ಅಭಿಯಾನದ ಎರಡನೇ ದಿನದ ವರದಿಗಳು
ವೇದಿಕೆ ಕಾರ್ಯಕ್ರಮ ಲೈವ್ ವಿಡಿಯೋ
ಮಳೆ ಬರುತ್ತಿದೆ, ಮಳೆಯಲ್ಲೆ ಯಾತ್ರೆ ಸಾಗಿದೆ …
ಪಾದಯಾತ್ರೆಯಲ್ಲಿ ಪೂಜ್ಯರು, ಪ್ರಮುಖರು
ಸಾಣೇಹಳ್ಳಿ ಶ್ರೀಗಳು, ಸಿದ್ಧರಾಮ ಶ್ರೀಗಳು, ಕೋರ್ಣೇಶ್ವರ ಶ್ರೀಗಳು, ಬಾಲ್ಕಿ ಪಟ್ಟದ್ದೇವರು, ಸೊನ್ನದ ಶಿವಾನಂದ ಶ್ರೀಗಳು, ಸುಲಫಲ ಶ್ರೀಗಳು, ಮತ್ತಿತರ ಪೂಜ್ಯರು, ಆಳಂದ ಶಾಸಕರಾದ ಬಿ. ಆರ್. ಪಾಟೀಲ, ಅಭಿಯಾನ ಸಮಿತಿ ಅಧ್ಯಕ್ಷರಾದ ಅರುಣಕುಮಾರ ಎಸ್. ಪಾಟೀಲ, ಬಸವರಾಜ ದೇಶಮುಖ್, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಪ್ರಭುಲಿಂಗ ಮಹಾಗಾಂವಕರ, ಕಾರ್ಯದರ್ಶಿ ಆರ್. ಜಿ ಶೇಟಗಾರ, ಪದಾಧಿಕಾರಿಗಳು, ಬಸವ ಕೇಂದ್ರ, ಬಸವ ಸಮಿತಿ, ಶರಣ ಸಾಹಿತ್ಯ ಪರಿಷತ್ ಅಧ್ಯಕರು, ಪದಾಧಿಕಾರಿಗಳು, ಬಸವಪರ ಸಂಘಟನೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಸಾರ್ವಜನಿಕರು ಸಾಮರಸ್ಯ ನಡಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ವಚನ ಹೊತ್ತು ಸಾಗುತ್ತಿರುವ ಶರಣೆಯರು
ನೂರಾರು ಶರಣೆಯರು ವಚನಗ್ರಂಥ ತಲೆಮೇಲೆ ಹೊತ್ತು ಸಾಗುತ್ತಿದ್ದಾರೆ. ಡೊಳ್ಳು ಕುಣಿತ, ನಗಾರಿ, ಹಲಗೆ ಜಾನಪದ ಕಲಾಮೇಳಗಳು ಪಾದಯಾತ್ರೆಯ ಆಕರ್ಷಣೆಯನ್ನು ಹೆಚ್ಚಿಸಿವೆ.








ಅಭಿಯಾನ ಪಾದಯಾತ್ರೆ ‘ಸಾಮರಸ್ಯ ನಡಿಗೆ’
ಅಭಿಯಾನ ಪಾದಯಾತ್ರೆಗೆ ‘ಸಾಮರಸ್ಯ ನಡಿಗೆ’ ಎಂದು ಕರೆಯಲಾಗಿದೆ. ಸಾಮರಸ್ಯ ನಡಿಗೆ ತಿಮ್ಮಾಪುರ ವೃತ್ತದಿಂದ ಶರಣಬಸಪ್ಪ ಸೆಂಟೆನರಿ ಹಾಲ್ ವರೆಗೆ ನಡೆಯಲಿದೆ.
ಧನ್ಯವಾದ, ಶರಣು ಶಿಣ್ಣೂರ್
ಎರಡನೇ ದಿನದ ಅಭಿಯಾನದ ವರದಿಗಳನ್ನು ನಿರಂತರವಾಗಿ ಕಲಿಸುತ್ತಿರುವ ಶರಣು ಶಿಣ್ಣೂರ ಅವರಿಗೆ ಧನ್ಯವಾದಗಳು.
ಸಂವಾದ ಕಾರ್ಯಕ್ರಮ ಮುಕ್ತಾಯ
ವಚನ ಮಂಗಲದೊಂದಿಗೆ ಸಂವಾದ ಕಾರ್ಯಕ್ರಮ ಮುಕ್ತಾಯ



ಸಂವಾದ: ದಸರಾ ದರ್ಬಾರ್ ಬಗ್ಗೆ ಭಾಲ್ಕಿ ಶ್ರೀಗಳಿಗೆ ಪ್ರಶ್ನೆ
ಬಸವಕಲ್ಯಾಣದಲ್ಲಿ ದಸರಾ ದರ್ಬಾರ್ ಗೆ ಸಹಮತಿ ನೀಡಿದ್ದೀರಾ ಎಂದು ಶಿವಶರಣಪ್ಪ ದೇಗಾಂವ ಕೇಳಿದರು. ಅದಕ್ಕೆ ಭಾಲ್ಕಿ ಶ್ರೀಗಳು ಉತ್ತರಿಸುತ್ತ, ದರ್ಬಾರದಲ್ಲಿ ಬಸವಣ್ಣನವರ ಬಗ್ಗೆ ಅವರು ಅಪಪ್ರಚಾರ ಮಾಡಿದಲ್ಲಿ ನಾವು ಉಗ್ರವಾಗಿ ಪ್ರತಿಭಟಿಸುತ್ತೇವೆ ಎಂದರು.
ಸಂವಾದ: ಲಿಂಗಾಯತ ಧರ್ಮ ಹೋರಾಟ
ಲಿಂಗಾಯತ ಧರ್ಮ ಹೋರಾಟ ಮತ್ತು ಧರ್ಮಮಾನ್ಯತೆ ಬಗ್ಗೆ ಸ್ಪಷ್ಟನೆ ಕೇಳಿದ ಆರ್.ಜಿ. ಶೇಟಕಾರ್ ಅವರಿಗೆ ಸಿದ್ದರಾಮ ಶ್ರೀಗಳು ಉತ್ತರಿಸಿದರು. ಹಿಂದಿನ ರ್ಯಾಲಿಗಳನ್ನು ಉಲ್ಲೇಖಿಸಿ, ಲಿಂಗಾಯತ ಧರ್ಮದ ಶಿಫಾರಸ್ಸಿನ ಹಂತದಲ್ಲಿದೆ. ಸ್ವಲ್ಪ ದಿನಗಳಲ್ಲಿ ಸರ್ಕಾರವು ಮಾನ್ಯತೆ ನೀಡುತ್ತೆ ಎಂದರು.
ಸಂವಾದ: ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಸ್ವಾಮೀಜಿಗಳಿಗೂ ಪಾಠ
ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ಗೋದುತಾಯಿ ಮಹಿಳಾ ಮಹಿಳಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ನೀಲಾಂಬಿಕ ಪೊಲೀಸಪಾಟೀಲ ವಿದ್ಯಾರ್ಥಿಗಳ ಸಂವಾದ ಉಲ್ಲೇಖಿಸಿ ಮಾತನಾಡಿದರು.
ಮಕ್ಕಳಲ್ಲಿರುವ ಜಾಗೃತಿ ನಮ್ಮಲ್ಲಿಲ್ಲ ಇಂದಿನ ಸಂವಾದದಿಂದ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಸ್ವಾಮೀಜಿಗಳಿಗೂ ಸಹ ಪಾಠವಾಗಿದೆ ಎಂದರು. ಆದ್ದರಿಂದ ಶರಣರ ವಚನಗಳನ್ನು ಅಧ್ಯಯನ ಮಾಡಿ, ಬಸವತತ್ವ ಅರಿತು ಬಾಳಿರಿ ಎಂದರು. ಮಠಗಳಿಂದ ಸಮಾಜಕ್ಕೆ ಬಹಳಷ್ಟು ಕೊಡುಗೆ ಆಗಿದೆ ಎಂದರು.
ಸಂವಾದ: ಜಾತಿವಾದಿಗಳಾಗಿರುವ ಲಿಂಗಾಯತರು
ಜಾತಿವಿರೋಧಿ ಬಸವತತ್ವಕ್ಕೆ ವಿರುದ್ಧವಾಗಿ ಇಂದಿನ ಲಿಂಗಾಯತರು ಜಾತಿವಾದಿಗಳಾಗಿದ್ದಾರೆ, ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ, ಚೆನ್ನಬಸವ ಸ್ವಾಮೀಜಿಗಳು ಲಿಂಗಾಯತ ಎಂಬುದು ಜಾತಿ ಅಲ್ಲ, ಅದೊಂದು ಧರ್ಮ. ಇದರ ಬಗ್ಗೆ ಅರಿವಿರದ ಇಂದಿನ ಲಿಂಗಾಯತರಿಗೆ ಬಸವ ಸಂಸ್ಕೃತಿ ಅಭಿಯಾನದ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು. ಕ್ರಮೇಣ ಈ ಬಗ್ಗೆ ಸುಧಾರಣೆ ಬರುತ್ತೆ ಎಂದರು.
ಲಿಂಗಾಯತ ಯಾಕೆ ವಿಶ್ವಧರ್ಮ ಆಗುತ್ತಿಲ್ಲ?
ಮಕ್ಕಳೊಂದಿಗೆ ಪೂಜ್ಯರ ಸಂವಾದದ ಚಿತ್ರಗಳು



ಈಗಿನ ಸಮಾಜದಲ್ಲಿ ಕಲ್ಯಾಣವನ್ನು ನೋಡಬಹುದೇ?
ಸಂವಾದದಲ್ಲಿ ಇದು ಒಂದು ಮಗು ಕೇಳಿದ ಪ್ರಶ್ನೆ. ಸಾಣೇಹಳ್ಳಿ ಶ್ರೀಗಳು ಉತ್ತರಿಸಿದರು.
ಸಂವಾದ ಕಾರ್ಯಕ್ರಮದ ಉದ್ಘಾಟನೆ …
ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನ ಸೆಂಟರ್ ಹಾಲಿನಲ್ಲಿ ಬಸವಧ್ವಜಾರೋಹಣ ನಂತರ ಕಾಲೇಜು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಜೊತೆ ವಚನ ಸಂವಾದ ಕಾರ್ಯಕ್ರಮ ಶುರುವಾಗಿದೆ.






ಬಸವ ಸಂಸ್ಕೃತಿ ಅಭಿಯಾನ: ದಿನ 2
ಕಲಬುರಗಿಯಲ್ಲಿ 2ನೇ ದಿನದ ಬಸವ ಸಂಸ್ಕೃತಿ ಅಭಿಯಾನ ಶುರುವಾಗಿದೆ. ಆರಂಭದಲ್ಲಿ ಸಾಣೇಹಳ್ಳಿ ಕಲಾತಂಡದವರಿಂದ ವಚನ ಸಂಗೀತ ಗಾಯನ.
