ಲಿಂಗಾಯತ ಧರ್ಮದವರನ್ನೇ ಲಿಂಗಾಯತ ಧರ್ಮಕ್ಕೆ ದ್ರೋಹವೆಸಗಲು ಆರೆಸ್ಸೆಸ್ ಕಳಿಸುತ್ತಿದೆ
ಬೀದರ್
(ಸಂಘ ಪರಿವಾರದ ಏಕ ಸಂಸ್ಕೃತಿ ಉತ್ಸವದ ಪ್ರಚಾರಕ್ಕೆಂದು ಹೊರಟಿರುವ ‘ಬಸವ ರಥ’ಕ್ಕೆ ಬಸವಗಿರಿಯ ಅಕ್ಕ ಗಂಗಾಂಬಿಕೆಯವರು ಶುಭ ಹಾರೈಸಿದ್ದಾರೆ. ಇದಕ್ಕೆ ಬೀದರಿನ ಬಸವ ಮಂಟಪದ ಪೂಜ್ಯ ಸತ್ಯದೇವಿ ಮಾತಾಜಿ ಅವರ ಪ್ರತಿಕ್ರಿಯೆ)
ಇತ್ತೀಚೆಗೆ ಕೆಲವರು ಲಿಂಗಾಯತ ಧರ್ಮೀಯರನ್ನು ದಾರಿ ತಪ್ಪಿಸಲು ಬಸವಣ್ಣನವರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಮೇಲೆ ಲಿಂಗಾಯತ ಧರ್ಮದ ವೇಷ ಹಾಕಿಕೊಂಡು ಒಳಗೆ ಮನುವಾದವನ್ನು ತುಂಬುತ್ತಿದ್ದಾರೆ. ಇದೇ ರೀತಿಯಲ್ಲಿ ಕೆಲವು ಪುಸ್ತಕಗಳು ಹೊರ ಬಂದಿವೆ. ಹಾಗೆಯೇ ಈ ರಥದ ಮೇಲಿನ ಹೆಸರು ‘ಬಸವ ರಥ’, ಒಳಗೆ ಮನುವಾದದ ಪ್ರಚಾರ.
ಈ ರಥದ ಉಸ್ತುವಾರಿ ಜವಾಬ್ದಾರಿಯನ್ನು ಹೊತ್ತವರು ಸೇಡಂನ ಬಸವರಾಜ ಪಾಟೀಲರು. ಬಸವರಾಜ ಪಾಟೀಲ ಸೇಡಂ ಬೇರೆಯವರಲ್ಲ, ಅವರು ನಮ್ಮವರೇ. ನಮ್ಮವರಾದರೂ ಸಹಿತ ಆರೆಸ್ಸೆಸ್ ಪರವಾಗಿ ಕೆಲಸ ಮಾಡುತ್ತಾ ಬಂದಿರುವವರು.
ಮನುವಾದಿ ಆರೆಸ್ಸೆಸ್ ನಮ್ಮವರನ್ನೇ ಅಂದರೆ ಲಿಂಗಾಯತ ಧರ್ಮದವರನ್ನೇ ಲಿಂಗಾಯತ ಧರ್ಮಕ್ಕೆ ದ್ರೋಹವೆಸಗಲು ಮುಂದೆ ಬಿಡುತ್ತಿದ್ದಾರೆ. ಹುಟ್ಟಿದ್ದು ಲಿಂಗಾಯತ ಧರ್ಮದಲ್ಲಿ, ಇಟ್ಟುಕೊಂಡ ಹೆಸರು ಬಸವಣ್ಣನವರದು. ಆದರೆ ಮನುವಾದಿಗಳೊಂದಿಗೆ ಕೈಜೋಡಿಸಿ ನಮಗೇ ದ್ರೋಹವೆಸಗುವ ಕೆಲಸ ಮಾಡುತ್ತಿದ್ದಾರೆ.
ಇಂಥವರನ್ನು ಅಕ್ಕ ಗಂಗಾಂಬಿಕೆಯಂತವರು ಬೆಂಬಲಿಸುತ್ತಾರೆಂದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ.
ಇಂಥವರನ್ನು ಅಕ್ಕ ಗಂಗಾಂಬಿಕೆಯಂತವರು ಬೆಂಬಲಿಸುತ್ತಾರೆಂದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಮೇಲೆ ‘ಬಸವ ರಥ’ ಒಳಗೆ ಮನುವಾದಿತ್ವ. ಬಾಯಲ್ಲಿ ಬಸವತತ್ವ ತಿನ್ನುವುದು ಬದನೆಕಾಯಿ. ಇಂಥವರು ತಮ್ಮನ್ನು ತಮ್ಮ ವಿಚಾರ ಶಕ್ತಿಯನ್ನು ಮನುವಾದಿತ್ವಕ್ಕೆ ಮಾರಿಕೊಂಡಿರುತ್ತಾರೆ. ನಿಜವಾದ ಬಸವತತ್ವದವರಾಗಿದ್ದರೆ ಸ್ವಲ್ಪಾದರೂ ಚಿಂತನೆ ಮಾಡಬೇಕಾಗಿತ್ತು.

ಕೆಲವರು ನಾವೇ ಬಸವತತ್ವ ನಿಷ್ಠರು, ನಾವೇ ದೊಡ್ಡವರು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತ ನಿಜವಾದ ಬಸವ ತತ್ವದವರನ್ನು ಬಸವತತ್ವ ಪ್ರಚಾರಕರನ್ನು ವಿರೋಧ ಮಾಡುತ್ತ ಒಳಗೊಳಗೆ ಮನುವಾದಿಗಳ ಜೊತೆಗೆ ಕೈಜೋಡಿಸುತ್ತಾರೆ. ಇವರು ಸ್ವತಂತ್ರವಾದ ವಿಚಾರ ಶಕ್ತಿಯನ್ನು ಕಳೆದುಕೊಂಡಿದ್ದಾರೆ.
ಇವರಿಗೆ ಶಾಲು, ಹಾರ-ತುರಾಯಿ, ಕೀರ್ತಿ-ವಾರ್ತೆ ಇದ್ದರೆ ಸಾಕು, ಎಲ್ಲಿಗಾದರೂ ಹೋಗುತ್ತಾರೆ, ಯಾವ ಕಾರ್ಯಕ್ರಮದಲ್ಲಾದರೂ ಭಾಗವಹಿಸುತ್ತಾರೆ. ಯಾರನ್ನಾದರೂ ಹೊಗಳುತ್ತಾರೆ. ಇಲ್ಲಿ ಆಡಿದ ನಾಲಿಗೆ ಮತ್ತೊಂದು ಕಡೆಗೆ ಸ್ಥಿರವಾಗಿರುವುದಿಲ್ಲ. ಅವರವರ ಕಂಡರೆ ಅವರಂತೆ ತಮ್ಮ ಮಾತಿನ ಚಪಲತೆಯನ್ನು ತೀರಿಸಿಕೊಂಡು ಚಪ್ಪಾಳೆ ತಟ್ಟಿಸಿಕೊಳ್ಳುತ್ತಾರೆ.
ಇವರು ನಿಜವಾದ ಬಸವ ತತ್ವದ ಪ್ರಚಾರಕರೇ ಆಗಿದ್ದರೆ, ಬಸವ ತತ್ವನಿಷ್ಠರು, ಲಿಂಗಾಯಿತ ಧರ್ಮೀಯರೇ ಆಗಿದ್ದರೆ, ಬಸವಣ್ಣನವರ ಮೇಲೆ ಪೂಜ್ಯತೆಯ ಭಾವನೆಯಿದ್ದರೆ, ಗುರು ಬಸವಣ್ಣನವರಿಗೆ ದ್ರೋಹವೆಸಗುವ ಕಾರ್ಯಕ್ರಮಕ್ಕೆ ಹೋಗುವಾಗ ಸ್ವಲ್ಪ ಚಿಂತನೆ ಮಾಡುತ್ತಿದ್ದರು.
ಇವರಿಗೆ ಬಸವಣ್ಣನವರ ಮೇಲೆ ಪೂಜ್ಯತೆಯ ಭಾವನೆಯಿದ್ದಿದ್ದರೆ, ಗುರು ಬಸವಣ್ಣನವರಿಗೆ ದ್ರೋಹವೆಸಗುವ ಕಾರ್ಯಕ್ರಮಕ್ಕೆ ಹೋಗುವಾಗ ಸ್ವಲ್ಪ ಚಿಂತನೆ ಮಾಡುತ್ತಿದ್ದರು.
ಇನ್ನು ಕೆಲವು ಲಿಂಗಾಯತ ಧರ್ಮೀಯರಿಗೆ ಇಂಥವರೇ ಬೇಕಾಗಿದ್ದಾರೆ. ಇಂಥವರನ್ನು ಹೊಗಳುತ್ತಾರೆ, ಇಂಥವರನ್ನೇ ಮೇಲಿಂದ ಮೇಲೆ ಕಾರ್ಯಕ್ರಮಗಳಿಗೆ ಕರೆಸುತ್ತಾರೆ. ಇಂಥವರಿಗೆ ಸಹಾಯ ಮಾಡುತ್ತಾರೆ. ಇಂಥವರನ್ನೇ ಪ್ರೋತ್ಸಾಹ ಕೊಟ್ಟು ಮೇಲೆತ್ತುತ್ತಾರೆ. ನಿಜವಾದ ಬಸವ ತತ್ವನಿಷ್ಠರನ್ನು ಯಾರು ಗುರುತಿಸಿ ಪ್ರೋತ್ಸಾಹಿಸುವುದಿಲ್ಲ. ಹೀಗಿದ್ದಾಗ ಲಿಂಗಾಯತ ಧರ್ಮೀಯರ ಒಗ್ಗಟ್ಟಾಗಲು ಹೇಗೆ ಸಾಧ್ಯ.
ಮನುವಾದಿಗಳ ಬಾಲ ಬಡಿಯುವ, ಬಸವತತ್ವದ ಪೂಜ್ಯರೇ ಇನ್ನಾದರೂ ಎಚ್ಚೆತ್ತುಕೊಳ್ಳಿ. ಗುರು ಬಸವಣ್ಣನವರ ಹೆಸರನ್ನು ಹೇಳಿಕೊಂಡು ಬಸವ ತಂದೆಯ ಬೆನ್ನಿಗೆ ಚೂರಿ ಹಾಕಬೇಡಿ, ಬಸವತತ್ವ ಹೇಳುತ್ತ ಗುರು ಬಸವಣ್ಣನವರಿಗೆ ದ್ರೋಹವೆಸಗಬೇಡಿ.