ರಾಷ್ಟೋತ್ಥಾನ ಪರಿಷತ್‌ ಭೂಮಿ ಬಳಸಿಲ್ಲ, ಚಾಣಕ್ಯ ವಿವಿಯಿಂದ 137 ಕೋಟಿ ನಷ್ಟ: ಎಂ ಬಿ ಪಾಟೀಲ್

ಬಸವ ಮೀಡಿಯಾ
ಬಸವ ಮೀಡಿಯಾ

ಚಾಣಕ್ಯ ವಿಶ್ವವಿದ್ಯಾಲಯದಿಂದ ಕೆಐಎಡಿಬಿಗೆ 137 ಕೋಟಿ ರೂ ನಷ್ಟವಾಗಿದೆ, ರಾಷ್ಟೋತ್ಥಾನ ಪರಿಷತ್‌ಗೆ ಹೈಟೆಕ್ ಕೊಟ್ಟ ಭೂಮಿ ಉಪಯೋಗಿಸುತ್ತಿಲ್ಲ. ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಚಾಣಕ್ಯ ವಿವಿಗೆ 116 ಎಕರೆಯನ್ನು ಕೇವಲ 50 ಕೋಟಿ ರೂ. ಗೆ ಕೆಐಎಡಿಬಿ ಜಮೀನು ನೀಡಿದ್ದು, ಇದರಿಂದ 137 ಕೋಟಿ ರೂ. ನಷ್ಟ ಆಗಿದೆ ಎಂದು ಆಪಾದಿಸಿದ್ದಾರೆ. 2025ರ ಜೂನ್ ಒಳಗೆ ಅವರು ಕನಿಷ್ಠ ಶೇ.51ರಷ್ಟು ಜಾಗವನ್ನು ಬಳಕೆ ಮಾಡದಿದ್ದರೆ ಉಳಿದ ಜಾಗವನ್ನು ವಾಪಸ್ ತೆಗೆದುಕೊಳ್ಳಲಾಗುವುದು ಎಂದರು.

ಚಾಣಕ್ಯ ವಿವಿಯವರು ಕೋವಿಡ್ ನೆಪ ಹೇಳಿಕೊಂಡು ಮತ್ತೆ ಮತ್ತೆ ಕಾಲಾವಕಾಶ ಕೇಳಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಪುನಃ ಎರಡು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ, ಎಂದು ಹೇಳಿದರು.

ಗುರುವಾರ ವಿಧಾನಸೌದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಅಂಗ ಸಂಸ್ಥೆಯಾಗಿರುವ ರಾಷ್ಟೋತ್ಥಾನ ಪರಿಷತ್‌ಗೆ 2013ರಲ್ಲಿ ಹೈಟೆಕ್ ಡಿಫೆನ್ಸ್ ಪಾರ್ಕ್‌ನಲ್ಲಿ ವಿವಿಧೋದ್ದೇಶ ವಾಣಿಜ್ಯ ಸಂಕೀರ್ಣಕ್ಕೆಂದು 5 ಎಕರೆ ಕೊಡಲಾಗಿದೆ. ಇದುವರೆಗೂ ಅವರು ಅಲ್ಲಿ ಏನೂ ಮಾಡಿಲ್ಲ ಎಂದರು.

ಹಿಂದೆ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ ನಿರಾಣಿ ಬಾಗಲಕೋಟೆಯ ನವನಗರ ಕೈಗಾರಿಕಾ ಪ್ರದೇಶದಲ್ಲಿ 2012ರ ಮಾರ್ಚ್ 12ರಂದು ತಮಗೆ ತಾವೇ 25 ಎಕರೆ ಕೊಟ್ಟುಕೊಂಡು, ಅಲ್ಲಿ ತೇಜಸ್ ಇಂಟರ್‌ ನ್ಯಾಷನಲ್ ಸ್ಕೂಲ್ ಕಟ್ಟಿದ್ದಾರೆ.

ಮತ್ತೆ ಕೈಗಾರಿಕಾ ಸಚಿವರಾದಾಗ ಕೂಡ 2022ರ ಡಿ.19ರಂದು ಅಲ್ಲೇ ಮತ್ತೆ 6.17 ಎಕರೆ ತೆಗೆದುಕೊಂಡು, ತಮಗೆ ತಾವೇ ಅಭಿನಂದನಾ ಪತ್ರ ಬರೆದುಕೊಂಡಿದ್ದಾರೆ ಎಂದು ಆಪಾದಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್‌ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬೆಂಗಳೂರಿನ ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಕೆಐಎಡಿಬಿಯ 5 ಎಕರೆ ಮಂಜೂರು ಮಾಡಲಾಗಿದೆ ಎಂಬ ಹಿನ್ನಲೆಯಲ್ಲಿ ಎಂ ಬಿ ಪಾಟೀಲ್ ಮಾತನಾಡಿದರು.

ಇದರ ವಿರುದ್ಧ ಏಕೆ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿಲ್ಲ ಎಂದು ಸಚಿವರು ಪ್ರಶ್ನಿಸಿದರು.

Share This Article
1 Comment
  • ನಾರಾಯಣಸ್ವಾಮಿ ದಲಿತ ಮುಖವಾಡ ಹಾಕಿಕೊಂಡ ಮನುವ್ಯಾದಿ,, ದಲಿತ ಮತ್ತು ಹಿಂದುಳಿದ ವರ್ಗಗಳ ರಾಜಕೀಯ ಬೆಳವಣಿಗೆಯನ್ನು ಅದೇ ವರ್ಗದ ಪೂರ್ವಾಗ್ರಹಪೀಡಿತ ಮತ್ತು ಸ್ವಾಭಿಮಾನ ಬಿಟ್ಟವರನ್ನು ಬಳಸಿಕೊಂಡು ಮೊಟಕುಗೊಳಿಸುವ ಕುತಂತ್ರ,, ಶತಮಾನಗಳಿಂದ ನಡೆದುಕೊಂಡು ಬಂದಿದೆ,,ಕೆಲಸ ಮುಗಿದ ಮೇಲೆ ಬಳಸಿ ಬಿಸಾಕುವರು,,ರಾಜಭವನದ ಘನತೆ ಗೌರವ ಜವಾಬ್ದಾರಿ ನಕಲಿ ದೇಶಭಕ್ತರ ಕೈಗೆ ಸಿಕ್ಕು ಹಾಸ್ಯಾಸ್ಪದ ಆಗಿರುವುದು ದುರಾದೃಷ್ಟ

Leave a Reply

Your email address will not be published. Required fields are marked *