ರಾಮದುರ್ಗ
ಮಂಗಳವಾರ ರಸ್ತೆ ಅಪಘಾತದಲ್ಲಿ ಲಿಂಗೈಕ್ಯರಾದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ 51 ವರ್ಷದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಡುಬಡತನದಲ್ಲಿ ಬೆಳೆದರು. ಬಾಲ್ಯದಲ್ಲಿ ತಮ್ಮ ಸಹೋದರರ ಪಟ್ಟ ಕಷ್ಟದ ಬಗ್ಗೆ ಅನೇಕ ಸಂದರ್ಶನಗಳಲ್ಲಿ ತಿಳಿಸಿದ್ದಾರೆ.
ಅವರ ಪೋಷಕರು ಕೂಲಿ ಕೆಲಸ ಮಾಡಿ ಕುಟುಂಬವನ್ನ ನಿರ್ವಹಿಸುತ್ತಿದ್ದರು. ತಂದೆ ಮೃತಪಟ್ಟ ಬಳಿಕ ತಾಯಿ ರೊಟ್ಟಿ ವ್ಯಾಪಾರ ಮಾಡಿ ನಾಲ್ಕು ಜನ ಮಕ್ಕಳನ್ನ ತಾಯಿ ಸಾಕಿದ್ದರು.
ಕಷ್ಟದ ಜೀವನದಲ್ಲಿ ಛಲ ಬಿಡದೇ ಓದಿ ಕೆಎಎಸ್ ನಲ್ಲಿ ನಾಲ್ಕನೇ ರ್ಯಾಂಕ್ ಪಡೆದು ನಂತರ ಐಎಸ್ ಗೆ ಭಡ್ತಿ ಹೊಂದಿದರು.
ಯಾವುದೇ ಮನುಷ್ಯ ಮನಸ್ಸು ಮಾಡಿದ್ರೆ ಏನು ಬೇಕಾದರೂ ಮಾಡಬಹುದು, ಕಷ್ಟಪಟ್ಟು ಓದಿದರೆ ಒಂದಲ್ಲ ಒಂದು ದಿನ ದೊಡ್ಡ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಯಶಸ್ಸಿನ ಪಾಠ ಹೇಳಿಕೊಡುತ್ತಿದ್ದರು.
ಕಷ್ಟದ ಬದುಕಿನಲ್ಲೂ ಶ್ರಮದಿಂದ ಓದಿ ಉನ್ನತ ಹುದ್ದೆಗೆ ಏರಿದ್ದ ಅವರು ತಮ್ಮ ಕೆಲಸಗಳಿಂದಲೇ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಜನಸ್ನೇಹಿ ಅಧಿಕಾರಿಯಾಗಿ, ಭಾವುಕ ವ್ಯಕ್ತಿಯಾಗಿದ್ದ ಅವರು ಸದಾ ಪಾಸಿಟಿವ್ ಮನೋಭಾವ ಹೊಂದಿರಬೇಕೆಂದು ಸಲಹೆ ನೀಡುತ್ತಿದ್ದರು.
ʼನಾವು ಈ ಸಮಾಜದಿಂದ ಅನೇಕವುಗಳನ್ನ ಪಡೆದಿದ್ದೇವೆ, ಹೀಗಾಗಿ ನಾವು ಸಮಾಜಕ್ಕೆ ನಮ್ಮ ಕೈಲಾದಷ್ಟು ವಾಪಸ್ ಕೊಡಬೇಕುʼ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದರು.
