ವೈಷ್ಣವ ಭಕ್ತ ಕೃಷ್ಣದೇವರಾಯನು ಹಂಪಿಯ ಮೂಲ ದೈವ ವಿರೂಪಾಕ್ಷನನ್ನು ಕಡೆಗಣಿಸಿದನು. ಇದರಿಂದ ಕೆರಳಿದ ಶೈವರು ಸುಲ್ತಾನರ ಜೊತೆ ಸೇರಿ ಹಂಪಿಯ ವಿರುದ್ಧ ತಿರುಗಿಬಿದ್ದರು.
ಅವನ ೨೦ ಶಾಸನಗಳಲ್ಲಿ ನಾಲಕ್ಕು ಮಾತ್ರ ವಿರೂಪಾಕ್ಷನಿಗೆ ಕೊಟ್ಟ ಎರಡು ದಾನಗಳನ್ನು ದಾಖಲಿಸುತ್ತವೆ. ಬೇರೆ ಎಲ್ಲಾ ಶಾಸನಗಳಲ್ಲಿ ಕಾಣುವುದು ಅವನ ವೈಷ್ಣವ ಭಕ್ತಿ ಮಾತ್ರ.
ಪಟ್ಟಕ್ಕೆ ಬಂದ (ಕ್ರಿ ಶ 1510) ಮೊದಲ ಮೂರು ವರ್ಷ ಮಾತ್ರ ವಿರೂಪಾಕ್ಷನಿಗೆ ದಾನ ನೀಡಿದ. ನಂತರ ಕೊನೆಯತನಕ (ಕ್ರಿ ಶ 1526) ವಿರೂಪಾಕ್ಷನ ಕಡೆ ತಿರುಗಿಯೂ ನೋಡಲಿಲ್ಲ.
ನಂತರದ ಶಾಸನಗಳು ಬಾಲಕೃಷ್ಣ, ರಘುನಾಥ, ವಿಜಯ ವಿಠ್ಠಲ, ಉಗ್ರನರಸಿಂಹ, ಮುಂತಾದ ದೇವಾಲಯಗಳಿಗೆ ನೀಡಿದ ದಾನಗಳನ್ನು ದಾಖಲಿಸುತ್ತವೆ. ಈ ದಾನಗಳ ಪ್ರಮಾಣ ಕೂಡ ಹೆಚ್ಚು.
ಹಂಪಿಯಲ್ಲಿ ಧ್ವಂಸವಾಗಿದ್ದುಅವನ ನೆಚ್ಚಿನ ವಿಜಯ ವಿಠ್ಠಲ, ಬಾಲಕೃಷ್ಣ, ಉಗ್ರ ನರಸಿಂಹ ದೇವಾಲಯಗಳು. ವಿರೂಪಾಕ್ಷನಂತಹ ಶೈವ ದೇವಾಲಯಗಳು ಹಾನಿಯಾಗದೆ ಉಳಿದುಕೊಂಡವು.
ಕ್ರಿ ಶ 1513 ರಲ್ಲಿ ಅವನು ಮೂಲ ವಿರೂಪಾಕ್ಷನಿಗೆ ಪ್ರತಿಸ್ಪರ್ದಿಯಾಗಿ ಪ್ರಸನ್ನ ವಿರೂಪಾಕ್ಷ ದೇವಸ್ಥಾನ ಕಟ್ಟಿಸಿ ಅದಕ್ಕೂ ಎರಡು ದಾನಗಳನ್ನು ಮಾಡಿದ. ನಂತರ ಇರುವತನಕ ಅದನ್ನೂ ಕಡೆಗಣಿಸಿದ.
(‘ಕೃಷ್ಣದೇವರಾಯನ ಹಂಪಿ ಶಾಸನಗಳು ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)