ವಚನ ವಿಜಯೋತ್ಸವ ಮಹಿಳಾ ಸಮಾವೇಶ
ಬೀದರ:
ವಿಶ್ವದ ಮೊದಲ ಮಹಿಳಾವಾದಿ ಬಸವಣ್ಣ ಎಂದು ಖ್ಯಾತ ವೈದ್ಯೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ವಿಜಯಲಕ್ಷ್ಮಿ ದೇಶಮಾನೆ ಹೇಳಿದರು.
ಅವರು ವಚನ ವಿಜಯೋತ್ಸವದ ಸ್ತ್ರೀಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಆಧ್ಯಾತ್ಮದ ಶಕ್ತಿಯಂದ ಮನಸ್ಸು ಗಟ್ಟಿಯಾಗಿಟ್ಟುಕೊಳ್ಳಲು ಸಾಧ್ಯ. ನಮ್ಮ ಎದುರಿಗಿರುವ ಅಕ್ಕನವರನ್ನು ಸ್ಪೂರ್ತಿಯಾಗಿ ಇಟ್ಟುಕೊಳ್ಳಿ. ಮಹಿಳಾ ಶಕ್ತಿ ರಾಷ್ಟ್ರದ ಶಕ್ತಿಯಾಗಬೇಕು ಎಂದರು.
ಚಿತ್ರದುರ್ಗದ ಬಸವತತ್ವ ಚಿಂತಕಿ ಡಿ. ಶಬ್ರಿನಾ ಅನುಭಾವ ನೀಡಿ, ಶತಮಾನಗಳಿಂದಲೂ ಕತ್ತಲಕೂಪದೊಳಗೆ ತಳ್ಳಿ, ಸ್ತ್ರೀ ಸ್ವಾತಂತ್ರಕ್ಕೆ ಅರ್ಹಳಲ್ಲ ಎಂಬುದಕ್ಕೆ ಜೋತು ಬಿದ್ದ ಸಮಯದಲ್ಲಿ, ಸಮಾಜದಲ್ಲಿ ಉದಯಿಸಿದ ಬಸವಣ್ಣ ತನ್ನ ವಿಚಾರ ಕ್ರಾತಿಯಿಂದ ಅಂಕುಡೊಂಕುಗಳನ್ನು ವಚನಗಳ ಮೂಲಕ ನೇರವಾಗಿ ಹೇಳುತ್ತಾರೆ. ಸ್ತ್ರೀ ಸಮಾನತೆಯನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಾ ಅದನ್ನು ಜಾರಿ ಮಾಡುತ್ತಾರೆ.

ಬಸವತತ್ವ ಬೆಳಕಿನಷ್ಠೆ ಸ್ಪಷ್ಟವಾಗಿದೆ. ಅದು ವಿಶ್ವಮಾನ್ಯತೆಗೆ ಸಂಬಂಧಿಸಿದ್ದಾಗಿದೆ. ಜಾತಿಗಳು ಮಾನವ ನಿರ್ಮಿತ ಅವು ದೇವರು ರಚಿಸಿದ್ದಲ್ಲ. ನಮ್ಮ ಮಕ್ಕಳಿಗೆ ಶರಣರ ತತ್ವಗಳ ಕುರಿತು ಅರಿವು ಮೂಡಿಸಿದಾಗ ಸದೃಢ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಪೂಜ್ಯ ಡಾ. ಗಂಗಾಂಬಿಕಾ ಅಕ್ಕ, ಜಗತ್ತಿನ ಎಲ್ಲಾ ಶಕ್ತಿಗಳಿಂತಲೂ ಮಹಿಳೆಯರಲ್ಲಿ ಸೃಷ್ಟಿಸುವ ಅದ್ಭುತ ಶಕ್ತಿಯಿದೆ. ಪ್ರತಿಯೊಂದರಲ್ಲೂ ಮಹಿಳೆ ಮುಂದೆ ಇದ್ದಾಳೆ. ಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಇತಿಹಾಸದಲ್ಲಿ ೩೬ಜನ ಶರಣೆಯರು ಏಕಕಾಲಕ್ಕೆ ಅನುಭವ ಮಂಟಪದ ಮೂಲಕ ವಚನ ಸಾಹಿತ್ಯ ರಚಿಸಿದ್ದು, ಕಲ್ಯಾಣ ಬಿಟ್ಟರೆ ಜಗತ್ತಿನ ಇತಿಹಾಸದಲ್ಲಿ ಎಲ್ಲಿಯೂ ಕಾಣಲಾಗದು ಎಂದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಮನದೀಪ ಕೌರ, ರೇಷ್ಮಾ ಕೌರ, ಮಹಾನಗರ ಪಾಲಿಕೆ ಸದಸ್ಯ ಲಕ್ಷ್ಮೀಬಾಯಿ ಹಂಗರಗಿ, ಮಾಜಿ ಜಿಪಂ ಅಧ್ಯಕ್ಷ ಪಂಡಿತ ಚಿದ್ರಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸುನೀತಾ ಸ್ವಾಮಿ, ಲೀಲಾವತಿ ನಿಂಬೂರೆ, ಸವಿತಾ ನಡಕಟ್ಟಿ, ಮಿನಾಕ್ಷಿ ಸಂಗ್ರಾಮ, ಕೆ.ಎಸ್. ಇನಾಮತಿ ಹುಬ್ಬಳ್ಳಿ, ಮಂಗಲಾ ಪಾಟೀಲ, ಶಕುಂತಲಾ ಬೆಲ್ದಾಳೆ, ನಿರ್ಮಲಾ ಶಿವಣಕರ್, ಜ್ಯೋತಿ ಪಾಟೀಲ ಕಲಬುರಗಿ, ಡಾ. ಶಾರದಾ ಗುದಗೆ, ಡಾ. ಆರತಿ ಕೃಷ್ಣಮೂರ್ತಿ, ಗಂಗಮ್ಮ ಸಾವಲೆ, ಭ್ರಮರಾ ಕೊಳ್ಳೂರು, ವಿಜಯಲಕ್ಷ್ಮಿ ಬಿರಾದಾರ ಸೇರಿದಂತೆ ಇತರರಿದ್ದರು.
ವಚನ ವರ್ಷಿಣಿ ಮಹಿಳಾ ತಂಡದವರು ಸಮೂಹ ಗೀತೆ ಹಾಡಿದರೆ, ಜ್ಷಾನದೇವಿ ಬಬಚೇಡೆ ಸ್ವಾಗತಿಸಿದರು. ಲಿಂಗಾರತಿ ನಾವದಗೇರೆ ನಿರೂಪಿಸಿದರು.
ಶರಣ ಸೇವಾ ಪುರಸ್ಕಾರ:
ಸ್ನೇಹಾ ಭೂಸನೂರ, ಇಂದುಮತಿತಾಯಿ ಚಿಟ್ಟಗುಪ್ಪಾ, ಸುಮಂಗಲಾ ಅಂಗಡಿ, ಮಲ್ಲಮ್ಮ ಆರ್. ಪಾಟೀಲ, ಉಷಾ ಕನ್ನಾಡೆ ಅವರಿಗೆ ಪ್ರದಾನ ಮಾಡಲಾಯಿತು.

ಶರಣ ಕಲಾ ವೈಭವ :
ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳಿಂದ ಶಿವಯೋಗಿ ಸಿದ್ಧರಾಮೇಶ್ವರ ನಾಟಕ ಅದ್ಬುತವಾಗಿ ಮೂಡಿ ಬಂತು. ಸಂಗ್ರಾಮ ಎಂಗಳೆ, ಸುವರ್ಣಾ ಚಿಮಕೋಡೆ, ಶಾಂತಾಬಾಯಿ ಬಿರಾದಾರ ಲಕ್ಷ್ಮಣ ಮೇತ್ರೆ ಉಪಸ್ಥಿತರಿದ್ದರು.
