ಯಶಸ್ವಿಯಾದ ದಾಖಲೆ ಸಮಾರoಭ : ಡಾ. ಶಿವಕುಮಾರ ಮಾಲಿಪಾಟೀಲ
ಗಂಗಾವತಿ:
ಬಹುತೇಕ ಯಾವದೇ ಸಮಾರoಭಗಳಲ್ಲಿ ಒಂದಿಲ್ಲೊoದು ಅಡೆತಡೆಗಳಾಗುತ್ತವೆ. ಅದು ಪ್ರಕೃತಿಯಿಂದಾಗಬಹುದು, ಮಾಡಿದ ಅಡುಗೆಯಲ್ಲಿ ವ್ಯತ್ಯಾಸವಾಗಬಹುದು. ಎಲ್ಲವೂ ಸರಿಯಾಗಿದ್ದರೂ ವೇದಿಕೆಯಲ್ಲಿರುವ ಅತಿಥಿಗಳಲ್ಲಿ ಯಾರೋ ಒಬ್ಬರ ವಿವಾದಾತ್ಮಕ ಹೇಳಿಕೆಯಿಂದ ಸಭೆಯಲ್ಲಿ ಕೆಲವೊಮ್ಮೆ ಗೊಂದಲಗಳಾಗಬಹುದು.
ಆದರೆ ಯಾವದೇ ತೊಂದರೆಗಳಾಗದೆ ಅತ್ಯಂತ ಯಶಸ್ವಿಯಾಗಿ ಮಾರ್ಚ್ 22 ರಂದು ಗಂಗಾವತಿಯಲ್ಲಿ ನಡೆದ ಮಹಾದಂಡನಾಯಕರ ಸ್ಮರಣೋತ್ಸವ ಸಮಾರಂಭ ಎಂದು ಖ್ಯಾತ ದಂತವೈದ್ಯರು, ಪರಿಸರ ಪ್ರೇಮಿಗಳಾದ ಡಾ. ಶಿವಕುಮಾರ ಮಾಲಿಪಾಟೀಲ ಇವರು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಬಸವದಳದ ಗುರುಬಸವ ಮಂಟಪದಲ್ಲಿ ಜರುಗಿದ ಸ್ಮರಣೋತ್ಸವ ಸಮಾರoಭದ ಯಶಸ್ಸಿಗೆ ಶ್ರಮಿಸಿದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಈ ಯಶಸ್ಸಿನಲ್ಲಿ ವೀರೇಶ ಅವರನ್ನೊಳಗೊಂಡಂತೆ ಎಲ್ಲ ಕಾರ್ಯಕರ್ತರ ಸಮರ್ಪಣಾ ಸೇವೆ ಇದೆ. ಅಲ್ಲದೆ ಯಾರಿಂದಲೂ ದೇಣಿಗೆ ತೆಗೆದುಕೊಳ್ಳದ ಈ ಕಾರ್ಯಕ್ರಮಕ್ಕೆ ನಾನು ಖುಷಿಯಿಂದ ಐದು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಹೇಳಿದರು.
ನಾಗನಗೌಡ ಶಿಕ್ಷಕರು, ನೀಲಾಂಬಿಕಾ ಮಹಿಳಾ ಸಂಘದ ಅರೇಗಾರ ರತ್ನಮ್ಮ, ಕೊಪ್ಪಳದ ಸಂಕಪ್ಪ, ಅಮರಾಪುರ ಪಾಮಯ್ಯ, ಕಂಪ್ಲಿ ಬಸವ ಕೇಂದ್ರದ ಅಧ್ಯಕ್ಷ ಕೆ. ಬಸವರಾಜ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕೆ. ವೀರೇಶಪ್ಪ ಇವರಿoದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಚನ್ನಬಸಮ್ಮ ಕಂಪ್ಲಿ ವಚನ ಹೇಳಿದರು. ರೇಣಮ್ಮ ಗೌಡರ ಮಾತಾಜಿಯವರ ಕುರಿತು ಹಾಡನ್ನು ಹಾಡಿದರು.
ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿಗಂಗೋತ್ರಿ ಅಕ್ಕ ನಾಗಲಾoಬಿಕಾ ಗಣ ಬೀದರ, ಕಲಬುರಗಿ, ಬೆಳಗಾವಿ ಮತ್ತು ಬಸವ ಚಿಂತನಪ್ರಭೆ, ಆದ್ಯಾತ್ಮಿಕ, ಸಾಮಾಜಿಕ ಜಾಲತಾಣ ಕೊಪ್ಪಳ ಇವರು ಮುತುವರ್ಜಿ ವಹಿಸಿ ಮಾಡಿಸಿದ ಅಭಿನಂದನೆಯ ನೆನಪಿನ ಕಾಣಿಕೆಗಳನ್ನು ಬಸವಕೇಂದ್ರ ಮತ್ತು ಉಳಿದ ಆಯೋಜಕರಿಗೆ ಜಿಲ್ಲಾ ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ಸತೀಶ ವಿ. ಮಂಗಳೂರ ಇವರು ನೀಡಿದರು.

ಅಧ್ಯಕ್ಷರಾದ ದಿಲೀಪಕುಮಾರ ವಂದಾಲ, ಕೊಪ್ಪಳದ ಸುವರ್ಣ ಲಿಂಗನಗೌಡ, ಗುರುರಾಜ, ಬಸವಜ್ಯೋತಿ, ವಿನಯಕುಮಾರ ಅಂಗಡಿ, ಮಲ್ಲಿಕಾರ್ಜುನ ಅರಳಹಳ್ಳಿ, ವಿಜಯಲಕ್ಷ್ಮಿ ಹೊಮ್ಮಿನಾಳ, ರಾಜೇಶ್ವರಿ ಇನ್ನೂ ಹಲವಾರು ಶರಣ ಶರಣೆಯರು ಭಾಗವಹಿಸಿದ್ದರು.
