ಲಂಡನ್ ಸಂಸತ್ತಿನಲ್ಲಿ ಬಸವ ಸ್ಮಾರಕ ದಶಮಾನೋತ್ಸವ ಆಚರಿಸುವ ಪ್ರಯತ್ನ : ಬೊಮ್ಮಾಯಿ

ಬಸವ ಮೀಡಿಯಾ
ಬಸವ ಮೀಡಿಯಾ

ಲಂಡನ್

ಲಂಡನ್​​ನಲ್ಲಿರುವ ​​ ಬಸವೇಶ್ವರ ​​ಸ್ಮಾರಕದ ದಶಮಾನೋತ್ಸವವನ್ನು ಇಂಗ್ಲೆಂಡಿನ ಸಂಸತ್ತಿನಲ್ಲಿ ಆಚರಿಸುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಎರಡೂ ದೇಶಗಳ ಪ್ರಧಾನಿಗಳನ್ನು ಸೇರಿಸುವ ಚಿಂತನೆಯೂ ಇದೆ. ಭಾರತದ ವಿದೇಶಾಂಗ ಸಚಿವಾಲಯದ ಮೂಲಕ ಈ ಪ್ರಯತ್ನ ನಡೆಯಬೇಕು ಮತ್ತು ಇದರ ಬಗ್ಗೆ ತಾವು ಆಗಲೇ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಲಂಡಲ್‌ನ ಥೇಮ್ಸ್ ನದಿ ತೀರದಲ್ಲಿ 2015ರಲ್ಲಿ ಅನಾವರಣಗೊಂಡಿದ್ದ ಸ್ಮಾರಕ ಸದ್ಯದಲ್ಲೇ 10 ವರ್ಷ ಪೂರೈಸಲಿದೆ.

ಸ್ಮಾರಕ ನಿರ್ಮಿಸಿದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಅಧಿಕೃತ ಆಹ್ವಾನ ಪತ್ರವನ್ನು ಮೋದಿ ಅವರಿಗೆ ಹಸ್ತಾಂತರಿಸಲು ಬೊಮ್ಮಾಯಿಯವರನ್ನು ವಿನಂತಿಸಿದೆ.

ಸದ್ಯ ಕುಟುಂಬ ಸಮೇತ ಲಂಡನ್​ ಪ್ರವಾಸದಲ್ಲಿರುವ ಬೊಮ್ಮಾಯಿ ಬಸವೇಶ್ವರ ಮೂರ್ತಿಗೆ ಶುಕ್ರವಾರ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡುತ್ತ ಬೊಮ್ಮಾಯಿ ತಾವು ಸಮಾಜದಲ್ಲಿ ಸಮಾನತೆಗಾಗಿ ಶ್ರಮಿಸಿದ್ದ ಬಸವಣ್ಣನವರ ಅನುಯಾಯಿ ಎಂದು ಹೇಳಿದರು. ಮ್ಯಾಗ್ನ ಕಾರ್ಟಾಕ್ಕಿಂತ ಮುಂಚೆಯೇ ಅನುಭವ ಮಂಟಪದಲ್ಲಿ ಪ್ರಜಾಪ್ರಭುತ್ವದ ಚಿಂತನೆ ನಡೆದಿತ್ತು ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಹಾಗೂ ಯುನೈಟೆಡ್ ಕಿಂಗ್ಡಮ್‌ನ ಬಸವ ಸಮಿತಿಯು ಜಂಟಿಯಾಗಿ ಆಯೋಜಿಸಿತ್ತು. ಕನ್ನಡ ಬಳಗ, ಕನ್ನಡಿಗರು ಯುಕೆ ಮತ್ತು ಭಾರತೀಯ ವಿದ್ಯಾ ಭವನದ ಗಣ್ಯರು ಭಾಗವಹಿಸಿದರು.

ಲಂಡನ್‌ನ ಮಾಜಿ ಉಪಮೇಯರ್ ರಾಜೇಶ್ ಅಗರ್ವಾಲ್, ಲ್ಯಾಂಬೆತ್ ಮಾಜಿ ಮೇಯರ್ ಡಾ. ನೀರಾಜ್ ಪಾಟೀಲ್, ಬಸವ ಸಮಿತಿಯ ಅಧಿಕಾರಿಗಳಾದ ಶ್ರೀ ಅಭಿಜಿತ್ ಸಾಲಿಯಂಥ್ ಮತ್ತು ಶ್ರೀ ರಂಗನಾಥ ಮಿರ್ಜಿ ಅವರು ಬ್ರಿಟಿಷ್ ಭಾರತೀಯ ಮತ್ತು ಕನ್ನಡ ಸಮುದಾಯವನ್ನು ಪ್ರತಿನಿಧಿಸುತ್ತಾ ಸಮಾರಂಭದ ಅತಿಥಿಗಳನ್ನು ಸ್ವಾಗತಿಸಿದರು.

Share This Article
Leave a comment

Leave a Reply

Your email address will not be published. Required fields are marked *