ಭಾಲ್ಕಿ ಮಹಾಮನೆಯಲ್ಲಿ ಬಸವ ಬೆಳಗು ಕಾರ್ಯಕ್ರಮ

ಭಾಲ್ಕಿ :

ತಾಲೂಕಿನ ತಲವಾಡ ಕೆ. ಗ್ರಾಮದ ಶಿವಪ್ರಕಾಶ ಕುಂಬಾರ ಅವರ ಮಹಾಮನೆಯಲ್ಲಿ ತಿಂಗಳ 10 ರ ಕಾರ್ಯಕ್ರಮ ಬಸವ ಬೆಳಗು ಜರುಗಿತು.

ಭಾಲ್ಕಿಯ ನಿವೃತ್ತ ಪ್ರಾಚಾರ್ಯರು ಹಾಗೂ ಬೀದರನ ವಚನ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್  ನಿರ್ದೇಶಕರಾದ ಚಂದ್ರಕಾಂತ ಬಿರಾದಾರ  ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಬಸವಾದಿ ಶಿವಶರಣರ ವಚನಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು  ಭಾಲ್ಕಿ ಶಿವಾಜಿ ಕಾಲೇಜಿನ ಉಪನ್ಯಾಸಕರಾದ ಶ್ರೀ ಬಾಲಾಜಿ ತಾಡಮಲೆ ಮಾತನಾಡಿದರು.

ವಿಶೇಷ ಅತಿಥಿಯಾಗಿ ಆಡಳಿತಾಧಿಕಾರಿಗಳು ಮತ್ತು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯ ನಾಗರಾಜ ಇಚ್ಚಂಗಿ  ಅವರು ಮಾತನಾಡಿ, ಜೀವನದಲ್ಲಿ ಒಳ್ಳೆಯ ಭಾಂದವ್ಯ ಹಾಗೂ ಸ್ನೇಹ ಸಂಪಾದನೆ ಇದ್ದರೆ ಮಾತ್ರ ಜೀವನ ನಡೆಸಲು ಸಹಕಾರಿಯಾಗುತ್ತದೆ. ಮತ್ತು ಸತ್ಸಂಗಗಳ ಅವಶ್ಯಕತೆ ಇದೆ ಎಂದು ಹೇಳಿದರು.

ತಳವಡ ಗ್ರಾಮದ ಅಕ್ಕನ ಬಳಗದವರಿಂದ ವಚನ ಪ್ರಾರ್ಥನೆ ನೆರವೇರಿತು. ಪ್ರಜ್ವಲ್ ಕುಂಬಾರ ವಚನ ಪ್ರಾರ್ಥನೆ ನಡೆಸಿಕೊಟ್ಟರು.

ಮಧುಕರ ಗಾಂವಕರ ಕಾರ್ಯಕ್ರಮ ನಿರೂಪಣೆ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೇವಿ ಕುಂಬಾರ ಶರಣು ಸಮರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪ್ರಭುದೇವ ಕುಂಬಾರ, ರಾಜೇಶ ಹಾಗೂ ಶ್ರೀ ಚನ್ನಬಸವೇಶ್ವರ ಗುರುಕುಲದ ಶಿಕ್ಷಕಿಯರ ಬಳಗ ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *