರ ತತ್ವ ಪಸರಿಸುವ ಇಚ್ಚೆಯಿಂದ ಬಂದಿದ್ದ ಸಿದ್ದರಾಮಣ್ಣ ಶರಣರ ಸೇವೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ಪಡೆಯುವ ಮುನ್ನವೇ ಲಿಂಗೈಕ್ಯರಾಗಿದ್ದು, ಮತ್ತಿಹಳ್ಳಿಗಷ್ಟೇ ಅಲ್ಲ ಕಲ್ಯಾಣದ ನಾಡಿಗೆ ನೋವು ತಂದಿದೆ ಎಂದು ಹೇಳಿದರು.

ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷರಾದ ಅನುಭವ ಮಂಟಪದ aಧ್ಯಕ್ಷ ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಇಳಕಲ್ ವಿಜಯ ಮಹಾಂತೇಶ್ವರಮಠದ ಗುರುಮಹಾಂತ ಸ್ವಾಮೀಜಿ, ಗುರುಬಸವ ಪಟ್ಟದ್ದೇವರು, ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಸಿದ್ದಯ್ಯನಕೋಟೆ ಬಸವಲಿಂಗ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂಜಾರ ಷಣ್ಮುಖಪ್ಪ, ಬಸವರಾಜ್, ಬಣಕಾರ ರಾಜಶೇಖರ, ಮತ್ತಿಹಳ್ಳಿ ಅಜ್ಜಣ್ಣ, ಶೇಖರಗೌಡ ಪಾಟೀಲ್, ಡಾ.ಎ.ಕೆ.ಸಂತೋಷ, ಐಗೋಳ ಚಿದಾನಂದ ಪಾಲ್ಗೊಂಡಿದ್ದರು.

ವಿ.ಸಿದ್ದರಾಮಣ್ಣ ಅವರ ಅಂತಿಮ ದರ್ಶನ ಪಡೆದ ವಿವಿಧ ಶರಣರು ಪೂಜೆ ಸಲ್ಲಿಸಿದರು. ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷರಾದ ಅನುಭವ ಮಂಟಪದ ಬಸವಲಿಂಗ ಪಟ್ಟದ್ದೇವರು ಇಳಕಲ್ ವಿಜಯ ಮಹಾಂತ ಸ್ವಾಮೀಜಿ ಬಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಸಿದ್ದಯ್ಯನಕೋಟೆ ಬಸವಲಿಂಗಸ್ವಾಮೀಜಿ ಪಂಚಮಸಾಲಿ ಮಠದ ವಚಾನನಂದ ಸ್ವಾಮೀಜಿ ಗಂಗಾಂಭಿಕ ತಾಯಿ ಮಾತಾ ಗಾಯತ್ರಿ ತಾಯಿ ಸತ್ಯಮೇದಾವಿ ಭಾರತಿ ತಾಯಿ ಪಾಲ್ಗೊಂಡಿದ್ದರು

ವಿ.ಸಿದ್ದರಾಮಣ್ಣ ಅವರ ಅಂತಿಮ ದರ್ಶನ ಪಡೆದ ವಿವಿಧ ಶರಣರು ಪೂಜೆ ಸಲ್ಲಿಸಿದರು. ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷರಾದ ಅನುಭವ ಮಂಟಪದ ಬಸವಲಿಂಗ ಪಟ್ಟದ್ದೇವರು ಇಳಕಲ್ ವಿಜಯ ಮಹಾಂತ ಸ್ವಾಮೀಜಿ ಬಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಸಿದ್ದಯ್ಯನಕೋಟೆ ಬಸವಲಿಂಗಸ್ವಾಮೀಜಿ ಪಂಚಮಸಾಲಿ ಮಠದ ವಚಾನನಂದ ಸ್ವಾಮೀಜಿ ಗಂಗಾಂಭಿಕ ತಾಯಿ ಮಾತಾ ಗಾಯತ್ರಿ ತಾಯಿ ಸತ್ಯಮೇದಾವಿ ಭಾರತಿ ತಾಯಿ ಪಾಲ್ಗೊಂ

1 year agoAugust 13, 2024 5:48 pm

ಬಯಲಾದ ಶರಣರು,ವಿಭೂತಿಯಲ್ಲಿ ಲೀನರಾದರು

1 year agoAugust 13, 2024 4:07 pm

ಲಿಂ. ಶರಣ ಸಿದ್ರಾಮಣ್ಣ ಅವರ ಅಂತಿಮ ಯಾತ್ರೆ …

1 year agoAugust 13, 2024 1:35 pm

ಮತ್ತಿಹಳ್ಳಿಯಲ್ಲಿ ಬಸಾಪುರ ‘ಬಸವ ಕಲಾಲೋಕ’ ತಂಡದಿಂದ ವಚನ, ಭಜನಾ ಸೇವೆ….

1 year agoAugust 13, 2024 1:33 pm

ಶರಣ ತಾಯಂದಿರಿಂದ ಷಟ್ ಸ್ಥಲ ದ್ವಜಾರೋಹಣ, ನೆರೆದ ಶರಣ ಸಮೂಹದಿಂದ ಲಿಂ. ಸಿದ್ದರಾಮಣ್ಣ ಶರಣರ ಅಂತಿಮ ದರ್ಶನ.

1 year agoAugust 13, 2024 1:29 pm

ಕೂಡಲಸಂಗಮ ಬಸವಧರ್ಮ ಪೀಠದ ಪೂಜ್ಯ ಗಂಗಾ ಮಾತಾಜಿ, ಭಾಲ್ಕಿ ಪಟ್ಟದೇವರು, ಇಲಕಲ್ಲ ಮಹಾಂತಮಠದ ಶ್ರೀಗಳು, ಪೂಜ್ಯ ಸತ್ಯಮೇಧಾವಿ, ಪೂಜ್ಯ ಜ್ಞಾನೇಶ್ವರಿ ತಾಯಿ, ಸಿಂಧನೂರು ಬಸವಕೇಂದ್ರದ ವೀರಭದ್ರಪ್ಪ ಕುರಕುಂದಿ ಇತರರು ಅಂತಿಮ ದರ್ಶನಕ್ಕೆ ಆಗಮಿಸಿರುವರು.

1 year agoAugust 13, 2024 1:00 pm
1 year agoAugust 13, 2024 1:01 pm

ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿಯಲ್ಲಿ ಬೀದರಿನ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಇಷ್ಟಲಿಂಗ ಪೂಜಾ ಕಾರ್ಯ ಮಾಡುತ್ತಿದ್ದಾರೆ.

ಮತ್ತಿಹಳ್ಳಿಯಲ್ಲಿ ನೆರೆದ ಶರಣ ಸಮೂಹದಿಂದ ಲಿಂ. ಸಿದ್ದರಾಮಣ್ಣ ಶರಣರ ಅಂತಿಮದರ್ಶನ

1 year agoAugust 13, 2024 10:02 am
1 year agoAugust 13, 2024 12:47 pm

ದಾವಣಗೆರೆಯಲ್ಲಿ ಶತಮಾನದ ಶರಣರ ಅಂತಿಮ ದರ್ಶನದ ದೃಶ್ಯಗಳು (ವಿಡಿಯೋ)

1 year agoAugust 13, 2024 12:12 pm

ಶತಮಾನದ ಶರಣರ ಅಂತಿಮ ದರ್ಶನದ ದೃಶ್ಯಗಳು

ಸಿದ್ದರಾಮಣ್ಣ ಅವರ ಅಂತಿಮ ದರ್ಶನ ಪಡೆಯಲು ಬಂದ ಅಶೋಕ ಬರಗುಂಡಿ, ಬಾಗಲಕೋಟೆ; ಶೇಖಣ್ಣ ಕವಳಿಕಾಯಿ, ಗದಗ; ಪ್ರಕಾಶ ಅಸುಂಡಿ, ಬಸವದಳ,ಗದಗ; ಶಂಕರ ಗುಡಸ, ಬೆಳಗಾವಿ; ಬಸವರಾಜಪ್ಪ ಶಿರಗುಪ್ಪ ರುದ್ರಪ್ಪ ರಾಯಚೂರು; ಹನುಮೇಶ ಕಲ್ಮಂಗಿ, ಕೊಪ್ಪಳ

ಹರಪನಹಳ್ಳಿ: ಸಿದ್ದರಾಮೇಶ್ವರ ಅಜ್ಜ ನಿಧನ (ಪ್ರಜಾವಾಣಿ ವಾರ್ತೆ)

1 year agoAugust 13, 2024 9:17 am
1 year agoAugust 13, 2024 9:44 am

ಶತಮಾನದ ಶರಣರ ಅಂತಿಮ ದರ್ಶನದ ದೃಶ್ಯಗಳು

1 year agoAugust 13, 2024 9:25 am
1 year agoAugust 13, 2024 9:26 am

ದಾವಣಗೆರೆ ಬಸವ ಬಳಗದಲ್ಲಿ ಅಂತಿಮ ದರ್ಶನದ ದೃಶ್ಯಗಳು

ದಾವಣಗೆರೆ ಬಸವ ಬಳಗದಲ್ಲಿ ಅಂತಿಮ ದರ್ಶನದ ದೃಶ್ಯಗಳು

1 year agoAugust 13, 2024 9:18 am
1 year agoAugust 13, 2024 9:24 am

ದಾವಣಗೆರೆ ಬಸವ ಬಳಗದಲ್ಲಿ ಅಂತಿಮ ದರ್ಶನದ ದೃಶ್ಯಗಳು

ದಾವಣಗೆರೆ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ, ನೀಲಗುಂದ ಸ್ವಾಮೀಜಿ, ಶಿರಮಗೊಂಡನಹಳ್ಳಿ ಬಸವಗುರು ತಪೋವನದ ಶಿವಾನಂದ ಗುರೂಜಿ, ಬೆಳಗಾವಿಯ ಚಿನ್ಮಯ ಶರಣರು, ನೀರತಡಿ ರುದ್ರಪ್ಪ ಶರಣರು ಅಂತಿಮ ದರ್ಶನ ಪಡೆದಿದ್ದಾರೆ.

ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕೆ ಬಿ ಪರಮೇಶ್ವರಪ್ಪ, ತಾಲ್ಲೂಕು ಅಧ್ಯಕ್ಷರು ಗೋಪಾನಾಳ್ ರುದ್ರಗೌಡ್ರು ಅಂತಿಮ ದರ್ಶನ ಪಡೆದಿದ್ದಾರೆ.

1 year agoAugust 13, 2024 9:14 am

ಸಿದ್ದರಾಮಣ್ಣನವರ ಅಂತಿಮ ದರ್ಶನಕ್ಕೆ ನೂರಾರು ಜನ ಶರಣು ಬಂಧುಗಳು ಬಸವ ಬಳಗಕ್ಕೆ ಬರುತ್ತಿದ್ದಾರೆ. ಅವರ ಹುಟ್ಟೂರಾದ ಮತ್ತೀಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅಂತ್ಯಕ್ರಿಯೆ ನಡೆಯಲಿದೆ.

1 year agoAugust 13, 2024 9:02 am

ಶತಮಾನದ ಶರಣ ವಿ ಸಿದ್ದರಾಮಣ್ಣ (1920-2024)

ಫೋಟೋ ವಿಡಿಯೋ ಸಮೇತ ನೆನ್ನೆಯ ವರದಿ.

Share This Article
Leave a comment

Leave a Reply

Your email address will not be published. Required fields are marked *