ಬಳ್ಳಾರಿ :
ಪೂಜ್ಯ ಮಾತೆ ಮಹಾದೇವಿ ಅವರ ಸಂಸ್ಮರಣೆ ಹಾಗೂ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ರಾಷ್ಟ್ರೀಯ ಬಸವದಳ ಹಾಗೂ ಕ್ರಾಂತಿಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸಹಯೋಗದಲ್ಲಿ ಸೋಮವಾರ ನಡೆಯಿತು.

ಬಸವ ಮಂಟಪದಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಆರೋಗ್ಯ ಕುರಿತು ಉಪನ್ಯಾಸವನ್ನು ತಜ್ಞ ವೈದ್ಯರಾದ ಡಾ. ರೇಣುಕಾ ಮಂಜುನಾಥ, ಡಾ. ಅರುಣಾ ಕಾಮಿನೇನಿ ಮತ್ತು ಡಾ. ವೀಣಾ ಅವರುಗಳ ನೇತೃತ್ವದಲ್ಲಿ ನಡೆಯಿತು.
ಸುಮಾರು 130 ಜನ ಮಹಿಳೆಯರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಸಂತಸಪಟ್ಟರು.

ಕ್ರಾಂತಿಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಎಲ್ಲಾ ಶರಣೆಯರು ಅತ್ಯಂತ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಿಬಿರವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
