ಮುಂಡರಗಿ
ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆಯನ್ನು ಈಚೆಗೆ ಮಾಡಲಾಯಿತು.
ಶ್ರೀ ಜಗದ್ಗುರು ತೋಂಟದಾರ್ಯ ಮಠದಲ್ಲಿ ಸೇರಿದ್ದ ಸಭೆಯಲ್ಲಿ ಅಧ್ಯಕ್ಷರಾಗಿ ವೀಣಾ ಹೇಮಂತಗೌಡ ಪಾಟೀಲ, ಉಪಾಧ್ಯಕ್ಷರಾಗಿ ಸುಕನ್ಯಾ ಎಸ್. ಕಬ್ಬುರಮಠ, ಶಿವಗಂಗಾ ನವಲಗುಂದ, ಕಾರ್ಯದರ್ಶಿಯಾಗಿ ಅನ್ನಪೂರ್ಣ ಸಜ್ಜನರ, ನೇತ್ರಾ ಹಾಲಗಿ, ಖಜಾಂಚಿಯಾಗಿ ಮಂಗಳಾ ಸಿರಿ, ಶಾಂತಾ ಕುಬಸದ ಆಯ್ಕೆಗೊಂಡರು.
ಸದಾದಸ್ಯರುಗಳಾಗಿ ಸೀತಾ ಬಸಾಪುರ, ಪಾರ್ವತಿ ಕುಬಸದ, ಗಂಗಾ ಕುಬಸದ, ಶೋಭಾ ಅಂಗಡಿ, ಮದುಮತಿ ಪಾರ್ವತಿಮಠ, ಉಮಾ ಕೊಪ್ಪಳ, ಗಾಯತ್ರಿ ಹೀರೇಮಠ, ದ್ರಾಕ್ಷಿಯಿಣಿ ಕಡ್ಡಿ, ಲತಾ ಲಿಂಬಿಕಾಯಿ, ಪುಷ್ಪ ಬೆಲ್ಲದ, ಅನ್ನಪೂರ್ಣ ಕುಬಸದ, ರತ್ನಕ್ಕ ಅಂಗಡಿ, ಸೀತಾ ಬಣಕಾರ, ಪ್ರತಿಭಾ ಹೊಸಮನಿ, ಜ್ಯೋತಿ ಹಾನಗಲ್, ಪ್ರಭಾವತಿ ಬೆಳವಟಿಗಿಮಠ ಅವರನ್ನು ನೇಮಿಸಲಾಯಿತು.

ಈ ಸಂದರ್ಭದಲ್ಲಿ ಜಾ.ಲಿಂ.ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಎಸ್. ಚಟ್ಟಿ, ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಶೆಟ್ಟರ, ಗದಗ ತಾಲೂಕಿನ ಗಿರಿಜಕ್ಕ ಹಸಬಿ, ಮುಂಡರಗಿ ತಾಲೂಕ ಘಟಕದ ಕೊಟ್ರೇಶ ಅಂಗಡಿ, ನೂತನ ಅಧ್ಯಕ್ಷೆ ವೀಣಾ ಪಾಟೀಲ ಅವರುಗಳು ಸಂಘಟನೆಯ ಧ್ಯೇಯೋದ್ದೇಶಗಳ ಕುರಿತು ಮಾತನಾಡಿದರು.
ಪಾಲಾಕ್ಷಿ ಗಣದಿನ್ನಿ, ಶಿವಯೋಗಿ ಗಡ್ಡದ, ಶಿವಯೋಗಿ ಕೊಪ್ಪಳ, ಈಶಣ್ಣ ಬೆಟಗೇರಿ, ಸದಾಶಿವಯ್ಯ, ಶಂಭುಲಿಂಗಯ್ಯ ಮುಂತಾದವರು ಉಪಸ್ಥಿತರಿದ್ದರು.