ಮಹಾರಾಷ್ಟ್ರದ ಅಹಮದಪುರದಲ್ಲಿ ಯಶಸ್ವಿ ಅನುಭವ ಮಂಟಪ ಉತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಅಹಮದಪುರ:

ಮಹಾರಾಷ್ಟ್ರ ಅಹಮದಪುರ ತಾಲೂಕಿನ ಕಿನಿಕದು ಗ್ರಾಮದ ಮೋಘಾ ಕೆರೆಯ ದಂಡೆಯ ಮೇಲೆ ಎರಡು ಎಕರೆ ವಿಸ್ತಾರದ ಬಸವ ಸೃಷ್ಟಿ ಉದ್ಯಾನವನದಲ್ಲಿ ಬಸವ ಸೃಷ್ಟಿ ಟ್ರಸ್ಟನ ಅಧ್ಯಕ್ಷರಾದ ಡಾ. ಭೀಮರಾವ ಪಾಟೀಲ ಅವರು ಜನೆವರಿ 2, 3 ಮತ್ತು 4ರಂದು ಮೂರು ದಿನ ಆಯೋಜಿಸಿದ್ದ ರಾಷ್ಟ್ರೀಯ ಅನುಭವ ಮಂಟಪ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಿತು.

2ರಂದು ಡಾ. ಭೀಮರಾವ ಪಾಟೀಲ ಅವರ ತಾಯಿ ಮುದ್ರಿಕೆ ಅವರ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಜರುಗಿತು. 3 ರಂದು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂದ್ರಪ್ರದೇಶ ಮೂರು ರಾಜ್ಯದಿಂದ ಆಗಮಿಸಿದ ಶರಣ ಶರಣೆಯರಿಂದ ಅನುಭವ ಮಂಟಪ ಸಂಸತ್ ನಡೆಯಿತು.

ಅನುಭವ ಮಂಟಪ ಸಂಸತ್ತಿನಲ್ಲಿ ಬೀದರ,  ಬಸವಕಲ್ಯಾಣ, ಸೋಲಾಪೂರು, ಲಾತೂರು, ಅಹಮದಪುರ, ಉದಗೀರ, ನಾಂದೇಡ್, ಶರಣ ಶರಣೆಯರು ಭಾಗವಹಿಸಿ ತಮ್ಮ ತಮ್ಮ ತಂಡದಿಂದ ಅನುಭಾವ ಮಂಡಿಸಿದರು.

ವಚನ ಅಧ್ಯಯನದ ಮಹತ್ವ, ಜಾಗತಿಕ ಮಟ್ಟದಲ್ಲಿ ಅನುಭವ ಮಂಟಪದ ಚಿಂತನೆಗಳ ಪ್ರಚಾರ, ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಮಾನ್ಯತೆ, ಇಷ್ಟಲಿಂಗ ಯೋಗದ ಮಹತ್ವ, ಲಿಂಗಾಂಗ ಯೋಗದ ವೈಜ್ಞಾನಿಕ ಚಿಂತನೆ, ಶರಣರ ಪರಿಸರವಾದ, ಬಸವ ಧರ್ಮದಲ್ಲಿ ಹೆಣ್ಣುಮಕ್ಕಳಿಗೆ ಸಮಾನತೆ, ವಚನಗಳಲ್ಲಿ ರೈತರ ಸಮಸ್ಯೆಗೆ ಪರಿಹಾರ, ಲಿಂಗಾಯತ ಧರ್ಮದ ಯುವಕರ ಆರ್ಥಿಕ ಸಬಲೀಕರಣ, ಸಂವಿಧಾನ ಮತ್ತು ಬಸವಣ್ಣನ ಸಮಾನತೆ ಹೀಗೆ ವಿವಿಧ ವಿಷಯಗಳ ಬಗ್ಗೆ ಚಿಂತನೆಗಳು ನಡೆದವು.

4 ರಂದು ಅನುಭವ ಮಂಟಪ ಉದ್ಘಾಟನೆ ಶರಣರ ಮತ್ತು ಬಹುಜನ ಸಮಾಜದ ಮಹಾತ್ಮರ ಭಾವಚಿತ್ರದೊಂದಿಗೆ ಭವ್ಯ ಶೋಭಯಾತ್ರೆ ಮತ್ತು ಬಸವ ಸೃಷ್ಟಿ ಉದ್ಯಾನವನದಲ್ಲಿ ಬಸವಣ್ಣನವರ ಸಮತಾ ಮೂರ್ತಿ ಹಾಗೂ ಇಷ್ಟಲಿಂಗ ಧ್ಯಾನ ಮಂಟಪ, ಗ್ರಂಥಾಲಯ, ಸಂವಿಧಾನ ಪಾರ್ಕ್, ದಾಸೋಹ ಭವನ ಕಟ್ಟಡದ ಶಂಕು ಸ್ಥಾಪನೆ ನೆರವೇರಿತು.

ಮಹಾರಾಷ್ಟ್ರದ ಸಹಕಾರ ಮಂತ್ರಿ ಸನ್ಮಾನ್ಯ ಬಾಬಾಸಾಹೇಬ್ ಪಾಟೀಲ ಅವರಿಂದ ಬಸವ ಸೃಷ್ಟಿ ಉದ್ಯಾನವನದಲ್ಲಿ ಇಷ್ಟಲಿಂಗ ಕೇಂದ್ರದ ಶಂಖುಸ್ಥಾಪನೆ ನಡೆಯಿತು. ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣದ ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿಯವರು, ಮಾಜಿ ನಗರಸಭಾ ಅಧ್ಯಕ್ಷ ಅಭಯ ಮಿರಕಲೆ, ರಾಷ್ಟ್ರವಾದಿ ಕಾಂಗ್ರೆಸ್ ನ ಮಾಜಿ ಸಚಿವರಾದ ಶಿವಾನಂದ ಹೆಂಗಣೆ, ಡಾ. ಭೀಮರಾವ ಪಾಟೀಲ, ಡಾ. ಅಶೋಕ ನಗರಕರ್, ಎಸ್. ವಿ. ಸೇಟೆ, ಅವಿನಾಶ ಭೋಷಿಕರ್, ಬಿ. ಎಸ್. ಪಾಟೀಲ, ರಾಜು ಪಿಂಪ್ಳೆ, ನಿವೃತ್ತಿ ಕಾಂಬ್ಳೆ, ಅಶೋಕ ಸೋನ ಕಾಂಬ್ಳೆ, ಸುಶಿಲಾಬಾಯಿ ಪಾಟೀಲ, ಅಭಿಶೇಕ್ ದೇಶಮಾನೆ, ರಾಜಶೇಖರ ತಂಬಾಕೆ, ರಮಾಕಾಂತ ಪಾಟೀಲ, ಉಮಾಕಾಂತ ಪಾಟೀಲ, ಮನೋಜ ರಣದಿವೆಡಕರ್, ನರಸಿಂಹ ಮುಳೆ, ಎಮ್.ಕೆ. ಕಸ್ತೂರೆ, ಶಿವಲಿಂಗ ಗುಜರ, ಚಂದ್ರಪ್ಪ ಗುಂಗೆ, ವಿಲಾಸರಾವ ಲಾಡಗೆ, ಸೂರ್ಯಕಾಂತ ಕೋಕಟೆ, ಪ್ರೊ. ರಾಜೀವ ಲಾಡಗೆ, ರಮೇಶ ಲಾಡಗೆ, ಸುಶೀಲಾತಾಯಿ ತುಡಮೆ, ಅಂಕುಶ ಪಾಟೀಲ, ಅನಿಕೇತ ಪಾಟೀಲ, ರವಿ ಬಿರಾಜದಾರ, ಜಯಪ್ರಕಾಶ ಸದಾನಂದೆ, ಸಂಗಮೇಶ ತೋಗರಖೇಡ, ಲಕ್ಷ್ಮೀಬಾಯಿ ಪಾಟೀಲ, ಸಂಗ್ರಾಮ ಪಾಟೀಲ, ಪ್ರೊ. ವೆಂಕಟೇಶ ಪಾಟೀಲ, ಉಪಸ್ಥಿತರಿದ್ದರು.

ಶರಣ ಸಾಹಿತ್ಯ ಗ್ರಂಥಾಲಯ: ಮನೆಯನ್ನು ಅನುಭವ ಮಂಟಪವಾಗಿ ಪರಿವರ್ತಿಸಿದ ಡಾ. ಭೀಮರಾವ ಪಾಟೀಲ ಅವರು ಮಹಾರಾಷ್ಟ್ರದ ಮರಾಠಿ ಭಾಷಿಕರಿಗೆ ಶರಣ ಸಾಹಿತ್ಯ ಓದಲಿಕ್ಕೆ ಶರಣ ಸಾಹಿತ್ಯದ ಗ್ರಂಥಗಳನ್ನು ಸಂಗ್ರಹಿಸಿ ಅವಕಾಶ ಕಲ್ಪಿಸಿದ್ದಾರೆ. ಸಿಂದೂ ನಾಗರಿಕತೆಯ ವಸ್ತುಗಳನ್ನು ಕಲೆ ಹಾಕಿದ್ದಾರೆ. ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಕ್ಷೇತ್ರಗಳ ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಇದಲ್ಲದೆ ಸ್ವತಃ 100ಕ್ಕೂ ಹೆಚ್ಚು ಗ್ರಂಥವನ್ನು ಬರೆದಿದ್ದಾರೆ.

ಬಸವ ಸೃಷ್ಟಿ ಉದ್ಯಾನವನ: ಸುಂದರವಾದ ಮೋಘಾ ಕೆರೆಯ ದಡದ ತೀರದಲ್ಲಿ ಎರಡು ಎಕರೆ ಜಮೀನು ಖರಿದಿಸಿ ಅಲ್ಲಿ 1ಸಾವಿರ ಗಿಡಗಳನ್ನು ಈಗಾಗಲೇ ನೆಡಲಾಗಿದ್ದು ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ವಿವಿಧ ಶರಣರ ಸ್ಮಾರಕಗಳ ಕ್ರಿಯಾಯೋಜನೆಗಳು ಪ್ರಾರಂಭಗೊಂಡಿವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *